ಕೇಂದ್ರದಲ್ಲಿ ಅನ್ನದಾತರ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಗೆಲುವು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕೇಂದ್ರ ಸರಕಾರ ಅನ್ನದಾತರ ಒಗ್ಗಟ್ಟಿನ ಹೋರಾಟಕ್ಕೆ ಮಣಿದು ಕೃಷಿ ಮಸೂದೆಯನ್ನು ಹಿಂಪಡೆದಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ತಿಳಿಸಿದರು. ದೇವನಹಳ್ಳಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರ ಶಾಂತಿಯುತ ಸತ್ಯಾಗ್ರಹಕ್ಕೆ ಸಂದ ಗೆಲುವು ಇದಾಗಿದ್ದು, ಸರಕಾರವು ರೈತರ ಬಗ್ಗೆ ಕಾಳಜಿ ವಹಿಸದೆ ರೈತರ ಪರ ಎಂದುಕೊಂಡು ವಿರೋಧ ನೀತಿಗಳನ್ನು ಅನುಸರಿಸಿದ ಮಸೂದೆಗಳನ್ನು ಹಿಂಪಡೆಯಲು ಹಲವಾರು ರೈತರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಆದರೂ ಸರಕಾರಗಳು ಮೌನ ವಹಿಸಿದ್ದವು. ಇದೀಗ ಪ್ರಜಾತಂತ್ರ ಸರಕಾರದ ಆಡಳಿತವನ್ನು ಗಮನಿಸುತ್ತಿದ್ದಾರೆ. ಮುಂದಿನ ೨೦೨೩ಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಚುಕ್ಕಾಣಿ ಕಾಂಗ್ರೆಸ್ ಸರಕಾರ ಹಿಡಿಯಲಿದೆ ಎಂದು ಹೇಳಿದರು.

CHETAN KENDULI

ಬೆಂಗಳೂರು ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಶ್ರೇಷ್ಠ ಭಾರತ ನಿರ್ಮಾಣವನ್ನು ಕೆಪಿಸಿಸಿ ಯಜ್ಞದ ಮೂಲಕ ಪ್ರಾರಂಭವಾಗಿದೆ. ೨೦೨೩ರ ಮಹಾ ಸಮರದಲ್ಲಿ ವಿಜಯ ಪತಾಕೆ ಹಾರಿಸುವ ನಿಟ್ಟಿನಲ್ಲಿ ೫೦ಲಕ್ಷ ಸದಸ್ಯರನ್ನು ಹೊಂದು ಗುರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ಮುಂದಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಕೆಪಿಸಿಸಿ ವತಿಯಿಂದ ಬೃಹತ್ ಸದಸ್ಯತ್ವ ಅಭಿಯಾನವು ಸಹ ನಡೆಯುತ್ತಿದೆ. ಮುಂದಿನ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಂದೇಹವಿಲ್ಲ ಎಂದರು.ಈ ವೇಳೆಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್‌ಟಿ ಘಟಕದ ಉಪಾಧ್ಯಕ್ಷ ಕೆ.ಎಂ.ಲಕ್ಷ್ಮೀಕಾಂತ್, ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಇತರರು ಇದ್ದರು. 

Be the first to comment

Leave a Reply

Your email address will not be published.


*