ಜಿಲ್ಲಾ ಸುದ್ದಿಗಳು
ಹೊನ್ನಾವರ
ನಗರಬಸ್ತಿಕೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಂಘಟನೆಯ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳವೈದ್ಯರು ಮಾತನಾಡಿ ತಲ್ವಾರ್ ಹಿಡಿದವರು ಮಂಕಾಳವೈದ್ಯರ ಕಾರ್ಯಕರ್ತರು, ಎಂದು ಗೊಬ್ಬೆ ಹೊಡೆಯುವ ಶಾಸಕ ಸುನೀಲ್ ನಾಯ್ಕ್ ರೆ,,, ಗ್ರಾಮ ಪಂಚಾಯತ್ ಅಧ್ಯಕ್ಷನೊಬ್ಬ , ತಾಲೂಕಾ ಪಂಚಾಯತ್ ಸದಸ್ಯನ ತಲೆ ಒಡೆದಿದ್ದಾನೆ. ತಲೆ ಒಡೆದಾತ ನಿಮ್ಮ ಪಕ್ಷದ ಕಾರ್ಯಕರ್ತ?? ನಿಮ್ಮ ಪರಮ ಆಪ್ತರಲ್ಲವೇ ??? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡುವ ನಿಮಗೆ ನೈತಿಕತೆ ಇದೆಯೇ??? ಎಂದು ಮಾಜಿ ಶಾಸಕ ಮಂಕಾಳವೈದ್ಯ, ಶಾಸಕ ಸುನೀಲ್ ನಾಯ್ಕ್ ವಿರುದ್ದ ಕಿಡಿಕಾರಿದ್ದಾರೆ.ತಲ್ವಾರ್ ಹಿಡಿದವರಾಗಲಿ,, ತಲೆ ಒಡೆದವರಾಗಲಿ,, ನಮ್ಮ ಅಥವಾ ನಿಮ್ಮ ಯಾವುದೇ ಕಾರ್ಯಕರ್ತನಾದರೂ, ಅರೆಸ್ಟ ಮಾಡಿಸಿ. ಕ್ಷೇತ್ರದ ಶಾಸಕರು ನೀವಲ್ಲವೆ, ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಆದರೂ ಯಾಕೆ ಹಿಂಜರಿಯುತ್ತೀರಿ?? ನಿಮಗೆ ಧೈರ್ಯವಿಲ್ಲವೇ?? ಎಂದು ಕುಟುಕಿದರು.
ಈ ಹಿಂದೆಯೂ ಪರೇಶ್ ಮೇಸ್ತ ಮಾಗೋಡು ಪ್ರಕರಣ ಸಾಲದೆಂದು ಕೊನೆಗೆ ಹತಾಶರಾಗಿ, ಮಾವಿನಕುರ್ವಾದಲ್ಲಿ ನನಗೆ ಬಾಂಬ್ ಇಟ್ಟು ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ಗೆಲ್ಲಲು ಮಾಡಿದವರು ಯಾರೆಂದು ಇಡೀ ಜಿಲ್ಲೆ ಹಾಗೂ ರಾಜ್ಯದ ಜನ ಹೇಳುತ್ತಿದ್ದಾರೆ.
ಕೇಂದ್ರ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದ್ದರೂ ಹಿಂದೂ ಮುಖಂಡರುಗಳ ಹತ್ಯೆ ತನಿಖಾ ವರದಿ ಎಲ್ಲೋಯ್ತು?? ಎಂದು ಪ್ರಶ್ನೆ ಮಾಡಿದರು. ನಿಮ್ಮ ಶಾಸಕತ್ವದ ಅವಧಿಯಲ್ಲಿ ಪರೇಶ್ ಪ್ರಕರಣದ ಅಂತಿಮ ವರದಿ ಪಡೆದು ಆ ಕುಟುಂಬಕ್ಕಾದರೂ ನ್ಯಾಯ ಒದಗಿಸಿ ಎಂದು ಸವಾಲ್ ಹಾಕಿದರು.
Be the first to comment