ಕೊರಗ ಕಾಲೋನಿಗೆ ಕುಂದಾಪುರ ವಕೀಲರ ಸಂಘದ ನ್ಯಾಯವಾದಿಗಳ ಬೇಟಿ

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕೋಟ

ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಗೆ ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷರು, ಲಯನ್ಸ್ ಕ್ಲಬ್ ವಲಯಾದ್ಯಕ್ಷರಾದ ಸೋಮನಾಥ ಹೆಗ್ಡೆ ಮತ್ತು ಕೋಟ ಸಿ.ಎ ಬ್ಯಾಂಕ್‌ನ ಮಾಜಿ ಅಧ್ಯಕ್ಷರು, ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ ಇದರ ಅಧ್ಯಕ್ಷರಾದ ಕೊತ್ತಾಡಿ ಕತ್ತಾಡಿ ಉದಯ್ ಕುಮಾರ್ ಶೆಟ್ಟಿ ಭೇಟಿ ನೀಡಿದರು.

CHETAN KENDULI

ಇತ್ತೀಚೆಗೆ ಪೊಲೀಸರಿಂದ ಹಲ್ಲೆಗೊಳಗಾದ ಕೊರಗ ಸಮುದಾಯದವರನ್ನು ಸಾಂತ್ವನ ಗೊಳಿಸಿದ ಅವರು “ಕೊರಗ ಸಮುದಾಯದ ಮೇಲಿನ ಹಲ್ಲೆ ಖಂಡನಿಯ. ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಕೊರಗ ಸಮುದಾಯದ ಜನರು ನಂಬಿಕಸ್ಥರು, ಮುಗ್ಧರು, ಸಮಾಜದ ಮುಖ್ಯವಾಹಿನಿಗೆ ಇನ್ನು ಕೂಡ ಬಂದಿಲ್ಲ. ಅಂತವರಿಗೆ ಎರಡು ರೀತಿಯಲ್ಲಿ ಅನ್ಯಾಯವಾಗಿದೆ. ಒಂದನೇಯದಾಗಿ ಅಮಾಯಕರ ಮೇಲೆ ಹಲ್ಲೆ, ಎರಡನೇದಾಗಿ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದರು. ಈ ಹಂತದಲ್ಲಿ ಸಮುದಾನದವರು ಯಾವುದೇ ಧೃತಿಗೆಡುವ ಅಗತ್ಯವಿಲ್ಲ. ಸಮಾಜ ತನ್ನೊಂದಿಗಿದೆ. ಈಗಾಗಲೇ ಗೃಹ ಸಚಿವರು ತಮಗೆ ನ್ಯಾಯ ದೊರಕಿಸುವ ವಿಶ್ವಾಸವನ್ನು ನೀಡಿದ್ದಾರೆ. ಅಗತ್ಯವಿದ್ದಲ್ಲಿ ಕಾನೂನಿನ ಸಂಪೂರ್ಣ ನೆರವನ್ನು ನೀಡುವುದಾಗಿ ಇಬ್ಬರು ನ್ಯಾಯವಾದಿಗಳು ಭರವಸೆ ನೀಡಿದರು.ಈ ಸಂದರ್ಭ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಅನ್ಯಾಯಕ್ಕೊಳಗಾದ ಯುವಕ ರಾಜೇಶ್ ಹಾಗೂ ದಲಿತ ಮುಖಂಡರುಗಳಾದ ಗಣೇಶ್ ಕುಂಬಾಸಿ, ಗಣೇಶ್ ಬಾರ್ಕೊರು ಮುಂತಾದವರು ಹಾಜರಿದ್ದರು.

Be the first to comment

Leave a Reply

Your email address will not be published.


*