ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿಗೆ ಡಿಸೆಂಬರ 10 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 203 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 3428 ಮತದಾರರು ಮತದಾನ ಮಾಡಲಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ ಆಯಾ ತಾಲೂಕಾ ಕೇಂದ್ರಗಳಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರದಿಂದ ಚುನಾವಣೆಗೆ ನೇಮಕಗೊಂಡ ಸಿಬ್ಬಂದಿಗಳು ಮತದಾನಕ್ಕೆ ಬೇಕಾದ ಎಲ್ಲ ರೀತಿಯ ಸಾಮಗ್ರಿಗಳನ್ನು ತೆಗೆದುಕೊಂಡು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಮತದಾನಕ್ಕೆ 203 ಮತಗಟ್ಟೆಗಳಿಗೆ ಒಟ್ಟು ಪಿಆರ್‍ಓ 250, ಎಪಿಆರ್‍ಓ 250, ಪಿಓ 250, 349 ಪೊಲೀಸ್ ಸಿಬ್ಬಂದಿ ಹಾಗೂ 227 ಮೈಕ್ರೋ ಆಬ್ಜರವರ್‍ಗಳನ್ನು ನೇಮಿಸಲಾಗಿದೆ. ಮತಗಟ್ಟೆ ತೆರಳುವ ಸಿಬ್ಬಂದಿಗಳಿಗೆ ಒಟ್ಟು 69 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು.
ಪರಿಷತ್ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯಲ್ಲಿ 3428 ಮತದಾರರಿದ್ದು, ಹುನಗುಂದ ತಾಲೂಕಿನಲ್ಲಿ ನಗರ 23, ಗ್ರಾಮೀಣ 234 ಸೇರಿ ಒಟ್ಟು 257 ಮತದಾರರಿದ್ದರೆ, ಇಲಕಲ್ಲ ತಾಲೂಕಿನಲ್ಲಿ ನಗರ 32, ಗ್ರಾಮೀಣ 274 ಒಟ್ಟು 306, ಗುಳೇದಗುಡ್ಡ ನಗರ 23, ಗ್ರಾಮೀಣ 155, ಒಟ್ಟು 178, ಬಾದಾಮಿ ನಗರ 44, ಗ್ರಾಮೀಣ 473, ಒಟ್ಟು 517, ಬಾಗಲಕೋಟೆ ನಗರ 42, ಗ್ರಾಮೀಣ 407, ಒಟ್ಟು 449, ಬೀಳಗಿ ನಗರ 24, ಗ್ರಾಮೀಣ 365 ಒಟ್ಟು 389, ಮುಧೋಳ ನಗರ 38, ಗ್ರಾಮೀಣ 394 ಒಟ್ಟು 432, ರಬಕವಿ-ಬನಹಟ್ಟಿ ನಗರ 84, ಗ್ರಾಮೀಣ 319 ಒಟ್ಟು 403, ಜಮಖಂಡಿ ನಗರ 36 ಗ್ರಾಮೀಣ 461 ಒಟ್ಟು 497 ಮತದಾರರಿದ್ದಾರೆ.
Be the first to comment