ಸ್ವಚ್ಛತಾ ಆಂದೋಲಗಳನ್ನು ಹಮ್ಮಿಕೊಳ್ಳುವುದು ಸುಲಭ ಅದನ್ನು ನಿರಂತರವಾಗಿಸುವುದು ದೊಡ್ಡ ಸಾಧನೆ- ಆನಂದ್ ಸಿ ಕುಂದರ್..!

ವರದಿ : ಇಬ್ರಾಹಿಂ ಕೋಟ ಕುಂದಾಪುರ

ರಾಜ್ಯ ಸುದ್ದಿಗಳು

ಕೋಟ

ಒಂದು ಆಂದೋಲ ಪ್ರಾರಂಭ ಮಾಡುವುದುಸುಲಭ ಆದರೆ ಅದನ್ನು ನಿರಂತರವಾಗಿಸುವುದು ದೊಡ್ಡ ಸಾಧನೆ ಈ ನಿಟ್ಟಿನಲ್ಲಿ ಪಂಚವರ್ಣ ಯುವಕ ಮಂಡಲ ಸೇರಿದಂತೆ ಎಲ್ಲಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ.
ಪಂಚವರ್ಣ ಯುವಕ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲಗಿಳಿಯಾರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಮಣೂರು, ಯಕ್ಷಸೌರಭ ಕಲಾರಂಗ ಕೋಟ, ಮಹಿಳಾ ಬಳಗ ಹಂದಟ್ಟು ಇವರುಗಳ ಸಂಯೋಜನೆಯಲ್ಲಿ ಲಕ್ಷ್ಮಿ_ಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಕೋಟ ಪಡುಕರೆ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಗ್ರಾಮ ಪಂಚಾಯತ್, ಕ್ಲಿನ್ ಕುಂದಾಪುರ ಪ್ರೊಜೆಕ್ಟ್ , ಪರಿಸರ ಸ್ನೇಹಿ ಬಳಗ ಮಟ್ನ ಕಟ್ಟೆ ಕೆರ್ಗಾಲ್ ಉಪ್ಪುಂದ, ಕ್ಲಿನ್ ತ್ರಾಸಿ ಪೊಜೆಕ್ಟ್ ಮರವಂತೆ, ಸ್ವಚ್ಛತಾ ಮಾಸತಂಡ ಮರವಂತೆ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮಣೂರು ಮೂಲಕ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಸುಮಾರು 3ವರೆ ಕಿಮೀ ದೂರ ಹಮ್ಮಿಕೊಂಡ ನೂರನೇ ದಿನದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಬೃಹತ್ ಸ್ವಚ್ಛತಾ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಉಳಿಸುವ ಉದ್ದೇಶ ಅತ್ಯವಶ್ಯಕ, ಏಕೆಂದರೆ ನಮ್ಮ ನಮ್ಮ ಮನೆಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ನಿಂದ ಈ ಪರಿಸರಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಜ್ಞಾವಂತ
ನಾಗರಿಕರ ಸೇವಾ ಕಾರ್ಯ ಬಹುದೊಡ್ಡದು ಇದರ ಜೊತೆಗೆ ಆಯಾ ಭಾಗಗಳ ಪಂಚಾಯತ್‌ಗಳಲ್ಲಿ ಆರಂಭಗೊಳ್ಳುತ್ತಿರುವ ಎಸ್‌ಎಲ್‌ಆರ್‌ಎಮ್ ಘಟಕಗಳ ಪಾತ್ರ ಕೂಡ ಗಣನೀಯವಾದದ್ದು ಈ ಮೂಲಕ ಪರಿಸರ ಜಾಗೃತಿಮೂಡಿಸುವ ಕಾರ್ಯಕ್ರಮಗಳನ್ನುಸ್ಥಳೀಯಾಡಳಿತ ಹಾಗೂ ಸಂಘ ಸಂಸ್ಥೆಗಳು ಹಮ್ಮಿಕೊಂಡರೆ ನಮ್ಮೆಲ್ಲರ ಉದ್ದೇಶಗಳು ಈಡೇರಿದಂತೆ ಅದರ ಜೊತೆಗೆ ಮೂರು ವಾರಗಳ ಪರಿಸರ ಜಾಗೃತಿ
ಕಾರ್ಯಕ್ರಮ ಇನ್ನಷ್ಟು ಸಂಘಟನೆಗಳ ಮೂಲಕ ಆಯಾ
ಭಾಗಗಳಲ್ಲಿ ಹೊರಹೊಮ್ಮಲಿ ಎಂದು ಹಾರೈಸಿದರು.
ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತವಿಕ ನುಡಿಯನ್ನಾಡಿ ಮಣೂರು ರಾಷ್ಟ್ರೀಯ ಹೆದ್ದಾರಿ ಯಿಂದ ಕೋಟ ಪರಿಸರದ ವರೆಗೆ ಸ್ವಚ್ಛತಾ ಅಭಿಯಾನವು 10 ವರ್ಷ ಹಿಂದಿನ ನಮ್ಮ ಕನಸಾಗಿದೆ. ಈ ಕನಸು ಇಂದು ನಮ್ಮಿಂದ ಹಾಗೂ ಎಲ್ಲಾ ಸಂಘಟನೆಯಿಂದ ಈಡೇರಿದೆ ಎಂದು ಬಾವಿಸುತ್ತೇನೆ.
ಗೀತಾನಂದ ಟ್ರಸ್ಟ್ ನ ಪ್ರವರ್ತಕರಾದ ಆನಂದ್ ಸಿ ಕುಂದರ್ ಅವರ ಮಾರ್ಗ ದರ್ಶನದಲ್ಲಿ ನಮಗೆ ಸಹಸ್ರಾರು ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ ಯೋಜನೆಗೆ ಕೈಜೋಡಿಸಿ ಕೊಂಡೆವು. ಅವರು ನೀಡಿದ ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿ ಬದಿ, ಎಪಿಎಂಸಿ ವಠಾರ, ವರ್ಣ ತೀರ್ಥ ಕೆರೆದಂಡೆ ಬದಿ ಗಿಡಗಳನ್ನು ನೆಟ್ಟು ನೀರು ಹಾಕಿ ಹಾರೈಕೆ ಮಾಡುತ್ತಿದ್ದೇವೆ.
ಬೀಚಿನಲ್ಲಿ ಪ್ಲಾಸ್ಟಿಕ್ ಮುಕ್ತ ಚಿಂತನೆಯಲ್ಲಿ ಕ್ಲಿನ್ ಕುಂದಾಪುರ ತಂಡದವರು ತುಂಬಾ ಸಹಕಾರ ನೀಡಿದ್ದಾರೆ. ಅಲ್ಲದೆ ಸ್ಥಳೀಯ ಸಂಘ ಸಂಸ್ಥೆಗಳು ನಮ್ಮ ಜೊತೆಗೆ ಕೈ ಜೋಡಿಸಿ ತುಂಬು ಹೃದಯದ ಸಹಕಾರ ನೀಡಿದೆ. ಇದರೊಂದಿಗೆ ನಾವು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಸ್ವಚ್ಛತಾ ಕಾರ್ಯದ ಜೊತೆಗೆ ಅರಿವು ಮೂಡಿಸುವ ಕಾರ್ಯವನ್ನು ಸಹ ಮಾಡುತ್ತಿದ್ದೇವೆ ಎಂದು ರವೀಂದ್ರ ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪರಿಸರ ಉಳಿಸಿ ಆಂದೋಲನದ ಭಾಗವಾಗಿ ಪರಿಸರ ತಜ್ಞ ಡಾ. ಬಾಲಕೃಷ್ಣ ಮುದ್ರೋಡಿ ಮಾತನಾಡಿ ನಮ್ಮ ವ್ಯವಸ್ಥೆ ಹೇಗೆ ಎಂದರೆ ನಾವು ಹಿಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಮರಗಳನ್ನು ಕಂಡಿದ್ದೇವೆ ಅದರಿಂದ ಲಾಭಗಳನ್ನು ಪಡೆದಿದ್ದೇವೆ ಆದರೆ ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳನ್ನು ನಾಶಮಾಡಲಾಗಿದೆ. ಆದರೆ ಸರಕಾರದ ಸುತ್ತೊಲೆ ಪ್ರಕಾರ ಒಂದು ಮರ ಹಾನಿಗೊಳಿಸಿದರೆ ನಾಲ್ಕು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ, ಆದರೆ ಆ ಕೆಲಸ ನಮ್ಮ ಈ ವ್ಯವಸ್ಥೆ ಮಾಡಲಿಲ್ಲ ಬದಲಾಗಿ ಇವತ್ತು ನಾವುಗಳು
ನಮ್ಮ ಪ್ರಕೃತಿಯನ್ನು ಬಲಿಕೊಟ್ಟಿದ್ದೇವೆ. ಅದರಿಂದ
ದುಷ್ಪರಿಣಾಮ ಎದುರಿಸುತ್ತಿದ್ದೇವೆ ಇದಕ್ಕೆ ನಾವುಗಳೆ ಕಾರಣ ನಮ್ಮ ಪರಿಸರ ಉಳಿಸಿಕೊಳ್ಳವ ಜವಾಬ್ದಾರಿ ನಮ್ಮೆಲರ ಮೇಲಿದೆ ಹೊರತು ಹೊರಗಿನ ವ್ಯವಸ್ಥೆ
ಸೃಷ್ಟಿಸುವವರ ಮೇಲಿಲ್ಲ, ನಮ್ಮಲ್ಲಿ ಪ್ರತಿಭಟನಾ ಮನೋಭಾವನೆ ಅಳಿಸಿ ಹೋಗುತ್ತಿವೆ ಇದು ಆಗಬಾರದು ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಿಸುವ ಕೆಲಸ ಈ ಪಂಚವರ್ಣ ಯುವಕ ಮಂಡಲ ಹಾಗೂ ಇನ್ನಿತರ ಸಂಘಟನೆಗಳಂತೆ ಆಗಬೇಕು ಎಂದು ಕರೆ ಇತ್ತರು.
ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು, ವಿಪ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಮಣೂರು, ಯಕ್ಷಸೌರಭ ಕಲಾರಂಗ
ಕೋಟ, ಮಹಿಳಾ ಬಳಗ ಹಂದಟ್ಟು ಇವರುಗಳ ಸಂಯೋಜನೆಯಲ್ಲಿ ಲಕ್ಷ್ಮಿಮ ಬಂಗೇರ ಸರಕಾರಿ
ಪ್ರಥಮದರ್ಜೆ ಕಾಲೇಜು ಕೋಟ ಪಡುಕರೆ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಗ್ರಾಮಪಂಚಾಯತ್, ಕ್ಲಿನ್ ಕುಂದಾಪುರ ಪ್ರೊಜೆಕ್ಟ್ , ಪರಿಸರಸ್ನೇಹಿ ಬಳಗ ಮಟ್ನಕಟ್ಟೆ ಕೆರ್ಗಾಲ್ ಉಪ್ಪುಂದ, ಕ್ಲಿನ್ ತ್ರಾಸಿ ಪ್ರೊಜೆಕ್ಟ್ ಮರವಂತೆ, ಸ್ವಚ್ಛತಾ ಮಾಸತಂಡ ಮರವಂತೆ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮಣೂರು ಮೂಲಕ ಕೋಟ ಹಿರೇಮಹಾಲಿಂಗೇಶ್ವರ
ದೇವಸ್ಥಾನದ ವರೆಗೆ ಸುಮಾರು 3ವರೆ ಕಿಮೀ ದೂರ ಹಮ್ಮಿಕೊಂಡ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಬಾಬು ಎಂ. ಅವರು ಚಾಲನೆ ನೀಡಿದರು.

ವಿಶೇಷತೆ
ಇದೇ ಮೊದಲ ಬಾರಿ ಎಂಬಂತೆ ಕೊಟ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 3.ವರೆ ಕಿಮೀ ಯಷ್ಟು ದೂರ ಕ್ರಮಿಸಿ ಎರಡು ದಿಕ್ಕುಗಳ ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತ ಪರಿಸರವಾಗಿಸಿದೆ. ಅಲ್ಲದೆ ದೂರದ ತಾಲೂಕು ಬೈಂದೂರಿನ ಉಪ್ಪುಂದದ ಮಟ್ನಕಟ್ಟೆ ಪರಿಸರಸ್ನೇಹಿ ಬಳಗ, ಕ್ಲಿನ್ ತ್ರಾಸಿ ಪ್ರೊಜೆಕ್ಟ್ ಸ್ವಚ್ಛತಾ ಮಾಸ ತಂಡ
ಮರವಂತೆ, ಕ್ಲಿನ್ ಕುಂದಾಪುರ ಪಾಲ್ಗೊಂಡಿದ್ದು ಸ್ವಚ್ಛತಾ ಅಭಿಯಾನಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಿತು.
*ಎನ್‌ಎಸ್‌ಎಸ್ ವಿದ್ಯಾರ್ಥಿ ಪಾಲ್ಗೊಳ್ಳುವಿಕೆ*
ಇಲ್ಲಿನ ಸ್ಥಳೀಯ ಕೋಟ ಪಡುಕರೆ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕದ ನೂರಕ್ಕೂ ಅಧಿಕ ವಿದ್ಯಾರ್ಥಿ ಪಾಲ್ಗೊಂಡು ತಾವು ಪರಿಸರ ಉಳಿಸಲು ಸೈ ಎನ್ನಿಸಿಕೊಂಡರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಂಗಳೂರಿನ ಪರಿಸರ
ಪ್ರೇಮಿ ಜೀತ್ ಮಿಲನ್ ರೋಶ್, ಹಾಗೂ ವಿನಯಚಂದ್ರ ಸಾಸ್ತಾನ,
ಪಾಲ್ಗೊಂಡು ಪರಿಸರ ಜಾಗೃತಿಯ ಬಗ್ಗೆ ಮುಂದಿನ ತಲೆಮಾರು ಎಂಬ ವಿಷಯದ ಬಗ್ಗೆ ಉಲ್ಲೇಖಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುರೇಂದ್ರ ಕೋಟ ನಿರ್ಮಾಣದ ಮನಸ್ಸು ಕಸ ಎಂಬ ಕಿರುಚಿತ್ರವನ್ನು ಆನಂದ್ ಸಿ ಕುಂದರ್ ಅವರು ಅನಾವರಣಗೊಳಿಸಿದರು. ಕೋಟದ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ರೋಟರಿ ಕ್ಲಬ್ ಕೋಟ
ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಸಂಘದ ಅಧ್ಯಕ್ಷ ಅಮ್ಮತ್ ಜೋಗಿ, ಸ್ಥಾಪಕಾಧ್ಯಕ್ಷ ಕೆ.ಸುರೇಶ್ ಗಾಣಿಗ, ಮಣೂರು
ಫ್ರೆಂಡ್ಸ್ ನ ಅಧ್ಯಕ್ಷ ದಿನೇಶ್ ಆಚಾರ್ಯ, ವಿಪ್ತ ಮಹಿಳಾ ಬಳಗದ ಭಾರತಿ ಮಯ್ಯ, ಹಂದಟ್ಟು ಮಹಿಳಾ ಬಳಗದ
ಅಧ್ಯಕ್ಷೆ ಪುಷ್ಮಾ ಕೆ ಹಂದಟ್ಟು, ಕೋಟ ಯಕ್ಷಸೌರಭ
ಕಲಾರಂಗದ ಸತ್ಯನಾರಾಯಣ ಆಚಾರ್ಯ , ಕ್ಲಿನ್ ಕುಂದಾಪುರ ಪ್ರೊಜೆಕ್ಟ್ ಇದರ ಭರತ್ ಬಂಗೇರ, ಕ್ಲಿನ್ ತ್ರಾಸಿ ಪ್ರೊಜೆಕ್ಟ್ ಇದರ ನಾಗರಾಜ್ ಆಚಾರ್ಯ ನಾಯಕನವಾಡಿ, ಸ್ವಚ್ಛತಾ ಮಾಸತಂಡ ಮರವಂತೆ ಇದರ ಕರುಣಾಕರ ಆರ್ ಮರವಂತೆ, ಲಕ್ಶ್ಮೀ ಸೋಮ ಬಂಗೇರ ಕಾಲೇಜ್ ಪ್ರಾಂಶುಪಾಲರಾದ ನಿತ್ಯಾನಂದ ಗಾಂವ್ಕರ್, ನಾಗರಾಜ್ ಖಾರ್ವಿ, ಜನತಾ ಫಿಶ್ ಮೀಲ್ ಅಂಡ್ ಆಯಿಲ್ ಪ್ರಾಡಕ್ಟ್ ಮ್ಯಾನೇಜರ್ ಶ್ರೀನಿವಾಸ ಕುಂದ‌ರ್ ಗೀತಾನಂದ ಫೌಂಡೇಶನ್ ಸಮಾಜಸೇವಾ ವಿಭಾಗದ ರವಿಕಿರಣ್ ಕೋಟ ಹಾಗೂ ಕೋಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಗಳ ಉಪಾಧ್ಯಕ್ಷರು, ಸದಸ್ಯರು
ಉಪಸ್ಥಿತರಿದ್ದರು.
ಪಂಚವರ್ಣದ ಗೌರವಸಲಹೆಗಾರ
ಚಂದ್ರ ಆಚಾರ್ಯ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉಪನ್ಯಾಸಕ ಕೆ.ರಾಘವೇಂದ್ರ ತುಂಗ ನಿರೂಪಿಸಿದರು.
ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ ವಂದಿಸಿದರು.
ಪಂಚವರ್ಣದ ಸಂಚಾಲಕ ಆಜಿತ್
ಆಚಾರ್ಯ ಸಹಕರಿಸಿದರು.

CHETAN KENDULI

Be the first to comment

Leave a Reply

Your email address will not be published.


*