ಜಿಲ್ಲಾ ಸುದ್ದಿಗಳು
ಶಿರಸಿ
ಶಿರಸಿ ನಗರದಲ್ಲಿ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದ್ದು, ಕೆಲ ಇಲಾಖೆಗಳು ಮಾತ್ರ ಇನ್ನೂ ಎಚ್ಚೆತ್ತ ಲಕ್ಷಣ ಕಾಣುತ್ತಿಲ್ಲ. ರಸ್ತೆ ವಿಸ್ತರಣೆ ನಡೆಯುತ್ತಿದ್ದರೂ ಸಹ, ಇನ್ನೂ ರಸ್ತೆಗೆ ಅಡ್ಡಲಾಗಿರುವ ವಿದ್ಯುತ್ ಕಂಭಗಳನ್ನು ಸರಿಸುವ ಕೆಲಸಕ್ಕೆ ಇಲಾಖೆ ಕೈ ಹಾಕದೇ ಕೂತಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿದೆ.ರಸ್ತೆ ಕಾಮಗಾರಿಗೆ ಅಡ್ಡಲಾಗಿರುವ ವಿದ್ಯುತ್ ಕಂಬಗಳು ಅಪಾಯಕಾರಿ ಹಂತದಲ್ಲಿವೆ. ಕಂಬದ ಸಮೀಪದ ಮಣ್ಣುಗಳನ್ನು ತೆರವುಗೊಳಿಸಿದರೆ ಕಂಭ ನೆಲಕ್ಕುರುಳುವ ಸಾಧ್ಯತೆಯೂ ಇದೆ. ಅಲ್ಲದೇ ಕಾಮಗಾರಿ ವಿಳಂಬವೂ ಆಗುತ್ತಲಿದೆ.
ವಿದ್ಯುತ್ ಕಂಬಗಳು ಇದೇ ಪ್ರಕಾರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ, ನೆಲಕ್ಕುರುಳಿದರೆ ಅದರಿಂದ ಸಾರ್ವಜನಿಕರಿಗೆ ಆಗಬಹುದಾದ ಅಪಘಾತಕ್ಕೆ ಹೊಣೆ ಹೊತ್ತುಕೊಳ್ಳುವ ಇಲಾಖೆ ಯಾವುದು? ಜನರಿಗೆ ಅಪಾಯ ಉಂಟಾಗುವ ಮೊದಲು, ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಶಿರಸಿಯಲ್ಲಿ ಮೈಗಳ್ಳ ಇಲಾಖೆಗಳಿಗೆ ಅಂತಹದ್ದೇನೂ ಕೊರತೆ ಇಲ್ಲವಾಗಿದ್ದು, ನಗರಸಭೆ, ಶಿರಸಿ ತಹಶೀಲ್ದಾರರು, ತಾಲೂಕಾ ಆಡಳಿತ ಹಾಗೂ ಸಚಿವರು ಇನ್ನಾದರೂ ಎಚ್ಚೆತ್ತು ತಕ್ಷಣ ಕ್ರಮ ಕೈಗೊಳ್ಳಬೇಕಿದೆ.ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಲಾಗದವರು, ಅನಗತ್ಯವಾಗಿ ಕುರ್ಚಿಗಂಟಿ ಕುಳ್ಳುವ ಬದಲು, ಮನೆಯಲ್ಲಿ ನಿದ್ರೆ ಮಾಡುವುದು ಜನರ ಅನುಕೂಲಕ್ಕೆ ಅನುವು ಮಾಡಿಕೊಡಲಿದೆ.
Be the first to comment