ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಪ್ರೌಢಶಾಲಾಯಲ್ಲಿ ನವೆಂಬರ್ ೧ ಬಾಲ್ಯವಿವಾಹ ನಿಷೇಧ ದಿನ ಗಮನಿಸುವಿಕೆಯ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಬಾಲ್ಯವಿವಾಹ ನಿಷೇಧ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಬಾಲ್ಯವಿವಾಹ ನಿಷೇಧ ಪ್ರತಿಜ್ಞಾ ವಿಧಿಯನ್ನು ಮಾಡಿಕೊಳ್ಳಲಾಯಿತು.
ಶಾಲಾ ಮಕ್ಕಳಿಂದ ಬಾಲ್ಯವಿವಾಹ ನಿಷೇಧ ದಿನಾಚರಣೆ ಕುರಿತು ಮತ್ತು ಮಕ್ಕಳ ಸಹಾಯವಾಣಿ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು ಅದರಲ್ಲಿ ಪ್ರಥಮ – ಭಾಗ್ಯ ನರಟ್ಟಿ, ೯ನೇ ತರಗತಿ, ದ್ವಿತೀಯ – ಮಹೇಶ್ ಹಂಡಿ, ೯ನೇ ತರಗತಿ ತೃತೀಯ – ರಾಧಿಕಾ ಅಂಗಡಿ ೧೦ನೇ ತರಗತಿ ಬಹುಮಾನವನ್ನು ರೀಚ್ ಸಂಸ್ಥೆಯ ಮೂಲಕ ಶಾಲಾ ಮುಖ್ಯೋಪಾಧ್ಯಾಯರಿಂದ ಮಕ್ಕಳಿಗೆ ವಿತರಿಸಲಾಯಿತು.
ರೀಚ್ ಸಂಸ್ಥೆಯ ಸಿಬ್ಬಂದಿಯಾದ ರೇಖಾ ಬಡಿಗೇರ್ ಅವರು ಬಾಲ್ಯವಿವಾಹ ನಿಷೇಧ ದಿನಾಚರಣೆಯ ಬಗ್ಗೆ ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು ಹಾಗೂ ಮಕ್ಕಳ ಸಹಾಯವಾಣಿ – ೧೦೯೮ರ ಬಗ್ಗೆ ತಿಳಿಸಿಕೊಟ್ಟರು. ನಂತರ ಶಾಲಾ ಮುಖ್ಯೋಪಾಧ್ಯಾಯರು ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ವಿವರಿಸಿದರು. ಶ್ರೀ ಬಸವರಾಜ್ ಚಳಗೇರಿ ಅವರು ವಂದನಾರ್ಪಣೆಯನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ದೊಡ್ಡಬಸಪ್ಪ ಮುಖ್ಯಗುರುಗಳು, ಐಹೊಳೆ ಪ್ರೌಢಶಾಲೆ ಮತ್ತು ಅತಿಥಿಗಳಾಗಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಮುತ್ತಪ್ಪ ಪಟೇದ, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು, ಸ್ನೇಹ ಮಜ್ಜಿಗಿ, ವಿನುತ ಬಡಿಗೇರ, ಶಾಲಾ ಮಕ್ಕಳು ಹಾಗೂ ರೀಚ್ ಸಿಬ್ಬಂದಿಗಳು ವೇದಿಕೆ ಉಪಸ್ಥಿತರಿದ್ದರು.
Be the first to comment