ಜಿಲ್ಲಾ ಸುದ್ದಿಗಳು
ಮಸ್ಕಿ:
ಅಭಿನಂದನ್ ಸಂಸ್ಥೆಯ ಸಂಡೆ ಫರ್ ಸೋಷಲ್ ವರ್ಕ್ ಅಭಿಯಾನದಡಿಯಲ್ಲಿ ಪ್ರತಿ ವಾರದಂತೆ ಈ ವಾರವು ಸಹ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಈ ವಾರದ ಸೇವಾ ಕಾರ್ಯವನ್ನು ಮಸ್ಕಿಯ ಬಸವೇಶ್ವರ ನಗರದ ಶ್ರೀ ಪುಟ್ಟರಾಜ ಗವಾಯಿ ಮಕ್ಕಳ ಉದ್ಯಾನವನವನ್ನು ಸ್ವಚ್ಛಗೋಲಿಸಿ ಬಣ್ಣವನ್ನು ಹಚ್ಚುವ ಮೂಲಕ ಉದ್ಯಾನವನಕ್ಕೆ ನವ ಚೇತನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪಗೌಡ ಪಾಟೀಲ್ ಫೌಂಡೇಶನ್‌ನ ಅಧ್ಯಕ್ಷರಾದ ಪ್ರಸನ್ನ ಪಾಟೀಲ್ ಅವರು ಅಭಿನಂದನ್ ಸಂಸ್ಥೆಯು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ರಾಜ್ಯಾದ್ಯಂತ ಹೆರಸನ್ನು ಮಾಡಿದ್ದು, ಈ ಸಂಸ್ಥೆಯ ನೂತನ ಅಭಿಯಾನ ಆಗಿರುವಂತಹ ಸಂಡೆ ಫಾರ್ ಸೋಶಿಯಲ್ ವರ್ಕ್ ಎಂಬ ವಿಶಿಷ್ಟ ಅಭಿಯಾನವು ಯುವಕರನ್ನು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುವಂತೆ ಮಾಡುತ್ತಿದೆ. ಈ ಕಾರ್ಯದಲ್ಲಿ ಇಂದು ಮಸ್ಕಿಯ ಎಲ್ಲಾ ಸಾಮಾಜಿಕ ಸೇವಾ ಸಂಸ್ಥೆಗಳನ್ನು ತಮ್ಮೊಂದಿಗೆ ಈ ಸೇವೆಯಲ್ಲಿ ಭಾಗವಹಿಸುವಂತೆ ಮಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರ ಕಾರ್ಯವು ಶ್ಲಾಘನೀಯವಾಗಿದೆ. ಇದೇ ರೀತಿಯಲ್ಲಿ ಎಲ್ಲಾ ಸಂಸ್ಥೆಗಳು ಒಗ್ಗೂಡಿ ಸಾಮಾಜಿಕ ಸೇವೆಯಲ್ಲಿ ತೊಡಗಿದರೆ ಮಸ್ಕಿಯನ್ನು ಮಾದರಿ ನಗರವನ್ನಾಗಿ ಮಾಡುವುದು ಸುಲಭವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಾಪಗೌಡ ಪಾಟೀಲ್ ಫೌಂಡೇಶನ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಲಯನ್ಸ್ ಕ್ಲಬ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸ್ವಾಮಿ ವಿವೇಕಾನಂದ ಆಶ್ರಮದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಡಾ.ಶಿವುಶರಣಪ್ಪ ಇತ್ಲಿ ಫೌಂಡೇಶನ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಭಿನಂದನ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಬಸವೇಶ್ವರ ನಗರದ ನಾಗರೀಕರು ಉಪಸ್ಥಿತರಿದ್ದರು.
Be the first to comment