ಘನವೆತ್ತ ಭಾರತ ಸರಕಾರವು ನಿರ್ಯಾಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಪರಮಪೂಜ್ಯ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನೀಡಿದ್ದು ಉಡುಪಿಯಲ್ಲಿ ಇಂದು ವೈಭವದ ಮೆರವಣಿಗೆಯ ಮೂಲಕ ಶ್ರೀಕೃಷ್ಣಾರ್ಪಣ ಕಾರ್ಯಕ್ರಮವು ನಡೆಯಿತು.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಉಡುಪಿ

ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಪಾದರ ಭಾವಚಿತ್ರದ ಮುಂದೆ ಇರಿಸಿ ಆರತಿ ಬೆಳಗಲಾಯಿತು. 

CHETAN KENDULI

ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಸನ್ಮಾನ್ಯ ಶ್ರೀ ರಘುಪತಿ ಭಟ್, ಉಡುಪಿ ಜಿಲ್ಲಾಧಿಕಾರಿ ಶ್ರೀಯುತ ಕೂರ್ಮ ರಾವ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಯುತ ವಿಷ್ಣುವರ್ಧನ್, ಶ್ರೀಯುತ ಪ್ರಮೋದ್ ಮಧ್ವರಾಜ್, ಶ್ರೀಯುತ ಯಶಪಾಲ್ ಸುವರ್ಣ, ಶ್ರೀಯುತ ಎಂ.ಬಿ ಪುರಾಣಿಕ್, ಶ್ರೀಯುತ ಭುವನೇಂದ್ರ ಕಿದಿಯೂರು, ಪೇಜಾವರ ಮಠದ ದಿವಾನರಾದ ಶ್ರೀಯುತ ರಘುರಾಮಾಚಾರ್ಯರು, ಶ್ರೀಯುತ ವಾಸುದೇವ ಭಟ್ ಪೆರಂಪಳ್ಳಿ, ಶ್ರೀಯುತ ರತ್ನಕುಮಾರ್, ಎಸ್ ಎಂ ಎಸ್ ಪಿ ಸಭೆಯ ಕಾರ್ಯದರ್ಶಿಗಳಾದ ಶ್ರೀಯುತ ದೇವಾನಂದ ಉಪಾಧ್ಯಾಯ, ಕೋಶಾಧಿಕಾರಿಯಾದ ಶ್ರೀಯುತ ಚಂದ್ರಶೇಖರ ಆಚಾರ್ಯ, ಪ್ರಾಚಾರ್ಯರಾದ ಪ್ರೊ. ಆರ್ ಹರಿದಾಸ ಭಟ್ ಮತ್ತು ಅಧ್ಯಾಪಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಚಿನ್ಮಯ ಭಟ್ ಇವರು ರಂಗವಲ್ಲಿಯಲ್ಲಿ ಪೇಜಾವರ ಶ್ರೀಪಾದರ ಭಾವಚಿತ್ರವನ್ನು ರಚಿಸಿದರು. ಪೇಜಾವರ ಶ್ರೀಪಾದರು ವಿಶೇಷವಾಗಿ ವಿದ್ಯಾರ್ಥಿಯನ್ನು ಅಭಿನಂದಿಸಿದರು.ಬಳಿಕ ವೈಭವದ ಮೆರವಣಿಗೆಯು ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದಿಂದ ಶ್ರೀಕೃಷ್ಣಮಠದ ತನಕ ನಡೆಯಿತು. ಅಧ್ಯಾಪಕವೃಂದ ಮತ್ತು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.

Be the first to comment

Leave a Reply

Your email address will not be published.


*