ಸ್ಥಳೀಯ ನಿವಾಸಿ ಕರೆಗೆ ಸ್ಪಂದಿಸಿದ ಆರ್. ಸಿದ್ದನಗೌಡ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದ ಶಾಸಕರ ಸಹೋದರ.

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಳಚೆ ಪ್ರದೇಶವನ್ನು ಸ್ಥಳೀಯರ ಕರೆಗೆ ಓಗೊಟ್ಟು ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ.ಪಂಚಾಯತ್ ಮಾಜಿ ಸದಸ್ಯ ಆರ್. ಸಿದ್ದನಗೌಡ ತುರವಿಹಾಳ್ ಪಟ್ಟಣದ ಸೋಮನಾಥ ನಗರದ ಎರಡನೇ ಮತ್ತು ಹನ್ನೆರಡನೇ ವಾರ್ಡ್ ನಲ್ಲಿನ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚಿಸಿ ಕೂಡಲೇ ನಿಮ್ಮ ಸಿಬ್ಬಂದಿಗಳ ಮೂಲಕ ಸ್ವಚ್ಚಗೊಳಿಸಿ ಎಂದು ತಾಕೀತು ಮಾಡಿದರು.

CHETAN KENDULI

ಪುರಸಭೆಯ ಸಿಬ್ಬಂಧಿಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲೇ ಸ್ವಚ್ಚಗೊಳಿಸಿ ಬಹುದಿನಗಳ ಕನಸು ನನಸಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಆರ್ .ಸಿದ್ದನಗೌಡ ಜನ ಸಾಮಾನ್ಯರ ಕರೆಗು ಸ್ಪಂದಿಸುವ ಸರಳ ಸಜ್ಜನಿಕೆಯ ರಾಜಕಾರಣಿ ಇಂಥಹ ನಾಯಕರು ಜನಸೇವೆಯಲ್ಲಿ ಸದಾ ಇರಬೇಕು ಎಂದು ಸ್ಥಳೀಯ ನಿವಾಸಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.

ನಂತರ ಮಾತನಾಡಿದ ಆರ್. ಸಿದ್ದನಗೌಡ ಪ್ರಸ್ತುತ ಎಂತಹ ಸನ್ನಿವೇಶ ಎಂದರೆ ಪುರಸಭೆ ಸದಸ್ಯರ ಅಧಿಕಾರಾವಧಿ ಮುಗಿದಿದ್ದು,ಸ್ಥಳೀಯ ಸರಕಾರವನ್ನು ಆಡಳಿತ ಅಧಿಕಾರಿಗಳ ಮುನ್ನುಡಿಯಲ್ಲಿ ನಡೆಯುತ್ತಿರುವ ಕಾರಣ ನಮ್ಮ ಸಹೋದರ ಶಾಸಕರಿಗೆ ಮತ್ತು ನನಗೆ ಅನೇಕ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹಂಚಿಕೊಳ್ಳುತ್ತಾರೆ ಅದರಲ್ಲೂ ಸಾಧ್ಯವಾದಷ್ಟು ಕೆಲಸ ಮಾಡಿಕೊಡುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತೇವೆ ಅದರಲ್ಲೂ ಇಂದು ಪಟ್ಟಣದ ಸೋಮನಾಥ ನಗರದ ಕೊಳಚೆ ಪ್ರದೇಶ ಸ್ವಚ್ಚತಾ ಕಾರ್ಯ ಮಾಡಿರುವುದಾಗಿದೆ ಎಂದು ಹೇಳಿದರು.ನಾವು ಯಾರೇ ಕರೆ ಮಾಡಿದರೂ ಸ್ಪಂದಿಸುವ ಮತ್ತು ಕೈಲಾದಷ್ಟು ಸಹಾಯ ಮಾಡುವ ಸ್ವಭಾವ ನಮಗೆ ಈ ಮೊದಲಿನಿಂದಲೂ ಬಂದಿದೆ ಅಧಿಕಾರ ಇದ್ದಾಗಲೂ ಅಷ್ಟೇ ಇಲ್ಲಾದದ್ದಾಗಲೂ ಅಷ್ಟೇ ,ಜನರ ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಆಗಿದೆ,ಅಧಿಕಾರ ಇರಲೇಬೇಕು ಎಂದೇನಿಲ್ಲ , ಅಧಿಕಾರ ಇದ್ದಾಗ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬಹುದು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಆರ್.ಸಿದ್ದನಗೌಡ ತುರವಿಹಾಳ್ ,ತಾ.ಪಂ.ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ, ಕಾಂಗ್ರೆಸ್ ಯುವ ಮುಖಂಡರು, ಪುರಸಭೆಯ ಮುಖ್ಯಾಧಿಕಾರಿ ಮತ್ತು ಸ್ಥಳೀಯ ನಿವಾಸಿಗಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*