ರಾಜ್ಯ ಸುದ್ದಿಗಳು
ದೇವನಹಳ್ಳಿ
ಗ್ರಾಮೀಣ ಪ್ರದೇಶದಲ್ಲಿ ದೇಗುಲಗಳ ಅಭಿವೃದ್ಧಿಯಿಂದ ಮನುಕುಲದ ಉದ್ದಾರವಾಗಲಿದೆ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ತಿಳಿಸಿದರು.ನ.28, 29ರಂದು ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ನೆರಗನಹಳ್ಳಿ ಗ್ರಾಮದಲ್ಲಿ ಶ್ರೀ ಸೀತಾರಾಮ ಲಕ್ಷಣ ಆಂಜನೇಯಸ್ವಾಮಿ ಚರಬಿಂಬ ಪ್ರತಿಷ್ಠೆ ಹಾಗೂ ದ್ವಜಸ್ಥಂಭ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಕ್ಕೆ ಸಹಾಯಹಸ್ತ ನೀಡಿ ಅವರು ಮಾತನಾಡಿದರು
ಗ್ರಾಮಗಳಲ್ಲಿ ದೇವಾಲಯಗಳ ಪಾತ್ರ ಹೆಚ್ಚು ಮಹತ್ವ ಬೀರುತ್ತದೆ ಇದೆ. ಗ್ರಾಮೀಣಭಾಗದ ಜನರ ಮನಸ್ಸಿನಲ್ಲಿ ನೆಲೆಸಿರುವ ಶ್ರೀ ಸೀತಾರಾಮ ಲಕ್ಷಣ ಸಮೇತ ಆಂಜನೇಯಸ್ವಾಮಿ ಸಕಲ ಭಂಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು. ಗ್ರಾಮಗಳಲ್ಲಿ ದೇವಾಲಗಳನ್ನು ಜೀರ್ಣೋದ್ಧಾರಗೊಳಿಸಿದರೆ ಮುಂದಿನ ಪೀಳಿಗೆಗೆ ಶಾಂತಿ ನೆಮ್ಮದಿಯ ವಾತಾವರಣ ತರಲು ಸಾಧ್ಯವಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ತನ್ನದೇ ಆದ ಪ್ರಾತಿನಿಧ್ಯವಿದೆ. ಪ್ರತಿಯೊಬ್ಬರು ದೇವಾಲಗಳ ಅಭಿವೃದ್ಧಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವಂತಾಗಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ನೆರಗನಹಳ್ಳಿ ಗ್ರಾಮದ ಸುರೇಶ್, ಸಂತೋಷ್, ಕೊಯಿರ ಮಂಜುನಾಥ್, ಗ್ರಾಮಸ್ಥರು ಇದ್ದರು.ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ನೆರಗನಹಳ್ಳಿ ಗ್ರಾಮದಲ್ಲಿ ಶ್ರೀ ಸೀತಾರಾಮ ಲಕ್ಷಣ ಆಂಜನೇಯಸ್ವಾಮಿ ಚರಬಿಂಬ ಪ್ರತಿಷ್ಠೆ ಹಾಗೂ ದ್ವಜಸ್ಥಂಭ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಕ್ಕೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ದೇವಾಲಯದ ಆಡಳಿತ ಮಂಡಳಿಗೆ ಸಹಾಯಹಸ್ತ ನೀಡಿದರು.
Be the first to comment