ಜಿಲ್ಲಾ ಸುದ್ದಿಗಳು
ವಿವಿಧ ಇಲಾಖೆಯ ಸೌಲಭ್ಯ ವಿತರಣೆ
ಕಾನೂನು ಸೇವೆಗಳ ಬೃಹತ್ ಶಿಬಿರದಲ್ಲಿ ವಿಕಲಚೇತನರ ಇಲಾಖೆಯಿಂದ ವಿಕಲಚೇತನರಿಗೆ ವ್ಹೀಲ್ ಚೇರ, ಬಗಲು ಬಡಿಗೆ ಸೇರಿದಂತೆ ಕಂದಾಯ, ತಾಲೂಕಾ ಪಂಚಾಯತ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂದಾಜು 136 ಕ್ಕೂ ಹೆಚ್ಚು ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಬಾಗಲಕೋಟೆ : ನ್ಯಾಯಾಂಗ ಇಲಾಖೆಯು ಕೇವಲ ನ್ಯಾಯ ಒದಗಿಸುವ ಕೆಲಸ ಮಾಡದೇ ನೆರವು ನೀಡುವ ಕೆಲಸ ಮಾಡುತ್ತದೆ ಎಂದು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಸಂತೋಷ ಸಿ.ಬಿ ತಿಳಿಸಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಕಾನೂನು ಸೇವೆಗಳ ಬೃಹತ್ ಶಿಬಿರವನ್ನು ಉದ್ಘಾಟಿಸಿ, ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ನ್ಯಾಯಾಲಯದ ಒಂದು ಮುಖ ಮಾತ್ರ ನೋಡಿದ್ದೀರಿ ಆದರೆ ಇನ್ನೊಂದು ಮುಖ ನ್ಯಾಯ ಒದಗಿಸುವದರ ಜೊತೆಗೆ ಜನ ಸಾಮಾನ್ಯರಿಗೆ ಸೌಲಭ್ಯಗಳನ್ನು ಒದಗಿಸುವದಾಗಿದೆ. ಸಂವಿಧಾನದಡಿ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದು, ಆ ಹಕ್ಕುಗಳನ್ನು ಪಡೆಯಲು ಜನರು ಜಾಗೃತರಾಗಬೇಕಾಗಿದೆ ಎಂದರು.
ಸರಕಾರ ನೀಡುವ ಅನುದಾನದಿಂದ ಅದರಿಂದಾಗುವ ಲಾಭ, ನಮ್ಮ ಜೀವನ ಶೈಲಿ ಉತ್ತಮ ಮಟ್ಟದಲ್ಲಿ ಈಡೇರಿಸಿಕೊಳ್ಳುವಂತಾಗಬೇಕು. ಇದರ ಕೊರತೆ ಬಹಳಷ್ಟು ಇದೆ. ಇದರ ಲಾಭ ಗ್ರಾಮೀಣ ಭಾಗದ ಜನರಿಗೆ ತಲುಪಿಸುವಂತಾಗಬೇಕು ಎಂದರು. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು-ನೆರವು ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ದುರ್ಬಲ ವರ್ಗದವರು ತಮ್ಮ ಹಕ್ಕುಗಳನ್ನು ಪಡೆಯಲು ಕೋರ್ಟ ಮೆಟ್ಟಿಲು ಹತ್ತಲು ಸಾದ್ಯವಾಗದೇ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಪ್ರಾಧಿಕಾರದ ಮೂಲಕ ಉಚಿತ ಕಾನೂನು ಅರಿವು ನೆರವು ನೀಡಲಾಗುತ್ತಿದೆ. ಜನ ಸಾಮಾನ್ಯರು ತಮಗೆ ಸೀಗಬೇಕಾದ ನ್ಯಾಯ ಹಾಗೂ ಸೌಲಭ್ಯ ಪಡೆಯಲು ಗ್ರಾಮ ಮಟ್ಟದಲ್ಲಿ ಗ್ರಾ.ಪಂ, ತಾಲೂಕಾ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಸ್ಥಾಪಿಸಲಾದ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದಲ್ಲಿ ಉಚಿತವಾಗಿ ನೆರವು ನೀಡುವದರ ಜೊತೆಗೆ ಮಾರ್ಗದರ್ಶನ ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳ ಸಹಕಾರದಿಂದ ಜನಸಾಮಾನ್ಯರಿಗೆ ಅರಿವು ನೆರವಿನ ಕಾರ್ಯ ಯಶಸ್ವಿಯತ್ತ ಸಾಗಿದೆ ಎಂದು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ನ್ಯಾಯಂಗ ಇಲಾಖೆ ನ್ಯಾಯ ಒದಗಿಸುವದರ ಜೊತೆಗೆ ಸರಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದರಿಂದ ಸರಕಾರದ ಮಹತ್ವದ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಲು ಸಾದ್ಯವಾಗುತ್ತಿದೆ. ಈ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮಾತನಾಡಿ ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಸ್ತುಪ್ರದರ್ಶ ಸಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಪಶು ಉಪನಿರ್ದೇಶಕ ಡಾ.ಶಶಿಧರ ನಾಡಗೌಡರ, ತಹಶೀಲ್ದಾರ ಗುರುಸಿದ್ದಯ್ಯ ಹೊರೇಮಠ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಸಿಡಿಪಿಓ ಶಿಲ್ಪಾ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment