ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಚೈಲ್ಡೆಲೈನ್ ೧೦೯೮ ಸೇವೆಯು ೨೫ ವರ್ಷ ಪೂರೈಸಿದ್ದು ರಜತಮಹೋತ್ಸವದ ಸಂಭ್ರಮದಲಿದ್ದು ಪ್ರತಿವರ್ಷದಂತೆ ಈ ವರ್ಷಕೂಡ ನವೆಂಬರ್ ೧೪ ರಿಂದ ೨೦ರ ವರೇಗೆ “ಚೈಲ್ಡೆಲೈನ್ ಸೇ ದೋಸ್ತಿ ಸಪ್ತಾಹ” ಕಾರ್ಯಕ್ರಮವನ್ನು ದೇಶದಾದ್ಯಂತ ಆಯೋಜಿಸಲಾಗಿದೆ.
ಚೈಲ್ಡೆಲೈನ್ ೧೦೯೮ ಸೇವೆಯು ದಿನದ ೨೪ ಗಂಟೆಗಳ ಕಾಲ ತುರ್ತು ಪರಿಸ್ಥಿತಿಯಲ್ಲಿ ಇರುವ ಮಕ್ಕಳಿಗೆ ದೂರವಾಣಿ ಹಾಗು ಹೊರ ಸಂಪರ್ಕ ಸೇವೆಗಳ ಮೂಲಕ ರಕ್ಷಣೆ ಮತ್ತು ಪೋಷಣೆಯನ್ನು ಒದಗಿಸುವ ರಾಷ್ಟ್ರೀಯ ಉಚಿತ ಕರೆ ಸೇವೆಯಾಗಿದೆ. ಈ ಸೇವೆಯು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ “ಮಿಶನ್ ವಾತ್ಸಲ್ಯ” ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರತಿ ವರ್ಷದಂತೆ ಜಿಲ್ಲಾ ಮಟ್ಟದಲ್ಲಿರುವ ಚೈಲ್ಡೆಲೈನ್ – ೧೦೯೮ ಕೇಂದ್ರಗಳ ಮುಖಾಂತರ ಮಕ್ಕಳ ರಕ್ಷಣೆ ಮತ್ತು ಪೋಷಣೆಯನ್ನು ಖಾತರಿ ಪಡಿಸಲು ಮತ್ತು ಜಾಗೃತಿಯನ್ನು ಮೂಡಿಸಲು ಒಂದು ವಾರದ ಚೈಲ್ಡೆಲೈನ್ ಸೇ ದೋಸ್ತಿ ಸಪ್ತಾಹ (ಚೈಲ್ಡೆಲೈನ್ ಮಿತ್ರ) ಅಭಿಯಾನವನ್ನು ೧೪ನೇ ನವೆಂಬರ್ ನಿಂದ ೨೦ನೇ ನವೆಂಬರ್ ೨೦೨೧ರ ವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳು, ಸಮುದಾಯದ ನಾಯಕರುಗಳು, ಸ್ವಯಂ ಸೇವಕರು, ಸಾರ್ವಜನಿಕರು, ಮಕ್ಕಳು ಮತ್ತು ಮಾಧ್ಯಮ ಮಿತ್ರರೊಂದಿಗೆ ಜೊತೆಗೂಡಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಞಣೆ ಮತ್ತು ಪೋಷಣೆ, ಮಕ್ಕಳ ರಕ್ಷಣೆಗೆ ಇರುವ ವಿವಿದ ಇಲಾಖೆಗಳ, ಕಾನೂನು ಕಾಯಿದೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅಧಿಕ ಸಂಖ್ಯೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸ್ವಯಂ ಸೇವಕರನ್ನು ಗುರುತಿಸುವ ಅಭಿಯಾನವಾಗಿದೆ.
ಈ ಕಾರ್ಯಕ್ರಮವು ಒಂದು ವಾರದ ಕಾರ್ಯಕ್ರಮವಾಗಿದ್ದು, ಇದರ ಭಾಗವಾಗಿ ಸಹಾಯದ ಅಗತ್ಯವಿರುವ ಪ್ರತಿ ಮಗುವಿಗೆ ಅಗತ್ಯವಿರುವ ಆಪ್ತಸ್ನೇಹಿತರನ್ನು ಕಲ್ಪಿಸುವ ಹಾಗೂ ದೇಶದ ನಾಗರಿಕರನ್ನು ಮಕ್ಕಳ ರಕ್ಷಣೆಯಲ್ಲಿ ಜವಾಬ್ದಾರಿಯುತವಾದ ಮಧ್ಯಸ್ಥಗಾರರನ್ನಾಗಿ ಮಾಡುವ ಉತ್ತಮವಾದ ಸಮಾಜಮುಖಿ ಉದ್ದೇಶವನ್ನು ಹೊಂದಿರುವ ಅಭಿಯಾನವಾಗಿದೆ. ಇಂತಹ ಅಭಿಯಾನದಿಂದ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತು ಜಾಗೃತಿಗೊಳಿಸುವುದಲ್ಲದೆ ಜವಬ್ದಾರಿಯುತ ನಾಗರಿಕರನ್ನಾಗಿ ಮಾಡುವ ನಿಟ್ಟಿನಲ್ಲಿ ಅರಿವನ್ನು ಮೂಡಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ, ನ್ಯಾಯಾಂಗ ವಿಭಾಗದ ಅಧಿಕಾರಿಗಳು, ಸ್ವಯಂ ಸೇವಕರು, ಮಕ್ಕಳು, ಪಾಲಕರು,ಸಂಘ-ಸಂಸ್ಥೆಯ ಪ್ರತಿನಿಧಿಗಳು, ಮಾಧ್ಯಮ ಮಿತ್ರರು ಹಾಗೂ ಇನ್ನಿತರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುತ್ತಾರೆ.
ಜಿ.ಎನ್.ಸಿಂಹ ನಿರ್ಧೇಶಕರು
ಮಕ್ಕಳ ಸಹಾಯವಾಣಿ – ೧೦೯೮
ರೀಚ್ ಸಂಸ್ಥೆ.
ಮಕ್ಕಳ ಸಹಾಯವಾಣಿ ಸ್ನೇಹಿ ಸಪ್ತಾಹ ಕ್ರಿಯಾ ಯೋಜನೆ.
14th November 2021
ಯುವಕ ಸಂಘದವರಿAದ ಮಕ್ಕಳ ರಕ್ಷಣೆಗಾಗಿ ಸೈಕಲ್/ಬೈಕ್ ಜಾಥ – ಮುಚಖಂಡಿ ಗ್ರಾಮ
ಚಾಲನೆ ಮಾನ್ಯ ವರಿಷ್ಟಾಧಿಕಾರಿಗಳು, ಶ್ರೀ ಲೋಕೆಶ್ ಜಗಳಾಸರ್
ಸ್ಥಳ : ಮುಚಖಂಡಿ ಶ್ರೀ ವೀರಭದ್ರೇಶ್ವರ ದೇವಸ್ಥಾನ
ಸಮಯ : ಬೆ: ೮;೩೦
15th November 2021 –
ಮಕ್ಕಳ ರಕ್ಷಣೆ ಮತ್ತು ಕೋವಿಡ್ -೧೯ ನಂತರ ಮರಳಿ ಶಾಲೆಗೆ – ಮಕ್ಕಳೊಂದಿಗೆ ಸಂವಾದ ಮತ್ತು ಪ್ರಮಾಣ ವಚನ ಸ್ವೀಕಾರ
ಸ್ಥಳ : ರೂಡ್‌ಸೆಟ್ ಸಂಸ್ಥೆ, ವಿದ್ಯಾಗಿರಿ.
ಸಮಯ : ೧೨;೩೦
16th November 2021–
ಜಿಲ್ಲಾ ಮಟ್ಟದ ವಕಾಲತ್ತು – “ಬಾಲ್ಯ ವಿವಾಹ ನಿಷೇಧ” ಕುರಿತು ಇಲಾಖೆಗಳೊಂದಿಗೆ & ಸಮುದಾಯದೊಂದಿಗೆ ವರ್ಷದ ಕ್ರಿಯಾ ಯೋಜನೆ ತಯಾರಿ.
17th November 2021-
ಕೋವಿಡ್ -೧೯ ರಿಂದ ONLINE CLASS V/s ಮರಳಿ ಶಾಲೆಗೆ ವಿಷಯವಾಗಿ ಸ್ಪರ್ಧೆ ಹಾಗೂ ಬಹುಮಾನ ವಿತರಣೆ.
ಸ್ಥಳ : ಸೀಮಕೆರೆ ಪ್ರೌಡಶಾಲೆ
18th November 20201–
ವಿಷೇಶ ಮಕ್ಕಳೊಂದಿಗೆ ಮಕ್ಕಳ ಹಕ್ಕುಗಳ ಅರಿವು ಹಾಗೂ ವಿವಿಧ ಸ್ಪರ್ಧೇ ಅಂಧ ಮಕ್ಕಳ ವಿಷೇಶ ವಸತಿ ಶಾಲೆ ನವನಗರ
19th November 2021–
ಬಾಗಲಕೋಟೆಯ ಪಿ.ಯು ಕಾಲೇಜುಗಳಲ್ಲಿ for online safety ಕುರಿತು ಅರಿವು – ಮಕ್ಕಳಿಗೆ ಹಾಗೂ ಪಾಲಕರಿಗೆ
November 20/11/2021
ಆಡಗಲ್, ಮುಗಳೊಳ್ಳಿ, ಐಹೋಳೆ ಪಂಚಾಯತ್ ಗಳಲ್ಲಿ ಮಕ್ಕಳ ಹಕ್ಕುಗಳ ವಿಷೇಶ ಗ್ರಾಮ ಸಭೆ.
Be the first to comment