ಜಿಲ್ಲಾ ಸುದ್ದಿಗಳು
ಕೊಟ್ಟೂರು
ವಿಜಯನಗರ ಜಿಲ್ಲೆ ಕೊಟ್ಟೂರು ಪೋಲೀಸ್ ಠಾಣೆ ಪೊಲೀಸ್ ರು,ಡಿ 12ರಂದು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದಿದ್ದಾರೆ.ಕೊಟ್ಟರು ಪಿಎಸ್ಐ ನಾಗಪ್ಪ,ಎಎಸೈ ಸೈಪುಲ್ಲಾ,ತಿಪ್ಪೇಸ್ವಾಮಿ,ಬಸವರಾಜ,ಸೇರಿರಂತೆ ಇತರೆ ಇಬ್ಬರು ಪೊಲೀಸ್ ರು,ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಬಳ್ಳಾರಿ ಎಸಿಬಿ ಬಲೆಗೆ ಬಿದ್ದಿದ್ದು ಪ್ರಕರಣ ದಾಖಲಾಗಿದೆ. ದೂರುದಾರ ತಾಪಂ ಮಾಜಿ ಅಧ್ಯಕ್ಷ ವೆಂಕಟೇಶನಾಯ್ಕ ಎಂಬುವರ ಕುಟುಂಬದವರ ಮೆಲಿರುವ ಪ್ರಕರಣವನ್ನು, ಕೈಬಿಡುವ ಸಲುವಾಗಿ ಕೊಟ್ಟೂರು ಪಿಎಸ್ಐ ಹಾಗೂ ಎಎಸೈ ಸೇರಿದಂತೆ ಪೊಲೀಸ್ ರು ಹಣ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ.ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಇವರು ಸಿಕ್ಕಿಬಿದ್ದಿದ್ದಾರೆ. *ಅಕ್ರಮ..ಸಕ್ರಮ.!?ಲಂಚದ ಕೂಪ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಹಾಗೂ ಕೊಟ್ಟೂರು,ಹಗರಿಬೊಮ್ಮನಹಳ್ಳಿ ತಾಲೂಕಿನ,ಬಹುತೇಕ ಕಡೆಗಳಲ್ಲಿ ಅಕ್ರಮಗಳು ಸಕ್ರಮ ಗಳಾಗಿ ಜರುಗುತ್ತಿವೆ ಎಂದು ಕೆಲ ಹೋರಟಗಾರರು ದೂರಿದ್ದಾರೆ.ಅಕ್ರಮ ಮರಳು ಸಾಗಾಣಿಕೆ ಹಾಗೂ ಅಕ್ರಮ ಮದ್ಯ ಸಾಗಾಣಿಕೆ,ಮಟ್ಕಾ ಅಂದರ್ ಬಾಹರ್ ಮತ್ತು ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೇ ಜರುಗುತ್ತಿವೆ.ಸಮಾಜ ಘಾತುಕ ಚಟುವಟಿಕೆಗಳು ರಾಜಾರೋಷವಾಗಿ ಜರುಗುತ್ತಿದ್ದರೂ ಪೊಲೀಸ್ ರು ಏನೂ ಮಾಡುತ್ತಿಲ್ಲ,ಇದಕ್ಕೆ ಕಾರಣ ಬಹುತೇಕ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸರು ಅಕ್ರಮ ಕೋರರ ಋಣದಲ್ಲಿದ್ದಾರೆ. ತಮ್ಮ ಕಣ್ಣು ಮುಂದೆ ಹಾಡು ಹಗಲೇ ಅಕ್ರಮ ಗಳು ಜರುಗುತ್ತಿದ್ದರೂ ತಾವು ಕೈಲಾಗದವರೆಂದು ಮೌನವಾಗಿದ್ದು,ಅವರು ಭಹಿರಂಗವಾಗಿ ಸಾರಿ ಸಾರಿ ಹೇಳುತ್ತಿದ್ದಾರೆ ಅದಕ್ಕೆ ಸಿಸಿ ಕ್ಯಾಮ್ಯರಾ ಗಳು ಹಾಗೂ ನಾಗರೀಕರೇ ಸಾಕ್ಷಿ.ಕೂಡ್ಲಿಗಿ ಕೊಟ್ಟೂರು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ,ಅಕ್ರಮ ಮದ್ಯ ಮರಳು,ಮಟ್ಕಾ ಅಂದರ್ ಬಾಹರ್ ಅಕ್ರಮ ಚಟುವಟಿಕೆಗಳು.ಈ ಮೂರು ತಾಲೂಕಿನ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬಹುತೇಕ ಕಡೆ ಸರ್ಕಿಯವಾಗಿವೆ ಎಂಬ ಆರೋಪವನ್ನು ಹೋರಾಟಗಾರರು ಆರೋಪಿಸಿದ್ದಾರೆ.ಬಹುತೇಕ ಪೊಲೀಸ್ ರು ಅಕ್ರಮ ಕೋರರು ಹಾಕುವ ಲಂಚ ಎಂಬ ಹೇಸಿಗೆ ತಿನ್ನೋದರಲ್ಲಿಯೇ ಮಗ್ನರಾಗಿದ್ದಾರೆ,ಸರ್ಕಾರದ ಸಂಬಳಕ್ಕೆ ಸಾರ್ವಜನಿಕ ಸೇವೆ ಮಾಡಬೇಕಿದೆ ಎಂಬುದನ್ನ ಮರೆತಿದ್ದಾರೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾವು ಭ್ರಷ್ಟಾಚಾರದಲ್ಲಿ ನಿಸ್ಸೀಮರು ಎಂಬುದನ್ನು,ಕೂಡ್ಲಿಗಿ ಹಾಗೂ ಕೊಟ್ಟೂರು ಪೊಲೀಸರು ಎಸಿಬಿ ಬಲೆಗರ ಬಿದ್ದು ಹಾಗೂ ಮಾಧ್ಯಮದವರಿಗೆ ವರದಿಯ ಸರಕಾಗೋ ಮೂಲಕ ಸಾಬೀತು ಪಡಿಸಿದ್ದಾರೆ.ಅದೇನೇ ಇರಲಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಹಲವು ಇಲಾಖೆಗಳಲ್ಲಿ,ಇನ್ನೂ ಅದೆಷ್ಟೋ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ಸಿಬ್ಬಂದಿಗಳು ಸಕ್ರೀಯವಾಗಿದ್ದಾರೆ. ಎಸಿಬಿಯರು ಸಾರ್ವಜನಿಕರ ಅಹವಾಲು ಹಾಗೂ ದೂರುಗಳನ್ನಾಧರಿಸಿ,ಭ್ರಷ್ಟ ಮಿಕಗಳಿಗೆ ಬಲೆ ಬೀಸಿ ಹಿಡಿದಾಕೋ ಮೂಲಕ ಎಸಿಬಿಯವರು ತಮ್ಮ ಖದರ್ ತೋರಿಸಬೇಕೆಂದು ನಾಗರೀಕರು ಹಲವು ಸಂಘಟನೆಗಳ ಪದಾಧಿಕಾರಿಗಳು ಕೋರಿದ್ದಾರೆ.
Be the first to comment