ಗೇರುಸೊಪ್ಪ ಸೇತುವೆ ಸುನೀಲ್ ನಾಯ್ಕ್ ಅವಧಿಯಲ್ಲಿ ಮಂಜೂರಾದದ್ದು ಸಾಬೀತು ಪಡಿಸಿದರೆ,, ರಾಜಕೀಯ ನಿವೃತ್ತಿ – ಮಂಕಾಳವೈದ್ಯ …!!!

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಹೊನ್ನಾವರ

ತಾಲೂಕಿನ ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಮಂಕಾಳವೈದ್ಯ ಅವರು ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಗುದ್ದಲೀ ಪೂಜೆ ಮುಂದುವರೆದಿದೆ. ಗೇರುಸೊಪ್ಪ ಸೇತುವೆ ತಂದಿರುವುದು ನಾವು ಎಂದು ಬೊಗಳೆಬಿಡುವ ಶಾಸಕರು ಆದೇಶ ಪ್ರತಿ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಮಂಕಾಳವೈದ್ಯರು , ಶಾಸಕ ಸುನೀಲ್ ನಾಯ್ಕ್ ರಿಗೆ ನೇರ ಸವಾಲನ್ನು ಮಾಡಿದ್ದಾರೆ. 

CHETAN KENDULI

ಅಧಿಕಾರಕ್ಕೆ ಬಂದು 4 ವರ್ಷ ಆಗುತ್ತಾ ಬಂದರೂ, ಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಲಿಲ್ಲ. ನನ್ನ ಅವಧಿಯಲ್ಲಿ 7 ಸಾವಿರ ಮನೆ ಮಂಜೂರಾಗಿತ್ತು ಆದರೆ ಇವರ ಅವಧಿಯಲ್ಲಿ ಹೊಸ ಮನೆ ತರುವುದಿರಲಿ, ಮಂಜೂರಾದ ಮನೆಗಳಿಗೆ ಅನುದಾನವೂ ನೀಡಲಾಗಿಲ್ಲ. 132 ಕಾಮಗಾರಿ, 23 ಕೋಟಿ ಅನುದಾನ ತಂದಿರುವ ಬಗ್ಗೆ ರಸ್ತೆ ಬದಿಯ ಬ್ಯಾನರ್ ನೋಡಿ ನಗು ಬಂದಿದೆ. ನನ್ನ ಅವಧಿಯಲ್ಲಿ ಒಂದೊಂದು ಕಾಮಗಾರಿಗೆ 20 ರಿಂದ 30 ಕೋಟಿ ಅನುದಾನ ತಂದಿರುವೆ ಎಂದು ಕುಟುಕಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Be the first to comment

Leave a Reply

Your email address will not be published.


*