ರಾಜ್ಯ ಸುದ್ದಿಗಳು
ದೇವನಹಳ್ಳಿ
ಇತ್ತೀಚೆಗೆನ ದಿನಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವಾಗಲೇ ಆರ್ಥಿಕ ಸಂಕಷ್ಟ ತಲೆದೂರಿದಾಗ ಇರುವ ಜಮೀನನ್ನು ಮಾರಿಕೊಂಡು ಸಾಲ ಸೋಲ ಮಾಡಿಕೊಂಡು ಹಾಗೋ ಹೀಗೋ ಜೀವನ ಸಾಗಿಸುವ ಬಹಳಷ್ಟು ಜನರು ಇದ್ದಾರೆ. ಆದರೆ, ಇಲ್ಲೊಬ್ಬ ಯುವಕ ಕಲಿತಿದ್ದ ಗಾರೆ ಕೆಲಸವನ್ನು ಬಿಟ್ಟು ಕೃಷಿಕನಾಗಿರುವುದು ಸಾರ್ವಜನಿಕ ವಲಯದಲ್ಲಿ ಪ್ರತಿ ಯುವಕರಿಗೆ ಮಾದರಿಯಾಗಿದ್ದಾನೆ.ಕಳೆದ ವರ್ಷ ಲಾಕ್‌ಡೌನ್ ಆದ ಸಂದರ್ಭದಲ್ಲಿ ಗಾರೆ ಕೆಲಸಗಳು ಇಲ್ಲದೆ, ಕೂಲಿ ಇಲ್ಲದೆ, ಮನೆಯಲ್ಲಿ ಊಟಕ್ಕೂ ಸಹ ತೊಂದರೆಯನ್ನು ಅನುಭವಿಸಿ, ಪರದಾಡುವ ಪರಿಸ್ಥಿತಿಯನ್ನು ಎದುರಿಸಿದ್ದ ಯುವಕ ಗಿರೀಶ್ (೩೨) ತನ್ನ ಆಲೋಚನೆಯಿಂದ ಇರುವ ಸ್ವಂತ ಜಮೀನಿನಲ್ಲಿ ಕೃಷಿ ಮಾಡುವ ಪ್ರಯತ್ನ ಸತತ ಒಂದು ವರ್ಷದಿಂದ ಮಾಡುತ್ತಿದ್ದಾನೆ. ಪ್ರಸ್ತುತ ಜಮೀನಿನಲ್ಲಿ ಮಿಶ್ರ ಬೆಳೆಯನ್ನು ಬೆಳೆದಿರುವ ನವ ರೈತ ಗಿರೀಶ್ ಜಮೀನನ್ನು ಹದಗೊಳಿಸಿ, ನೀರಿನ ಕೊರತೆಯಲ್ಲಿಯೂ ಸಹ ಇರುವ ೧ ಎಕರೆ ಜಾಗದಲ್ಲಿ ಅವರೆ, ತೊಗರಿ ಮತ್ತು ಅಲಸಂದಿ ಬೆಳೆಯನ್ನು ಬೆಳೆದಿರುವುದು ವಿಶೇಷವಾಗಿದೆ.
ಸ್ವಂತ ಜಮೀನಿನಲ್ಲಿ ಕಳೆದ ಲಾಕ್‌ಡೌನ್‌ನಿಂದಲೂ ಬೆಳೆ ಇಡುತ್ತಿದ್ದನೆ. ಎರಡು ಬಾರಿ ನಷ್ಟವನ್ನು ಅನುಭವಿಸಿದ್ದೇನೆ. ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಮದ್ಯವರ್ತಿಗಳ ಆವಳಿ ಹೆಚ್ಚಾಗಿರುವುದರಿಂದ ಹಾಕಿರುವ ಬಂಡವಾಳ ಕೈಗೆ ಸೇರುತ್ತಿಲ್ಲ. ಕೂಲಿ ಕೆಲಸದವರನ್ನು ಇಟ್ಟಿಲ್ಲ. ನನ್ನ ಜೊತೆಯಾಗಿ ನನ್ನ ಪೋಷಕರು ಸಹ ಕೈಜೋಡಿಸಿರುವುದರಿಂದ ಕೂಲಿ ಹಣ ಉಳಿಯುತ್ತಿದೆ. ಸಮಗ್ರ ಕೃಷಿ ಮಾಡುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಯನ್ನು ಇಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಯುವ ರೈತ ಗಿರೀಶ್ ಹೇಳುತ್ತಾರೆ.
ಒಂದು ಎಕರೆ ಪ್ರದೇಶದಲ್ಲಿ ಬೆಳೆ ಇಡಲಾಗಿದೆ. ಒಂದೊಂದು ಕೊಯ್ಲುಗೆ ಸುಮಾರು ೧೦ ಮೂಟೆಯಷ್ಟು ಇಳುವರಿ ಬರುತ್ತದೆ. ವಾರದಲ್ಲಿ ೪೦-೬೦ ಮೂಟೆ ಸಿಗುತ್ತದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಮೊದಲು ದಳ್ಳಾಳಿಗಳ ಆವಳಿಯನ್ನು ತಪ್ಪಿಸುವ ಕೆಲಸ ಸರಕಾರ ಮಾಡಬೇಕು. ನೇರವಾಗಿ ರೈತರಿಂದ ಬೆಳೆಯನ್ನು ಖರೀದಿ ಮಾಡುವಂತಾದಾಗ ಮಾತ್ರ ರೈತರು ಬದುಕುಳಿಯಲು ಸಾದ್ಯ ಎಂದು ರೈತ ಮಹಿಳೆ ರತ್ನಮ್ಮ ಹೇಳುತ್ತಾರೆ.
ಮಕ್ಕಳು ಪಿತ್ರಾರ್ಜಿತ ಆಸ್ತಿಯನ್ನು ಡೆವಲಪರ್ಸ್‌ಗಳಿಗೆ ಮಾರಾಟ ಮಾಡಿ, ಜಮೀನು ಕಳೆದುಕೊಂಡು ಸಾಕಷ್ಟು ಸಮಸ್ಯೆ ಅನುಭವಿಸಿರುವುದನ್ನು ಕಣ್ಣಾರೆ ನೋಡಿದ್ದೇವೆ. ಇರುವ ಜಮೀನಿನಲ್ಲಿ ಏನಾದರೂ ಬೆಳೆ ಹಾಕಿದರೆ ಭೂಮಿ ಫಲ ಕೊಡುತ್ತದೆ. ಆರ್ಥಿಕವಾಗಿರಲು, ಜಮೀನಿನ ಮಾಲೀಕನಾಗಿರಲು ಹಾಗೂ ಮುಂದಿನ ಪೀಳಿಗೆಗೆ ಜಮೀನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಯುವ ರೈತ ಗಿರೀಶ್ ಸಾಧನೆ ಮೆಚ್ಚುವಂತಹದ್ದು, ಹೀಗೆ ಕೃಷಿಯಲ್ಲಿ ಆಸಕ್ತಿ ಹೊಂದಿ ಹೆಚ್ಚಿನ ಲಾಭ ಕಾಣುವಂತೆ ಆಗಬೇಕು.
– ರಮೇಶ್ | ರೈತ ಮುಖಂಡ
Be the first to comment