ಜಿಲ್ಲಾ ಸುದ್ದಿಗಳು
ಈಗಾಗಲೇ ಮೊದಲ ಭಾಗವಾಗಿ, ಅಕ್ಟೋಬರ್ 4ರಿಂದಲೇ ತರಬೇತಿ ಬಹಿಷ್ಕಾರವನ್ನು ಮುಂದುವರೆಸಿದ್ದಾರೆ. ಇದೀಗ ಮುಂದುವರೆದ ಭಾಗವಾಗಿ ಇಂದಿನಿಂದ ಅಕ್ಟೋಬರ್ 29ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯಲಿದ್ದಾರೆ.
ಬಾಗಲಕೋಟೆ:ಇಳಕಲ್ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿರುವ “ಕಪ್ಪು ಪಟ್ಟಿ ಧರಿಸಿ ಶಾಲಾ ಕರ್ತವ್ಯ ನಿರ್ವಹಣೆ ಚಳುವಳಿ” ಯಲ್ಲಿ ಶಾಲೆಯ ಮುಖ್ಯ ಗುರುಗಳಾದ ನಾರಾಯಣ ಚೇಗೂರ ಸಂಘದ ರಾಜ್ಯ ಮಾಧ್ಯಮ ಸಂಚಾಲಕರಾದ ಪರಶುರಾಮ ಎಸ್ ಪಮ್ಮಾರ ಚಾಲನೆ ನಿಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಮುಂದಾಗಿದೆ. ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಹಲವು ಸಭೆಗಳನ್ನ ಮಾಡಲಾಗಿದೆ.ಪದವೀಧರ ಶಿಕ್ಷಕರ ಸಮಸ್ಯೆ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿ ಮುಖ್ಯ ಶಿಕ್ಷಕರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ.ಹಾಗೆ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಒಂದು ವಾರ ಕಾಲನಡೆಯುವ ಈ ಚಳುವಳಿಗೆ ಬೆಂಬಲ ಸೂಚಿಸಿ ಜಿಲ್ಲಾ ಖಜಾಂಚಿಗಳಾದ ಮುತ್ತಣ್ಣ ಬೀಳಗಿ,ಎ ಡಿ ಬಾಗವಾನ,ರೇಣುಕಾ ಕೊಡಗಲಿ, ಪ್ರಭಾವತಿ ಹೊಸೂರ, ಮಂಜುಳಾ ಚೇಗೂರ, ಮಂಜುಳಾ ಗೌಡರ ಹಾಗೂ ಸಾಯಿರಾಬಾನು ಹೆರಕಲ್ ಉಪಸ್ಥಿತರಿದ್ದರು.
Be the first to comment