ಜಿಲ್ಲಾ ಸುದ್ದಿಗಳು
ನಾಲತವಾಡ
ಸರಕಾರಿ ಹಿರಿಯ ಪ್ರಾಥಮಿಕ ನಾಗಬೇನಾಳ ಶಾಲೆಯ ಮಕ್ಕಳು 2018/2019ನೇ ಸಾಲಿನಲ್ಲಿ ಖೋಖೋ ಪಂದ್ಯಾಟದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ವಿಭಾಗಿಯ ಮಟ್ಟದಲ್ಲಿ ಮೂರು ವಿದ್ಯಾರ್ಥಿಗಳು ಆಯ್ಕೆಯಾದರು. ನಂತರ 2019/2020ನೇ ಸಾಲಿನಲ್ಲಿ ಖೋಖೋ ಪಂದ್ಯಾಟದಲ್ಲಿ ಇಲ್ಕೆಗೆ ಪ್ರಥಮ ಸ್ಥಾನ ಪಡೆದು ವಿಬಾಗಿಯ ಮಟ್ಟಕ್ಕೆ ನಮ್ಮ ಶಾಲಾ ಮಕ್ಕಳು ಆಯ್ಕೆಯಾದರು, ನಂತರ ವಿಬಾಗಿಯ ಮಟ್ಟದಲ್ಲಿ ದ್ವತೀಯ ಸ್ಥಾನ ಪಡೆದು ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ರಾಜ್ಯಮಟ್ಟದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಖೋಖೋ ಪಂದ್ಯಾಟಕ್ಕೆ ರನ್ನರ ಆಫ್ ಅಂತ ಆಯ್ಕೆಯಾಗಿದ್ದು ನಮ್ಮ ಶಾಲೆಯ ಹಿರಿಮೆಯನ್ನು ಹೆಚ್ಚಿಸಿದರು, ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕಯಾಗಿರತಕ್ಕಂತಹ ಮಕ್ಕಳನ್ನ ಹಿಂದಿನ ಬಿ,ಇ,ಒ ರವರಾದ ಶ್ರೀ ಎಸ್ ಡಿ ಗಾಂಜಿ ಸಾಹೇಬರು ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಜಕ್ಕಪ್ಪ ಬುರ್ಲಿ, ಹುಲಗಪ್ಪ ತೊರ್ಲಬೆಂಚಿ ಮತ್ತು ಶಾಲೆಯ ಮುಖ್ಯಗುರುಗಳಾದ ಬಿ,ಎಂ,ಮೇಲಶೀಮಿಯವರನ್ನ ಆಫೀಸಿಗೆ ಕರಸಿಕೊಂಡು ಸನ್ಮಾನಿಸದರು.
2019/2020ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಖೋಖೋ ಆಟದಲ್ಲಿ ಭಾಗವಹಿಸಿದ ಪ್ರಕಾಶ ದುರಗಪ್ಪ ಮಾದರ ಈತನ ಆಟದ ಪ್ರದರ್ಶಣ ಅತ್ಯುತ್ತಮ ವಾಗಿದ್ದು, ನಂತರ ಅದೇ ಸಾಲಿನಲ್ಲಿ ದಾವಣಗೇರಿಯಲ್ಲಿರತಕ್ಕಂತಹ ಕ್ರೀಡಾ ವಸತಿ ಶಾಲೆಗೆ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ದುರಗಪ್ಪ ಮಾದರ ಮತ್ತು ಮಾಳಿಂಗರಾಯ ಕೊಂಡಗೂಳಿ ಆಯ್ಕೆಯಾದರು. ಈಗ ಸದ್ಯ ಪ್ರಕಾಶ ದುರಗಪ್ಪ ಮಾದರ ಎನ್ನುವ ವಿದ್ಯಾರ್ಥಿ ದಾವಣಗೇರೆಯ ಕ್ರೀಡಾ ವಸತಿ ಶಾಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮ ಶಾಲೆಯ ಸಹ ಶಿಕ್ಷಕರು/ಗುರುಮಾತೆಯರು ಮತ್ತು ಶಾಲೆಯ ಮುಖ್ಯಗುರುಗಳಾದ ಶ್ರೀ ಬಿ,ಎಂ,ಮೇಲಶೀಮಿಯವರು ಹರ್ಷ ವ್ಯೆಕ್ತಪಡಿಸಿದರು.
ನಮ್ಮೂರಿನ ಕೀರ್ತಿ ಶಾಲೆಯ ಕೀರ್ತಯನ್ನು ಈ ವಿದ್ಯಾರ್ಥಿ ಹೆಚ್ಚಿಸಿದ್ದಾನೆ ಎಂದು ಎಸ್,ಡಿ,ಎಂ,ಸಿ ಸದಸ್ಯರು, ಊರಿನ ಪ್ರಮುಖರು, ಮುಖ್ಯವಾಗಿ ಊರಿನ ಯುವಕರು ಮಾತಾಡುತ್ತಿದ್ದಾರೆ.
Be the first to comment