ದುದ್ದನಹಳ್ಳಿ ಎಂಪಿಸಿಎಸ್‌ನಲ್ಲಿ ೨೦೨೧ನೇ ಸಾಲಿನ ವಾರ್ಷಿಕ ಮಹಾಸಭೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ 

ದೇವನಹಳ್ಳಿ ತಾಲೂಕಿನ ದುದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಎಂಪಿಸಿಎಸ್ ಅಧ್ಯಕ್ಷ ಡಿ.ಎನ್.ಮಂಜುನಾಥ್ ಉದ್ಘಾಟಿಸಿದರು.
ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಬಮೂಲ್‌ನಿಂದ ದೊರೆಯುವ ಸೌಲಭ್ಯಗಳು ಮತ್ತು ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವುದರ ಮೂಲಕ ಹೇಗೆ ಲಾಭ ಗಳಿಸಬಹುದು. ಏನೆಲ್ಲಾ ಸೌಲಭ್ಯಗಳು ಇವೆ ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಈ ವೇಳೆಯಲ್ಲಿ ಎಂಪಿಸಿಎಸ್ ಉಪಾಧ್ಯಕ್ಷ ಪಿ.ಮುನಿಶಾಮಪ್ಪ, ನಿರ್ದೇಶಕರಾದ ವಿ.ಮುನಿರಾಜು, ಡಿ.ಸಿ.ರಂಗಸ್ವಾಮಿ, ಡಿ.ಎನ್.ನಾಗರಾಜು, ಡಿ.ಕೆ.ರವಿಕಮಾರ್, ಡಿ ಎಂ ಮುನೇಗೌಡ, ಡಿ ಆರ್ ಚಂದ್ರಪ್ಪ , ಜೆ ರತ್ನಮ್ಮ, ನಾಗಮ್ಮ ಹಾಗೂ ಆಲೂರು ದುದ್ದನಹಳ್ಳಿ ಪಂಚಾಯತಿ ಉಪಾಧ್ಯಕ್ಷೆ ಸಿ.ಕಾಂತ ಮುನಿರಾಜು, ವಿಎಸ್‌ಎಸ್‌ಎನ್ ನಿರ್ದೇಶಕ ಮಧು.ಡಿ.ಎನ್, ಪಂಚಾಯತಿ ಸದಸ್ಯ ಡಿ.ಆರ್.ರಘು, ಎಂಪಿಸಿಎಸ್ ಮಾಜಿ ಅಧ್ಯಕ್ಷ ರಂಗಸ್ವಾಮಿ, ಸಿಬ್ಬಂದಿಗಳಾದ ಆನಂದಮೂರ್ತಿ, ರಮೇಶ್, ನಾಗೇಶ್, ಅಂಬರೀಶ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.

CHETAN KENDULI

Be the first to comment

Leave a Reply

Your email address will not be published.


*