ಕಲ್ಲಿನ ಛಾವಣಿ ಮನೆಯಲ್ಲಿ ಗೋಡೆ ಕುಸಿತ, ತಪ್ಪಿದ ಅನಾಹುತ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 22 ವರ್ಷಗಳ ಹಳೇ ಕಲ್ಲಿನ ಛಾವಣಿಯ ಮನೆಯೊಳಗೆ ತಡರಾತ್ರಿ ಗೋಡೆ ಕುಸಿದ ಘಟನೆ ನಡೆದಿದೆ.ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಪಂ ವ್ಯಾಪ್ತಿಯ ದೇವಗಾನಹಳ್ಳಿ ಗ್ರಾಮದಲ್ಲಿನ ಡಿ.ರಾಮಕೃಷ್ಣಪ್ಪ ಎಂಬುವವರ ಮನೆಯಲ್ಲಿ ಗೋಡೆ ಕುಸಿದಿದ್ದು, ಮೇಲ್ಘಾವಣಿ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದೆ. ಈ ಮನೆಯಲ್ಲಿ ನಾಲ್ಕು ಮಂದಿ ವಾಸವಿದ್ದು, ರಾತ್ರಿ ಸುರಿದ ಮಳೆಗೆ ಗೋಡೆ ಕುಸಿಯುತ್ತಿದ್ದಂತೆ ಮನೆಯಿಂದಾಚೆ ನಾಲ್ಕು ಮಂದಿ ಭಯಭೀತರಾಗಿ ಓಡಿಬಂದಿದ್ದಾರೆ. ಯಾವುದೇ ಪ್ರಾಣಪಾಯವಾಗಿಲ್ಲ. 

CHETAN KENDULI

ಒಂದು ವೇಳೆ ಮೇಲ್ಛಾವಣಿ ಏನಾದರೂ ಕುಸಿದು ಬಿದ್ದಿದ್ದರೆ ನಾಲ್ಕು ಜನರ ಪ್ರಾಣ ಪಕ್ಷಿ ಹಾರಿಹೋಗುತ್ತಿತ್ತು. ಅದೃಷ್ಟವಶಾತ್ ಅನಾಹುತ ತಪ್ಪಿದ್ದು, ರಾತ್ರಿಯೇ ವಾಸವಾಗಿದ್ದ ಡಿ.ರಾಮಕೃಷ್ಣಪ್ಪ, ಪತ್ನಿ ಮುನಿರತ್ನಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳು ಸಮೀಪದ ಬೇರೆ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

Be the first to comment

Leave a Reply

Your email address will not be published.


*