ನ್ಯಾಯಾಲಯ ಪಿ.ಎಲ್.ಡಿ. ಬ್ಯಾಂಕಿನ ಆಡಳಿತ ಮಂಡಳಿಯನ್ನು ಬಾರ್ಕಾಸ್ತುಗೊಳಿಸಿದ ಆದೇಶದ ಪ್ರತಿಯನ್ನು ಪ್ರದರ್ಶಿಸಿದ ಮಂಕಾಳವೈದ್ಯ …

ವರದಿ-ಜೀವೋತ್ತಮ್ ಪೈ , ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ

ಮಾಜಿ ಶಾಸಕ ಮಂಕಾಳು ವೈದ್ಯರವರು ಶುಕ್ರವಾರ ಭಟ್ಕಳ ಜನತಾ ಕೋ-ಅಪರೆಟಿವ್ ಬ್ಯಾಂಕಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕ ಸುನೀಲ್ ನಾಯ್ಕ್ ಅವರು ಜನತಾ ಬ್ಯಾಂಕಿನ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದಾರೆ ಇದು ಖಂಡನೀಯ . ತಮ್ಮ ಮನೆಯಲ್ಲಿ ಹೆಗ್ಗಣ ಬಿದ್ದು ಕೊಳೆಯುತ್ತಿರುವಾಗ ಪಕ್ಕದ ಮನೆಯಲ್ಲಿ ವಾಸನೆ ಬರುತ್ತಿದೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಖಾರವಾಗಿ ಹೇಳಿದರು.

CHETAN KENDULI

ಇತ್ತೀಚೆಗೆ ವಿಧಾನಸಭೆಯಲ್ಲೂ ಪ್ರಶ್ನೋತ್ತರ ಸಮಯದಲ್ಲಿ ಶಾಸಕರು ನಮ್ಮ ಬ್ಯಾಂಕಿನ ಬಗ್ಗೆ ದೂರು ಸಲ್ಲಿಸಿದ್ದಾರೆ. ಸುನೀಲ್ ನಾಯ್ಕ್ ತಾವೇ ಅಧ್ಯಕ್ಷರಾಗಿದ್ದ ಭಟ್ಕಳ ಪಿ.ಎಲ್.ಡಿ ಬ್ಯಾಂಕಿನಲ್ಲಿ ಸುಳ್ಳು ಬ್ಯಾಲೆನ್ಸ್ ಸೀಟ್ ತಯಾರಿಸಿ ಬ್ಯಾಂಕ್ ಲಾಭದಲ್ಲಿದೆ ಎಂದು ಬಿಂಬಿಸಿ 23 ಜನರನ್ನ ಹೊಸದಾಗಿ ನೇಮಕಾತಿ ಮಾಡಿದರು. ಇದನ್ನು ಪ್ರಶ್ನಿಸಿ ಶೇರುದಾರ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯ ಪಿ.ಎಲ್.ಡಿ. ಬ್ಯಾಂಕಿನ ಆಡಳಿತ ಮಂಡಳಿಯನ್ನು ಬಾರ್ಕಾಸ್ತುಗೊಳಿಸಿದ ಆದೇಶದ ಪ್ರತಿಯನ್ನು ಪ್ರದರ್ಶಿಸಿದರು. 

ಜನತಾ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತಿದೆ. ನಮ್ಮ ಬ್ಯಾಂಕ್ ವ್ಯವಹಾರ ದಲ್ಲಿ ಯಾವುದೇ ದೋಷ ಇಲ್ಲ ಎಂದು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧಿಕಾರಿಗಳು ಕ್ಲೀನ್ ಚಿಟ್ ನೀಡಿದಾಗಲೂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪುನಃ ನಮ್ಮ ಬ್ಯಾಂಕಿನ ಮೇಲೆ 64ರ ಕೇಸು ದಾಖಲಿಸಲು ಕಾರಣರಾಗಿದ್ದಾರೆ. ಯಾವುದೇ ಹೇಳಿಕೆ ನೀಡುವಾಗ ಪೂರಕವಾದ ದಾಖಲೆಗಳಿರಬೇಕು ಸುಮ್ಮನೆ ಸುಳ್ಳು ಹೇಳಿ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಮಾರ್ಮಿಕವಾಗಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*