ಕಸವಿಲೇವಾರಿ ಘಟಕದ ಸ್ಥಳ ಬದಲಾವಣೆಗೆ ಮನವಿ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಶಿರಸಿ

ತಾಲೂಕಿನ ಉಂಚಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಿದ್ದು ಸ.ನಂ: 35 ರಲ್ಲಿ ಸ್ಥಳ ಗುರುತು ಮಾಡಿದ್ದು ಇರುತ್ತದೆ. ಸ,ನಂ :35ರಲ್ಲಿ ಇನ್ನುಳಿದ ಜಾಗ ಖಾಲಿ ಇದ್ದು ಗಿಡ ಮರಗಳು ಕಡಿಮೆ ಇದ್ದು ಜಾಗ ಖಾಲಿ ಇರುತ್ತದೆ, ಗುರುತು ಮಾಡಿದ ಸ್ಥಳಕ್ಕೆ ತಾಗಿಕೊಂಡು ವಾಸದ ಮನೆಗಳು ಹಾಗೂ ಸಾರ್ವಜನಿಕರು ಓಡಾಡುವ ದಾರಿಯಾಗಿರುತ್ತದೆ ಕಾರಣ ಸ್ಥಳ ಬದಲಾಯಿಸುವಂತೆ ಸಾರ್ವಜನಿಕರಿಂದ ಅರ್ಜಿಗಳು ಬಂದಿರುತ್ತದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಯೋಜನೆ ಶಾಶ್ವತ ಬಳಕೆಯಾದಾಗ ಸಾರ್ವಜನಿಕರ ಪ್ರದೇಶದಿಂದ ದೂರವಿರುವುದು ಒಳ್ಳೆದಾಗಿರುತ್ತದೆ. ಸ.ನಂ 35ರಲ್ಲಿ ಉದ್ದೇಶಿತ ಜಾಗದಲ್ಲಿ ಸರ್ಕಾರದ ಇತರೆ ಉದ್ದೇಶಕ್ಕೆ ಬಳಸಿಕೊಂಡು .ಸ.ನಂ :35 ರಲ್ಲಿ ಉಳಿದ ಜಾಗದಲ್ಲಿ ಘಟಕ ನಿರ್ಮಿಸಿ ಈಗಿರುವ ಜಾಗ ಬದಲಾಯಿಸುವಂತೆ. ಅಧ್ಯಕ್ಷರು.ಉಪಾಧ್ಯಕ್ಷರು ಹಾಗೂ ಚುನಾಯಿತ ಸರ್ವ ಸದಸ್ಯರು ಗ್ರಾಮಪಂಚಾಯತ ಉಂಚಳ್ಳಿ.ಹಾಗೂ ಊರ ನಾಗರಿಕರು ಮನವಿ ನೀಡಿರುತ್ತಾರೆ.

CHETAN KENDULI

Be the first to comment

Leave a Reply

Your email address will not be published.


*