ಬಾಲ್ಯ ವಿವಾಹ ನಿಷೇಧ ಕಾಯ್ದೆ : ಅರಿವು ಕಾರ್ಯಕ್ರಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಮುಗಳ್ಳೋಳ್ಳಿ ಗ್ರಾಮದಲ್ಲಿ ಬಾಲ್ಶವಿವಾಹ ನಿಷೇಧ ದಿನ ಗಮನಿಸುವಿಕೆಯನ್ನು ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಎನ್.ಎಸ್.ಗಂಟಿ ಅದ್ಶಕ್ಷರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಮಕ್ಕಳು ಸ್ವಾಗತವನ್ನು ನೀರವೇರಿಸಿದರು.

ಮಕ್ಕಳಿಂದ ಪ್ರಬಂದ, ಭಾಷಣ ಸ್ಫರ್ದೆ ಆಯೋಜಿಸಲಾಗಿತ್ತು, ರೀಚ್ ಸಂಸ್ಥೆ ಶಾರದಾ ಭಜಂತ್ರಿರವರು ಬಾಲ್ಶ ವಿವಾಹ ನಿಷೇಧ ದಿನ ಗಮನಿಸುವಿಕೆ ಎಂದು ನವಂಬರ್ ೧ ರಂದು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿದ್ದೇವೆ ಯಾಕೆಂದರೆ ನವಂಬರ್ ೧ ರಂದು ಬಾಲ್ಯವಿವಾಹ ನಿಷೇಧ ಕಾಯ್ದೆಯು ಜಾರಿಗೆ ಬಂದ ದಿನವಾದ್ದರಿಂದ ಈ ದಿನ ಬಾಲ್ಯ ವಿವಾಹ ನಿಷೇಧ ಕುರಿತಾಗಿ ಸಾರ್ವಜನಿಕರಿಗೆ ಹೆಚ್ಚಿನ ಮಟ್ಟದಲ್ಲಿ ಅರಿವು ನೀಡುವ ಸಲುವಾಗಿ ಮಾಡಬೇಕಿದೆ ಹಾಗೂ ಸರ್ಕಾರ ಈ ದಿನವನ್ನು ಬಾಲ್ಶವಿವಾಹ ನಿಷೇಧ ದಿನ ಗಮನಿಸುವಿಕೆ ಎಂದು ಸುತ್ತೋಲೆ ಹೊರಡಿಸಿ ಇಲಾಖೆಗಳಿಂದ ಆಚರಣೆ ಮೂಲಕ ಅರಿವು ನೀಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಪ್ರಬಂದ ಸ್ಪರ್ಧೇಯಲ್ಲಿ ಭಾಗವಹಿಸಿದವರಿಗೆ ಪ್ರಥಮ ಉಮಾಶ್ರೀ ಜೋಗಿನ ದ್ವೀತಿಯ ಅಂಜಲಿ ತಳವಾರ ಹಾಗೂ ತೃತೀಯ ಮಲ್ಲಿಕಾರ್ಜುನ ಪೂಜಾರಿ ಬಹುಮಾನವನ್ನು ರೀಚ್ ಸಂಸ್ಥೆಯಿಂದ ವಿತರಿಸಿದರು. ಬಾಲ್ಶವಿವಾಹ ನಿಷೇಧ ಹಾಗೂ ಆಂದೋಲನಾ ಕುರಿತಾದ ಪೋಸ್ಟರಗಳನ್ನು ವೇಧಿಕಯಲ್ಲಿದ್ದ ಮಕ್ಕಳಿಂದ ಬಿಡುಗಡೆ ಮಾಡಲಾಯಿತು.

ಬಾಲ್ಶವಿವಾಹ ನಿಷೇಧ ಕುರಿತಾಗಿ ಮಕ್ಕಳು ಮತ್ತು ಅಧಿಕಾರಿಗಳಿಂದ ಬಾಲ್ಶವಿವಾಹ ಮುಕ್ತ ಗ್ರಾಮನ್ನಾಗಿಸುತ್ತೇವೆಂದು ಪ್ರಮಾಣ ವಚನ ಮಾಡಿಸಲಾಯಿತು, ನಂತರ ಮಕ್ಕಳನ್ನು ಉದೇಶಿಸಿ ಶಾಲಾ ಮುಖ್ಶ ಗುರುಗಳಾದ ಎನ್.ಎಸ್.ಗಂಟ್ಟಿರವರು ಮಕ್ಕಳನ್ನು ಉದೇಶಿಸಿ ಮಾತನಾಡಿದರು. ವಂದನಾರ್ಪಣೆಯನ್ನು ೧೦ನೇ ತರಗತಿ ಮಕ್ಕಳು ನೇರವೇರಿಸಿದರು. ನಂತರ ಬಾಲ್ಶವಿವಾಹ ನೀಷೇದ ದಿನದ ಅಂಗವಾಗಿ ಮಕ್ಕಳಿಂದ ಗ್ರಾಮದಲ್ಲಿ ಜಾಥಾ ಮೂಲಕ ಗ್ರಾಮದ ಜನರಿಗೆ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅದ್ಶಕ್ಷತೆಯನ್ನು ಪ್ರೌಡ ಶಾಲಾ ಮುಖ್ಶಗುರುಗಳಾದ ಎನ್.ಎಸ್.ಗಂಟಿಯವರು, ಉಪಾದ್ಶಕ್ಷ ಸ್ಥಾನವನ್ನು ಬಿ.ಎಸ್. ಬಜ್ಜನವರ SDMC ಅದ್ಶಕ್ಷರು,ಮುಖ್ಶ ಅಥಿತಿಯಾಗಿ ನಿವೃತ ಶಿಕ್ಷಕರಾದಂತಹ ಹೆಚ್.ಆರ್.ಹಡಪದ. ನಿವೃತ್ತ ಶಿಕ್ಷಕರು ಹಾಗೂ ರೀಚ್ ಸಂಸ್ಥೆಯ ಶಾರದ, ಮಹಾನಂದ ಮಕ್ಕಳ ಸಹಾಯವಾಣಿ ಸಿಬ್ಬಂದಿ ರಮೇಶ್ ಹಾಗೂ ಶಾಲೆಯ ೧೨೦ ಮಕ್ಕಳು, ಶಾಲಾ ಶಿಕ್ಷಕರು ಬಾಗಿಯಾಗಿದ್ದರು.

Be the first to comment

Leave a Reply

Your email address will not be published.


*