ಜಿಲ್ಲಾ ಸುದ್ದಿಗಳು
ಕೆರೆಗೆ ನವಧಾನ್ಯ, ಬಳೆ ಬಿಚ್ಚೋಲೆ, ರವಿಕೆ ಕಣ, ಹರಿಶಿನ ಕುಂಕುಮ ಹಾಗೂ ತಾಂಬೂಲ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಲಾಯಿತು.
ಬಾಗಲಕೋಟೆ:ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿರುವ ತುಂಬಿದ ಹೊಂಡಕ್ಕೆ ಶುಕ್ರವಾರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಆದಿಯಾಗಿ ಗ್ರಾಮದ ಸಮಸ್ತರು ತೆರಳಿ ತುಂಬಿದ ಹೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅಧ್ಯಕ್ಷರು ತುಂಬಿದ ಕೆರೆ ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ತುಂಬಿ ಹರಿಯುವ ನದಿಗಳಿಗೆ ಕತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಹೊಂಡ, ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಹೊಂಡ,ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಅಪ್ಪಾಸಾಹೇಬ ನಾಡಗೌಡರ,ನಿವೃತ್ತ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತ ರಿಜಿಸ್ಟರ್ ಹರಿಂದ್ರನಾಥ ದೇಶಪಾಂಡೆ, ನಿವೃತ್ತ ಶಿಕ್ಷಕರಾದ ಎಸ್.ಎಮ್. ಬೆಲ್ಲದ,ಸಂಗಪ್ಪ ಹೂಗಾರ, ಮೈಲಾರಪ್ಪ ಕೊಪ್ಪದ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಕೊಪ್ಪದ, ಗಿರಿಜಮ್ಮ ಅಧಿಕಾರಿ, ನೀಲಮ್ಮ ಕಬ್ಬರಗಿ,ರೇಣುಕಾ ಕಮತರ,ರತ್ನಾ ಮಾದರ, ಉಮೇಶ ಹೂಗಾರ, ಹನಮಂತ ವಡ್ಡರ,ಭೀಮವ್ವ ತೋಟಗೇರ, ಬಿಬಿಜಾನ ಸಿಮಿಕೇರಿ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ, ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ವಜಿರಪ್ಪ ಪೂಜಾರ,ನಿಂಗಪ್ಪ ನಿಲೂಗಲ್ಲ,ಈರಣ್ಣ ಬೂದಿಹಾಳ ಹಾಗೂ ಇತರ ಸದಸ್ಯರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮುತ್ತಣ್ಣ ನಾಡಗೌಡರ,ಸಂಗಣ್ಣ ನಾಡಗೌಡರ ಹಾಗೂ ಗೌಡಪ್ಪ ಕೊಪ್ಪದ,ಶಂಕರ ಮಂಡಿ ಹಾಗೂ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
Be the first to comment