ಪೊಲೀಸ್ ಠಾಣೆಯಗಳಲ್ಲಿ ಅತಿ ಹೆಚ್ಚು ಮಾನವ ಹಕ್ಕು ಉಲ್ಲಂಘನೆ- ಸಿ.ಜೆ.ಐ ಎನ್.ವಿ. ರಮಣ ಆತಂಕ

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಕಾರವಾರ

ಮಾನವ ಹಕ್ಕುಗಳು ಮತ್ತು ಘನತೆ ಬಹಳ ಪವಿತ್ರವಾದವು. ಆದರೆ ಭಾರತದಲ್ಲಿ ಪೊಲೀಸ್‌ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎನ್ ವಿ ರಮಣ ಆತಂಕ ವ್ಯಕ್ತಪಡಿಸಿದ್ದಾರೆ.ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಪೊಲೀಸ್ ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳು” ಎಂದು ಹೇಳಿದ್ದಾರೆ.

CHETAN KENDULI

“ಸಾಂವಿಧಾನಿಕ ಘೋಷಣೆಗಳು ಮತ್ತು ಖಾತರಿಗಳ ಹೊರತಾಗಿಯೂ, ಪೋಲಿಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಬಂಧಿತ ವ್ಯಕ್ತಿಗಳಿಗೆ ದೊಡ್ಡ ಹಾನಿಯಾಗಿದೆ. ಅತಿ ಬೇಗನೆ ತೆಗೆದುಕೊಳ್ಳುವ ನಿರ್ಧಾರಗಳು ನಂತರ ಆರೋಪಿಯು ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಸೌಲಭ್ಯವುಳ್ಳ ವರ್ಗ ಸಹ ಪೊಲೀಸರ ಥರ್ಡ್ ಗ್ರೇಡ್ ಚಿಕಿತ್ಸೆಯಿಂದ (ಪೊಲೀಸರಿಂದ ಹಲ್ಲೆ, ಕಿರುಕುಳ) ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿಜೆಐ ಹೇಳಿದ್ದಾರೆ. ಆದರೂ ಅವರು ಯಾವುದೇ ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಲಿಲ್ಲ.ಪೋಲಿಸರ ಅತಿರೇಕಗಳನ್ನು ನಿಯಂತ್ರಣದಲ್ಲಿಡಲು ನಮ್ಮ ಮುಂದಿರುವ ಮಾರ್ಗವೆಂದರೆ, “ಕಾನೂನು ನೆರವು ಮತ್ತು ಉಚಿತ ಕಾನೂನು ನೆರವು ಸೇವೆಗಳ ಲಭ್ಯತೆಯ ಸಾಂವಿಧಾನಿಕ ಹಕ್ಕಿನ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದು” ಎಂದು ಅವರು ಸೂಚಿಸಿದರು.

Be the first to comment

Leave a Reply

Your email address will not be published.


*