ಜಿಲ್ಲಾ ಸುದ್ದಿಗಳು
ಭಟ್ಕಳ
ಅರಣ್ಯ ವಲಯ ವ್ಯಾಪ್ತಿಯ ಶಿರಾಲಿ ಶಾಖೆಯ ಕೊಪ್ಪಾ ಮೀಸಲು ಅರಣ್ಯ ಸರ್ವೆ ನಂ. 157 ರಲ್ಲಿ ಸಾಗ ಮರ ಕಟಾವಣೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ಇಲಿಯಾಸ ವಾ ಸಾಕೊಳಗೇರಿ, ಉತ್ತರಕೊಪ್ಪಾ ಮತ್ತು ಸೋಮ ಕೃಷ್ಣ ಮರಾಠಿ, ಸಂಗೊಳಗೇ, ಉತ್ತರಕೊಪ್ಪಾ ಇಬ್ಬರು ಆರೋಪಿಗಳನ್ನು ದಿನಾಂಕ: 29-09 2021 ರಂದು ದಸ್ತಗಿರಿ ಮಾಡಲಾಯಿತು. ಅಕ್ರಮವಾಗಿ ಕಡಿತಲೆ ಮಾಡಿದ ಸಾಗವಾನಿ ತುಂಡುಗಳನ್ನು ಪರವಶಪಡಿಸಿಕೊಂಡು ಸದರಿ ಆರೋಪಿಗಳಿಂದ ರೂ25000/- ದಂಡ ವಸೂಲಿ ಮಾಡಲಾಯಿತು. ಈ ಕಾರ್ಯಚರಣೆಯಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಶ್ರೀಮತಿ ಸವಿತಾ ಆರ್. ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿಗಳಾದ ಜಗದೀಶ ನಾಯ್ಕ, ಮಧುಕುಮಾರ, ನಾಯ್ಕ, ಸಂದೀಪ, ಬಂಡಾರಿ, ಶ್ರೀಕಾಂತ ಪವಾರ, ಗಣಪತಿ ನಾಯ್ಯ, ಅರಣ್ಯ ರಕ್ಷಕರಾದ ಸಚಿನ, ಕಾಡು ಗೋಲಬಾವಿ, ಮೃತ್ಯುಂಜಯ, ಪುಂಡಲೀಕ ಮತ್ತು ವಾಹನ ಚಾಲಕರು ಪಾಲ್ಗೊಂಡಿದ್ದರು.
Be the first to comment