ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜಾತಿಗಳ ಒಕ್ಕೂಟದ ಬಾಗಲಕೋಟೆ ಜಿಲ್ಲೆಯ ಪದಾಧಿಕಾರಿಗಳ ರಚನೆಗಾಗಿ ಇದೇ ನವಂಬರ್ -14 ರಂದು ಬಾಗಲಕೋಟೆಯ ನವನಗರದ ಸೆಕ್ಟರ್ ಸಂಖ್ಯೆ55 ರಲ್ಲಿರುವ ಜೋಗಿ ಸಮಾಜದ ಸಮುದಾಯ ಭವನದಲ್ಲಿ ಹಿಮದುಳಿದ ವರ್ಗದ ಎಲ್ಲ ಅಲೆಮಾರಿ ಅರೆ ಅಲೆಮಾರಿ ಜಾತಿಜನಾಂಗದವರ ಸಭೆ ಕರೆಯಲಾಗಿದೆ ಎಂದು ಈಗಿನ ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಹೆಳವರ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜನಾಂಗವಾದ ಅಲೆಮಾರಿ ಅರೆ ಅಲೆಮಾರಿ ಸಮುದಾಯ ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತ ಹಗಲು, ರಾತ್ರಿ,ಮಳೆ,ಗಾಳಿ,ಬಿಸಿಲು,ಚಳಿ ಎನ್ನದೆ ಬೀದಿ ಬೀದಿಗಳಲ್ಲಿ,ಗುಡಿ ಗುಂಡಾರದ ಆವರಣದಲ್ಲಿ ಟೆಂಟ್ ಹಾಕಿಕೊಂಡು ವಸತಿ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.ಇವರು ಇತರರಂತೆ ಬದುಕು ಕಟ್ಟಿಕೊಳ್ಳಲು ಸಾದ್ಯವಾಗುತ್ತಿಲ್ಲ.ಅಲ್ಲದೆ ಸಂಘಟನೆಯ ಕೊರತೆ ತುಂಬಾ ಇದ್ದು ಮುಂದಿನ ದಿನಗಳಲ್ಲಿ ಎಲ್ಲ ಹಿಂದುಳಿದ ವರ್ಗಗಳ ಅಲೆಮಾರಿ ಅರೆ ಅಲೆಮಾರಿ ಗುಂಪಿಗೆ ಸೇರಿದ 46 ಜಾತಿ ಸಮುದಾಯದವರು ಈಗಾಗಲೆ ನಿರ್ಧರಿಸಿದಂತೆ ದಿನಾಂಕ:14-11-2021 ರಂದು ಬೆಳಿಗ್ಗೆ 10 ಗಂಟೆಗೆ ಸಭೆ ಸೇರಿ ನೂತನ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು.
ಈ ಸಭೆಗೆ ಈ ಕೆಳಗೆ ಸೂಚಿಸಿದ ಪ್ರವರ್ಗ-1ರಲ್ಲಿ ಬರುವ ಅಲೆಮಾರಿ ಅರೆ ಅಲೆಮಾರಿ ಜಾತಿ ಜನಾಂಗದವರಾದ
1. ಬೈರಾಗಿ (ಬಾವ) 2. ಬಾಲಸಂತೋಷಿ– ಜೋಷಿ
3. ಬಾಜಿಗರ್ 4. ಭರಡಿ 5.ಬುಡ್ ಬುಡಕಿ,ಜೋಷಿ, ಗೊಂಧಳಿ 6. ಚಾರ 7. ಚಿತ್ರಕಥಿ-ಜೋಷಿ 8.ಧೋಲಿ 9.ಡವೇರಿ 10.ದೊಂಬರಿ 11. ಘಿಸಾಡಿ 12. ಗಾರುಡಿ
13. ಗೋಪಾಲ್ 14. ಗೊಂದಳಿ 15. ಹೆಳವ 16.ಜೋಗಿ 17. ಕೇಲ್ಕರಿ 18. ಕೋಲ್ಹಟಿ
19. ನಂದಿವಾಲ ಜೋಷಿ-ಗೊಂದಳಿ,ಪುಲ್ ಮಾಲಿ
20. ನಾಥಪಂಥಿ, ಡೌರಿಗೋಸಾವಿ 21. ನಿರ್ಶಿಕಾರಿ
22. ಪಾಂಗ್ಯುಯಲ್ 23. ಜೋಷಿ (ಸಾದ ಜೋಷಿ)
24. ಸಾನ್ಸಿಯ 25. ಸರಾನಿಯ 26. ತಿರುಮಲಿ 27. ವಾಯ್ಡು 28. ವಾಸುದೇವ್ 29. ವಾಡಿ 30. ವಾಗ್ರಿ 31. ವಿರ್ 32. ಬಜನಿಯ 33. ಶಿಕ್ಕಲಿಗರ್ 34. ಗೊಲ್ಲ 35. ಕಿಲ್ಲಿಕ್ಯಾತ. 36. ಸರೋಡಿ 37 ದುರ್ಗ-ಮುರ್ಗ (ಬುರ್ ಬುರ್ ಚ) 38 ಹಾವ್ ಗಾರ್ (ಹಾವಾಡಿಗಾರ್). 39. ಪಿಚಗುಂಟಲ 40. ಮಸಣಿಯ ಯೋಗಿ 41. (ಬೆಸ್ತರ್) ಬುಂಡಬೆಸ್ತ 42. ಕಟಬು 43. ದರ್ವೆಶ್ 44. ಕಾಶಿ ಕಪಾಡಿ 45. ದೊಂಬಿದಾಸ 46. ಬೈಲಪತ್ತಾರ್ ಈ ಮೇಲಿನ ಎಲ್ಲ ಸಮುದಾಯದವರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಜಿಲ್ಲಾ ಅಧ್ಯಕ್ಷರಾದ ಎಸ್.ಬಿ.ಹೆಳವರ ಕಾರ್ಯಾಧ್ಯಕ್ಷರಾದ ಅಂಬಾಜಿ ಜೋಷಿ,ಕಾರ್ಯದರ್ಶಿ ಮುತ್ತಣ್ಣ ಭಂಡಾರಿ ತಿಳಿಸಿದ್ದಾರೆ.ಹೆಚ್ವಿನ ಮಾಹಿತಿಗಾಗಿ 9591512376,9901352141,9632820779,8722166196,7411263624 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದೆ.
Be the first to comment