ಜಿಲ್ಲಾ ಸುದ್ದಿಗಳು
ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ನವೆಂಬರ್ 5ರಂದು ಬಲಿಪಾಢ್ಯಮಿಯಂದು ಮುಜರಾಯಿ ಇಲಾಖೆಗೆ ಒಳಪಡುವ ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋವಿನ ಪೂಜೆಯನ್ನು ಹೇಗೆ, ಯಾವ ಸಮಯದಲ್ಲಿ ಮಾಡಬೇಕೆಂದು ಆದೇಶ ಹೊರಡಿಸಿದೆ.ಆಪ್ರಯುಕ್ತ ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಇವರೊಂದಿಗೆ ಎಲ್ಲ ಸದಸ್ಯರು,ಗ್ರಾಮದ ಹಿರಿಯರು,ಯುವಕ ಮಿತ್ರರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ
ಬಾಗಲಕೋಟೆ: ಬಲಿಪಾಡ್ಯಮಿ ಪ್ರಯುಕ್ತ ಶುಕ್ರವಾರ ಇಳಕಲ್ಲ ತಾಲೂಕು ಕೆಲೂರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನೆರವೇರಿಸಲಾಯಿತು.
ಗೋವುಗಳನ್ನು ದೇವಸ್ಥಾನಕ್ಕೆ ಕರೆತಂದು, ಸ್ನಾನ ಮಾಡಿಸಿ ದೇವಾಲಯದಲ್ಲಿ ಅರಿಶಿಣ, ಕುಂಕುಮ, ಹೂವುಗಳಿಂದ ಪೂಜಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸಿಗಳ ಗೋಗ್ರಾಸಗಳನ್ನು ಹಸುಗಳಿಗೆ ನೀಡಿ ಆರಾಧಿಸಲಾಯಿತು.
ಭಾಗವತ ಪುರಾಣದ ಪ್ರಕಾರ, ಕಾರ್ತಿಕ ಶುಕ್ಲಾ ಪಾಡ್ಯಮಿ ದಿನ ಶ್ರೀ ಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋ ಸಮೂಹವನ್ನು ರಕ್ಷಿಸಲು ಗೋಪಾಲನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಇಂದು ಗೋ ಪೂಜೆ, ಗೋವರ್ಧನ ಪೂಜೆ ನೆರವೇರಿಸಲಾಯಿತು. ಕೆಲವೆಡೆ ರೈತರು ಇದನ್ನು ಹಟ್ಟಿ ಹಬ್ಬವೆಂದು ಆಚರಿಸುವುದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಮೇಘರಾಜೇಂದ್ರ ಮಹಾಪುರುಷರು ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ವಹಿಸಿದ್ದರು, ಈ ಸಂದರ್ಭದಲ್ಲಿ ಹಿರಿಯರಾದ ಅಪ್ಪಾಸಾಹೇಬ ನಾಡಗೌಡರ,ನಿವೃತ್ತ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತ ರಿಜಿಸ್ಟರ್ ಹರಿಂದ್ರನಾಥ ದೇಶಪಾಂಡೆ,ನಿವೃತ್ತ ಶಿಕ್ಷಕರಾದ ಎಸ್.ಎಮ್.ಬೆಲ್ಲದ,ಸಂಗಪ್ಪ ಹೂಗಾರ,ಮೈಲಾರಪ್ಪ ಕೊಪ್ಪದ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಕೊಪ್ಪದ, ಗಿರಿಜಮ್ಮ ಅಧಿಕಾರಿ,ನೀಲಮ್ಮ ಕಬ್ಬರಗಿ,ರೇಣುಕಾ ಕಮತರ,ರತ್ನಾ ಮಾದರ, ಉಮೇಶ ಹೂಗಾರ, ಹನಮಂತ ವಡ್ಡರ,ಭೀಮವ್ವ ತೋಟಗೇರ, ಬಿಬಿಜಾನ ಸಿಮಿಕೇರಿ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ,ಶ್ರೀ ಮತಿ ಮಂಜುಳಾ ಯತ್ನಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ವಜಿರಪ್ಪ ಪೂಜಾರ,ನಿಂಗಪ್ಪ ನಿಲೂಗಲ್ಲ,ಈರಣ್ಣ ಬೂದಿಹಾಳ ಹಾಗೂ ಇತರ ಸದಸ್ಯರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮುತ್ತಣ್ಣ ನಾಡಗೌಡರ,ಸಂಗಣ್ಣ ನಾಡಗೌಡರ ಹಾಗೂ ಗೌಡಪ್ಪ ಕೊಪ್ಪದ,ಶಂಕರ ಮಂಡಿ ಹಾಗೂ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
Be the first to comment