ಅಖಿಲ ಭಾರತ ಜರ್ನಲಿಸ್ಟ್ ಫೆಡರೇಷನ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ ಹ ,ನೈಜ್ಯ ಸಾಮಾಜಿಕ ಹೋರಾಟಗಾರ ಶ್ರೀ ಶೇಖರ್ ಹವಂಜೆ ಅವರಿಗೆ ಸನ್ಮಾನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು

 

ಉಡುಪಿ

CHETAN KENDULI

ಶ್ರೀ ಶೇಖರ್ ಹಾವಂಜೆಯವರು ಉಡುಪಿ ಜಿಲ್ಲೆ ಹಾಗೂ ತಾಲೂಕಿನ ಉಡುಪಿ, ವಿಧಾನಸಭಾ ಕ್ಷೇತ್ರದ ಪುತ್ತೂರು ಗ್ರಾಮದ ದಿ| ಕುರುಂಬಿಲ.ತಿಮ್ಮು ದಂಪತಿಗಳ ಎರಡನೇ ಮಗನಾದ ದಿ.ದಾಸು ಹಾಗೂ ಹಾವಂಜೆ ಗ್ರಾಮದ ಮುತ್ತಕ್ಕ ದಂಪತಿಗಳ ಆರು ಗಂಡು ಒಂದು ಹೆಣ್ಣು ಮಕ್ಕಳಲ್ಲಿ ಎರಡನೇ ಮಗನಾಗಿ ಜನಿಸಿದ ಶೇಖರ್ ಹಾವಂಜೆ, ಇವರ ತಾಯಿ ಶ್ರೀಮತಿ ಮುತ್ತಕ್ಕರವರ ಹುಟ್ಟೂರಾದ ಹಾವಂಜೆ ಗ್ರಾಮದಲ್ಲಿ.ಇವರು ವಾಸವಾಗಿದ್ದಾರೆ. ಜನರೊಂದಿಗೆ ಬೆರೆತುಕೊಂಡಿದ್ದು ಸದಾ ಜನರ ಸಂಪರ್ಕಕ್ಕೆ ಲಭ್ಯವಿರುವ ವ್ಯಕ್ತಿ.ಶೇಖರ್ ಹಾವಂಜೆ ರವರು 10 ನೇ ಜನವರಿ 1975 ರಂದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ, ಆಗಿನ ಉಡುಪಿ ತಾಲೂಕಿನ ಹಾವಂಜೆ ಗ್ರಾಮದಲ್ಲಿ ಜನಿಸಿದರು. ಅವರು ಬೆಳ್ಳಂಪ್ಪಳ್ಳಿ ಗ್ರಾಮದ ಚಂದ್ರ,ನಳಿನಿ ದಂಪತಿಗಳ ಮಗಳಾದ ಸುಜಾತ ರವರನ್ನು 15/10/1998.ರಂದು ವಿವಾಹವಾದರು ಇವರಿಗೆ ಭರತ್ ಎಸ್.ಹಾಗು ಶರತ್ ಎಸ್ ಎಂಬ ಹೆಸರಿನ ಇಬ್ಬರು ಸುಂದರ ಗಂಡು ಮಕ್ಕಳು.ಶೇಖರ್ ಹಾವಂಜೆ ರವರು ಬ್ರಹ್ಮಾವರ ತಾಲೂಕಿನ ಹಾವಂಜೆ ಅನುದಾನಿತ ಶಾಲೆಯಲ್ಲಿ ಓದಿದ್ದು 10ನೇ ತರಗತಿಯನ್ನು ಖಾಸಗಿವಿಧ್ಯಾಸಂಸ್ಥೆಯಲ್ಲಿ ಓದಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು. ಶೇಖರ್ ಹಾವಂಜೆ ರವರು ಕಟೂ ಅಂಬೇಡ್ಕರ್ ವಾದಿ ಅಂಬೇಡ್ಕರ್, ಬುದ್ಧ,ಬಸವ, ಪೆರಿಯಾರ್, ನಾರಾಯಣಗುರು, ಫುಲೆ ದಂಪತಿ, ಕೃಷ್ಣ ರಾಜ ಒಡೆಯರ್, ಟಿಪ್ಪು ಸುಲ್ತಾನ್, ಮದರ್ ತೆರೆಸಾ, ಶಾಹು ಮಹಾರಾಜ್ ಇನ್ನೂ ಅನೇಕ ಸಮಾನತೆಗಾಗಿ ಹೋರಾಟ ಮಾಡಿದ ರಾಷ್ಟ್ರನಾಯಕರ ಅನುಯಾಯಿ.

ಬಾಬಸಾಹೇಬರ ಹಾಗೂ ಬುದ್ಧ ನಾರಾಯಣ ಗುರು ಇನ್ನಿತರ ಸಮಸಮಾಜ ನಿರ್ಮಾಣಕ್ಕೆ ಹೋರಾಡಿ ಇತಿಹಾಸ ಸೃಷ್ಟಿಸಿದವರ ವಿಚಾರಧಾರೆ ಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿದ್ದಾರೆ, ಅವರ ಸಹೋದರ.ಸೋದರರಿಗೆ ತನ್ನ ಸಮುದಾಯದ ದಲಿತ ಸಂಘಟನೆಗಳಿಂದಲೇ ದೌರ್ಜನ್ಯ ನಡೆದು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದು.ಶೇಖರ್ ಹಾವಂಜೆ ರವರ ಜೀವನದಲ್ಲಿ ಹೊಸ ತಿರುವು ಪಡೆದಿದ್ದುಈ ಒಂದು ಘಟನೆಯಿಂದಾಗಿ ಹೋರಾಟಗಾರನಾಗಿ, ಸಮಾಜ ಸೇವೆಯ ಭಾವನೆಯ ಬೀಜಗಳನ್ನು ಬಿತ್ತಿತು, ಆ ಘಟನೆ.ಅದು ಸಮಯ ಕಳೆದಂತೆ ಬಲವಾಗಿ ಬೆಳೆಯುತ್ತದೆ. ವಿವಿಧ ವಿಧಾನಗಳು ಮತ್ತು ಮಾಧ್ಯಮಗಳ ಮೂಲಕ ಅವರು ವಿವಿಧ ಸಾಮಾಜಿಕ ಅವಿದ್ಯಾವಂತರಿಗೆ, ತಮ್ಮ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದರು. ಧಾರ್ಮಿಕ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ, ದೀನದಲಿತರ, ಎಲ್ಲಾ ವರ್ಗದ ಬಡವರ,ಬಹುಜನರ ಬಗ್ಗೆ ಕಾಳಜಿ ವಹಿಸಿ.ಅವರ ಹಕ್ಕು ಮತ್ತು ಕರ್ತವ್ಯಗಳಬಗ್ಗೆ ಸದಾ ಎಚ್ಚರಿಕೆಯಿಂದಿರುವಂತೆ ಕಾರ್ಯಕ್ರಮ ಹಮ್ಮಿಕೊಳ್ಳುತಾ ಬರುತಿದ್ದಾರೆ.ಸಾಮಾಜಿಕ ಅಸಮಾನತೆಯ ವಿರುದ್ಧ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಸತತವಾಗಿ ಹೋರಾಟ ಮಾಡುವ ವ್ಯಕ್ತಿ. ಅನಿಷ್ಟ ಪದ್ದತಿಗಳ.ವಿರಧ್ದ ಸಿಡಿದೇಳುವ ಮನೋಭಾವ ಇವರದ್ದು.ಅನೇಕ ಜನಪರ ಹೋರಾಟಗಳಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು, ಜಾತಿ ತಾರತಮ್ಯ ಮತ್ತು ಅದು ಪೋಷಿಸಿದ ಬೇರೂರಿರುವ ಧೋರಣೆಗಳು, ಜಿಲ್ಲಾದ್ಯಂತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ,

 ಮರಳು ದಂಧೆ ಅಧಿಕಾರಿಗಳ ಅಧಿಕಾರ ದುರುಪಯೋಗ ಮತ್ತು ಪರಿಸರ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ಗೆ ಹಾನಿ ಹಾಗೂ ದುರುಪಯೋಗದ ವಿರುದ್ಧ ಹೋರಾಡುವವರು.ಉಡುಪಿ ಜಿಲ್ಲೆಯ ಕೆಲವು ದಲಿತರಿಗೆ ಸಿ ಆರ್ ಝಡ್ ನದಿಯಲ್ಲಿ ಮರಳು ಗಣಿಗಾರಿಕೆಗೆ ಪರವಾನಗಿ ಸಿಗಲು ಕಾರಣ ಕರ್ತರು,ಮೀನುಗಾರಿಕೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ವಿಶೇಷ ಘಟಕ ಯೋಜನೆಯಡಿ ಬೋಟ್ ನೀಡುವಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ.ಮುಂದೆ ದಲಿತರ ವಿಶೇಷ ಯೋಜನೆ ದುರುಪಯೋಗ ಆಗದಂತೆ ಅಧಿಕಾರಿಗಳು ಕಾರ್ಯಚರಿಸುವಂತ್ತೆ ಮಾಡಿದ ಹೆಗ್ಗಳಿಕೆ ಇವರದು.ಇವರ ಹೋರಾಟದ ಭಾವನೆಯಿಂದ.ನೂರಾರು ಹೋರಾಟಗಾರರನ್ನು ಸೃಷ್ಟಿ ಮಾಡಿ.ನಾಯಕತ್ವದ ಗುಣಗಳನ್ನು ಬೋಧಿಸಿ.ನಾಯಕತ್ವದ ಧೀಕ್ಷೆ ನೀಡಿದ ನೈಜ್ಯ ಹೋರಾಟಗಾರ.ನಕಲಿ ಪರಿಶಿಷ್ಟಜಾತಿ.ಪ ಪಂಗಡದ ಜಾತಿ ಪ್ರಮಾಣ ಪತ್ರದ ವಿರುದ್ಧ ಕಾನೂನು ಹೋರಾಟ. ಅಂತರ್ ಜಾತಿ ವಿವಾಹಗಳನ್ನು ಬೆಂಬಲಿಸುವ ಮೂಲಕ ಜನರನ್ನು ಒಗ್ಗೂಡಿಸುವ ಗುಣವುಳ್ಳ ನಾಯಕ. ಅಕ್ಷರ ಜ್ಞಾನ ಇಲ್ಲದ ಮುಗ್ಧ ಜನರಿಗೆ ಸಾದಾ ಬೆಂಬಲಿಸುವ ವ್ಯಕ್ತಿತ್ವ, ಸರ್ಕಾರಿ ದಾಖಲೆಗಳನ್ನು ಪಡೆಯಲು ಸಹಾಯ. ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯನ್ನು ದಲಿತ ಕುಟುಂಬಗಳಿಗೆ ತಲಾ ಒಂದೊಂದು ಎಕರೆ ಭೂಮಿ ಮಂಜೂರು ಮಾಡುವಂತೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ ದಲಿತರಿಗೆ ಮೀಸಲಿಟ್ಟ ಭೂಮಿಯನ್ನು ದಲಿತೇತರ ಶ್ರೀಮಂತರು ಮತ್ತು ಪ್ರಭಾವಿಗಳು ಕಬಳಿಸಿರುವುದನ್ನು ತೆರವುಗೊಳಿಸಲು ಹೋರಾಟನಡೆಸುತ್ತಿದ್ದಾರೆ. ದಲಿತರ ಹಕ್ಕುಗಳಿಗಾಗಿ ಯಶಸ್ವಿಯಾಗಿ ಹೋರಾಡಿದ ಪರಿಣಾಮವಾಗಿ ಅನೇಕ ದಲಿತ ಕುಟುಂಬಗಳಿಗೆ ಡಿಸಿ ಮನ್ನಾ ಭೂಮಿಯನ್ನು ಜಿಲ್ಲಾಡಳಿತ, ಸರ್ಕಾರವು ಕೆಲ ದಲಿತ ಕುಟುಂಬಗಳಿಗೆ.ನಿವೇಶನಗಳನ್ನು.ಕೃಷಿ ಭೂಮಿಯನ್ನು ಹಂಚಿದೆ.

 ಸಾರ್ವಜನಿಕ ಸೇವೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ, ಮೂಲಭೂತ ಹಕ್ಕುಗಳ, ಮಾನವ ಹಕ್ಕುಗಳ ಉಲ್ಲಂಘನೆ, ಬಗ್ಗೆ ಸಾರ್ವಜನಿಕ ಕಾಳಜಿ, ರಾಜಕೀಯ ಚರ್ಚೆ.ಇವರು ಸುಮಾರು 20 ವರ್ಷ ಗಳಿಂದಲೂ ನಿರಂತರವಾಗಿ ಸಾಮಾಜಿಕ ನ್ಯಾಯಯುತವಾಗಿ ಹೋರಾಟ ಮಾಡಿಕೊಂಡು ಬಂದಿದಲ್ಲದೆ, ಶ್ರೀಯುತರು ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರಿಸುವ ಭಾಗವಾಗಿ ತಮ್ಮದೇ ಆದ ಯುವಪಡೆಯನ್ನು ಕಟ್ಟಿಕೊಂಡು, ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಬಡವರ ಶ್ರೇಯೋಭಿವೃದ್ಧಿಗಾಗಿ ‘ದಲಿತ ಸಂಘರ್ಷ ಸಮಿತಿ (ಭೀಮವಾದ)” ಎಂಬ ರಾಜ್ಯಮಟ್ಟದ ಸಂಘಟನೆಯ ಉಡುಪಿ ಜಿಲ್ಲಾಮಟ್ಟದ ಸಮಿತಿಯನ್ನು ರಚಿಸಿಕೊಂಡು ಸಾಮಾಜಿಕವಾದ ಹಾಗೂ ಪ್ರಗತಿಪರವಾದ ಹೋರಾಟಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಇವರು ಜೈ ಭೀಮ್ ಎಂಬ ಯುಟ್ಯೂಬ್ ಚಾನಲ್ ಹೊಂದಿದ್ದಾರೆ.ಹಾಗು ಅನೇಕ ಪತ್ರಿಕೆಗಳ ವರದಿಗಾರರು ಆಗಿದ್ದಾರೆ ಹತ್ತಾರು ಸಂಘಟನೆಗಳಲ್ಲಿ ಪದಾಧಿಕಾರಿ, ಸದಸ್ಯರಾಗಿ.ಸೇವೆಸಲ್ಲಿಸುತ್ತಿದ್ದಾರೆ.ಇವರೊಬ್ಬ ವಾಸ್ತವದ ಹೋರಾಟಗಾರ ಶೇಖರ್ ಹಾವಂಜೆ.

ಇವರು ಅನೇಕ ಮನೆ ಇಲ್ಲದ ಕುಟುಂಬಗಳಿಗೆ ಹೋರಾಟದ ಮೂಲಕ ಸೂರು ಕಲ್ಪಿಸಿ ಕೊಟ್ಟಿದ್ದಾರೆ. ಅನೇಕ ವಿವಾದಿತ ವಿಷಯಗಳನ್ನು ಸಂಧಾನ ರೂಪದಲ್ಲಿ ಪರಿಹರಿಸಿದಲ್ಲದೇ ನೀರಿನ ಸಮಸ್ಯೆ, ದಾರಿದೀಪದ ಸಮಸ್ಯೆ, ಜಾಗದ ಸಮಸ್ಯೆ, ಅನಕ್ಷರಸ್ಥ ಬಡವರ ಭೂಮಿಯ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಟ್ಟಿರುವುದಲ್ಲದೇ, ಶೌಚಾಲಯ ಇಲ್ಲದ ಹಲವಾರು ಕುಟುಂಬಗಳಿಗೆ ಹೋರಾಟ ಮಾಡುವ ಮೂಲಕ ಶೌಚಾಲಯ ದೊರಕಿಸಿಕೊಟ್ಟಿದ್ದಾರೆ. ಅನೇಕ ಭ್ರಷ್ಟ ಅಧಿಕಾರಿಗಳನ್ನು ಇಲಾಖಾ ವಿಚಾರಣೆ ಮಾಡಿಸುವ ವರೆಗು ಬಿಡದೆ ಹೋರಾಟ ಮಾಡಿರುವಂತದ್ದು.ಅನೇಕ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಗ ರಾಜಧಾನಿ ಬೆಂಗಳೂರು ವಿಧಾನ ಸೌಧದ ವರೆಗೂ ಡಾಕ್ಟರ್ ಆರ್ ಮೋಹನ್ ರಾಜ್ ರವರ ನೇತೃತ್ವದಲ್ಲಿ ಅನೇಕ ಬಾರಿ ಧರಣಿ ಸತ್ಯಾಗ್ರಹ ನಡೆಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಟ್ಟಿತು ಇವರ ನೇತೃತ್ವದ ತಂಡ.ಅಕ್ರಮ ಜೆಲ್ಲಿ ಕ್ರಷರ್ ಗಳ ಬಗ್ಗೆ ನಿರಂತರವಾಗಿ ಕಾನೂನು ಹೋರಾಟ ಮಾಡಿ ಕೊನೆಗೂ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಸೋರಿಕೆ ಆಗುವುದನ್ನು ತಡೆದು ಅಕ್ರಮ ಜೆಲ್ಲಿ ಕ್ರಷರ್ ಗಳಿಗೆ ಅಧಿಕೃತವಾಗಿ ಪರವಾನಿಗೆ ನೀಡಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ರಾಜಧನ ಪಾವತಿಸುವಂತೆ ಮಾಡಿರುವುದು ಹೆಮ್ಮೆಯ ವಿಷಯ. ಗ್ರಾಮ ಪಂಚಾಯತಿನಲ್ಲಿ ಬಡವರಿಗೆ ಸಿಗುವ ಸೌಲಭ್ಯಗಳನ್ನು ಹಂಚಿಕೆ ಮಾಡದೇ ಇರುವವರ ವಿರುದ್ಧ ಹೋರಾಟ ಮಾಡಿದ್ದು, ಹಲವಾರು ಕಟ್ಟಡ ಕಾರ್ಮಿಕರನ್ನು ಜಿಲ್ಲಾ ಕಾರ್ಮಿಕ ಸಂಘದಲ್ಲಿ ನೊಂದಾಯಿಸಿ, ಅವರ ಕುಟುಂಬಕ್ಕೆ ಸ್ಕಾಲರ್‌ಶಿಫ್, ಇನ್ನಿತರ ಪಿಂಚಣಿ ಸಿಗುವಂತೆ ಮಾಡಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿಯ ಅಕ್ರಮ ಕಪ್ಪೆಚಿಪ್ಪು ದಂಧೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ, ಅಕ್ರಮ ಕಪ್ಪು ಕಲ್ಲು, ಕೆಂಪು ಕಲ್ಲು, ಮರಳು, ಇನ್ನಿತರ ಖನಿಜ ಸಂಪತ್ತು ಲೂಟಿ ಮಾಡುವವರ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ, ಅರಣ್ಯ ಇಲಾಖೆಯ ಅನೇಕ ಲೋಪದೋಷಗಳನ್ನು ಸಾರ್ವಜನಿಕರಿಗೆ ತಿಳಿಯುವಂತ್ತೆ ಮಾಡಿದ್ದಾರೆ.ಜಿಲ್ಲೆಯಲ್ಲಿ ಅನೇಕ ಸೂರಿಲ್ಲದ ಬಡವರಿಗೆ ಹೋರಾಟದ ಮೂಲಕ ಸೂರು ಕಲ್ಪಿಸಿದ್ದಾರೆ.ಅನೇಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಅತ್ಯಾಚಾರಕ್ಕೊಳಗಾದ ಅದೆಷ್ಟೋ ಹೆಣ್ಣುಮಕ್ಕಳಿಗೆ ಮತ್ತು ಕುಟುಂಬಸ್ಥರಿಗೆ ನ್ಯಾಯದೊಂದಿಗೆ.ತುರ್ತಾಗಿ ಸರಕಾರದಿಂದ ಪರಿಹಾರ ಸಿಗುವಂತೆ ಮಾಡಿದ್ದಾರೆ,

ಪ್ರಕೃತಿಯ ವಿರೋಧಿಗಳಿಗೆ,ಅಕ್ರಮ ದಂಧೆ ಕೋರರಿಗೆ.ಇಸ್ಪೀಟ್, ವೇಶ್ಯಾವಾಟಿಕೆ,ಓಸಿ, ಕೋಳಿ ಅಂಕ ಇನ್ನಿತರ ಕಾನೂನು ಬಾಹಿರವಾಗಿ ನಡೆಯುವ ಚಟುವಟಿಕೆಗಳ ವಿರುದ್ಧ ನಿರಂತರವಾಗಿ ಹೋರಾಟದ ಮೂಲಕ ಪೋಲೀಸ್ ಇಲಾಖೆ, ಅಧಿಕಾರಿಗಳನ್ನು ಸದಾ ಎಚ್ಚರಿಕೆಯಿಂದಿರುವಂತೆ ಮಾಡುತ್ತಾರೆ.ಕಳೆದ ಬಾರಿಯ.ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೂ ಪ್ರಕಾಶ್ ಅಂಬೇಡ್ಕರ್ ರವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ.ಇನ್ನೂ ಇವರ ಹೋರಾಟ, ಸಮಾಜಮುಖಿ ಕಾರ್ಯಕ್ರಮಗಳನ್ನು ಹೇಳುತ್ತಾ ಹೋದರೆ.ಈ ಪುಟಗಳೇ ಸಾಲದು.ಕೇವಲ ಸ್ವಂತ ಬಲ ಹಾಗೂ ಸಂಘಟನೆಯ ಬಲದಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ದೀನ ದಲಿತರಿಗೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆರವಾದ ಇವರು, ಒಂದುವೇಳೆ ಸಂವಿಧಾನತ್ಮಕವಾಗಿ ರಾಜಕೀಯ ಬಲವಿದ್ದರೆ ಇನ್ನೆಷ್ಟು ಬಡವರಿಗೆ ನೆರವಾಗಬಲ್ಲರು ನೀವೆ ಊಹಿಸಿ.

Be the first to comment

Leave a Reply

Your email address will not be published.


*