ಅರಣ್ಯ ಹಕ್ಕು ಕಾಯಿದೆ: ವ್ಯತಿರಿಕ್ತವಾಗಿ ಅರ್ಜಿಗಳ ವಿಲೇವಾರಿಗೆ ತೀವ್ರ ಆಕ್ಷೇಪ. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ- ಆಕೃತಿ ಬನ್ಸಾಲ್

ವರದಿ-ಕುಮಾರ್ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿರಸಿ

ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ, ನಾಮನಿರ್ಧೆಶನ ಸದಸ್ಯರ ಅನುಪಸ್ಥಿತಿಯಲ್ಲಿ ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳ ವಿಲೇವಾರಿ ಆಗುತ್ತಿರುವುದಕ್ಕೆ ಉಪ-ವಿಭಾಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು ಹಾಗೂ ಉಪ-ವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರ ಸಮಕ್ಷಮ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಇಂದು ಶಿರಸಿ ಉಪ-ವಿಭಾಗ ಅಧಿಕಾರಿ ಕಛೇರಿಯಲ್ಲಿ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಭೇಟಿಯಾದ ಸಂದರ್ಭದಲ್ಲಿ ಅರಣ್ಯವಾಸಿಗಳ ಪರ ಕಾನೂನಾತ್ಮಕ ಅಂಶಗಳನ್ನು ಪ್ರಸ್ತುತ ಪಡಿಸುತ್ತ ಆಕ್ಷೇಪಕ್ಕೆ ಸಂಬAಧಿಸಿದ ಕಾರಣಗಳನ್ನು ನಿಯೋಗವು ವಿವರಿಸಿತು.

CHETAN KENDULI

   ಆರು ಸದಸ್ಯರಿರುವ ಜಿಲ್ಲಾ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯಲ್ಲಿ ನಾಮನಿರ್ಧೆಶನದ ಸ್ಥಳೀಯ ಸಂಸ್ಥೆಯಿAದ ಆಯ್ಕೆಯಾದ ೩ ಸದಸ್ಯರ ಅನುಪಸ್ಥಿಯಲ್ಲಿ ಅರ್ಜಿ ವಿಲೇವಾರಿ ಮಾಡಬಹುದೆಂಬ ರಾಜ್ಯ ಬುಡಕಟ್ಟು ಇಲಾಖೆಯು ಪ್ರಸಕ್ತ ವರ್ಷದ ಅಗಸ್ಟ, ೩೧ ರ ಆದೇಶವು ಕಾನೂನು ಬಾಹಿರ. ಸದ್ರಿ ಆದೇಶವು ಕಾನೂನಾತ್ಮಕ ಮೌಲ್ಯತೆ ಇಲ್ಲದಿರುವದರಿಂದ ಅರೆಕಾಲಿಕ ನ್ಯಾಯಾಲಯದ ಸಮಾನವಾದ ಅರಣ್ಯ ಹಕ್ಕು ಸಮಿತಿಗಳದೀ ಆದೇಶವನ್ನು ಮಾನ್ಯತೆ ಮಾಡಲು ಬರಲಾರದು ಎಂದು ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ರಾಜ್ಯ ಅರಣ್ಯ ಹಕ್ಕು ನಿಯಂತ್ರಣ ಸಮಿತಿಯ ಮಾನ್ಯತೆ ಮಾಡದ ಆದೇಶವು ಕಾನೂನು ಬಾಹಿರವೆಂದು ಚರ್ಚೆಯ ಸಂದರ್ಭದಲ್ಲಿ ಆಕ್ಷೇಪಿಸಲಾಯಿತು.  ಪಾರಂಪರಿಕ ಅರಣ್ಯ ವಾಸಿಗಳು ಅರ್ಜಿ ಮಂಜೂರಿಗೆ ಸಂಬAಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ದಾಖಲೆಗಳಿಗೆ ಒತ್ತಾಯಿಸುವದು ಸರಿಯಿಲ್ಲ. ಅಲ್ಲದೇ, ಅರಣ್ಯ ವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು ೩ ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯ ನೀಡಿದ ಆದೇಶವನ್ನು ನಿರ್ಲಕ್ಷಿಸುವುದಕ್ಕೆ ಚರ್ಚೆಯಲ್ಲಿ ದಾಖಲೆಗಳ ಮೂಲಕ ಪ್ರಸ್ತುತ ಪಡಿಸಿರುವುದು ವಿಶೇಷವಾಗಿತ್ತು.

   ಚರ್ಚೆಯ ಸಂದರ್ಭದಲ್ಲಿ ಸಹಾಯಕ ನಿರ್ಧೆಶಕರು ಸಮಾಜ ಕಲ್ಯಾಣ ಇಲಾಖೆ, ಎಸ್ ಆರ್ ಭಟ್ ಅವರು ಉಪಸ್ಥಿತರಿದ್ದರು. ಹೋರಾಟಗಾರರ ನಿಯೋಗದಲ್ಲಿ ಲಕ್ಷö್ಮಣ ಮಾಳ್ಳಕ್ಕನವರ, ರಾಜು ನರೇಬೈಲ್, ಶಿವು ಪೂಜಾರಿ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಇಬ್ರಾಹಿಂ ಇಮಾಮ್ ಸಾಬ್ ಗೌಡಳ್ಳಿ, ಮಂಜು ನಾಯ್ಕ ಬಿಳೂರು, ನಾರಾಯಣಪ್ಪ ಉಮ್ಮಡಿ, ಗಣೇಶ ನಾಯ್ಕ ಬಿಳೂರು, ಶಿವಾನಂದ ಪೂಜಾರಿ ಜಡ್ಡಿಗದ್ದೆ, ಅಣ್ಣಪ್ಪ ನಾಯ್ಕ ಕಬಕುಳಿ, ಶಂಕರ ಪೂಜಾರಿ ತಟ್ಟಿಗದ್ದೆ, ವಿಘ್ನೇಶ್ವರ ಪೂಜಾರಿ ಜ್ಡಡಿಗದ್ದೆ, ಶಿವಾನಂದ ಪೂಜಾರಿ ಜಡ್ಡಿಗದ್ದೆ, ಮಂಜು ನಾಯ್ಕ ಕಬಕುಳಿ ಮುಂತಾದವರು ಭಾಗವಹಿಸಿದ್ದರು.ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ:

   ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಮಂಜೂರಿ ಪ್ರಕ್ರೀಯೆ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿಗೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆತಂಕ ಮಾಡುವುದು, ಒಕ್ಕಲೆಬ್ಬಿಸುವುದು, ಅಗಳ ಹೊಡೆಯುವುದು ಕಾನೂನು ಬಾಹಿರ ಕೃತ್ಯ ಮಾಡುತ್ತಿರುವ ಅರಣ್ಯ ಸಿಬ್ಬಂದಿಗಳ ವಿರುದ್ಧ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂದಿನ ೧೫ ದಿನಗಳಲ್ಲಿ ಅರಣ್ಯ ಅಧಿಕಾರಿಗಳ ಸಮಕ್ಷಮದಲ್ಲಿ ಅರಣ್ಯ ಅಧಿಕಾರಿಗಳು ಎಸಗುತ್ತಿರುವ ದೌರ್ಜನ್ಯದ ವಿರುದ್ಧ ಸಭೆ ಕರೆಯಲು ಆಕೃತಿ ಬನ್ಸಾಲ್ ಅವರಿಗೆ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಅಗ್ರಹಿಸಿದರು.ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ: ಚರ್ಚೆಯ ನಂತರ ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಅರಣ್ಯವಾಸಿಗಳಿಗೆ ನ್ಯಾಯ ನೀಡುವ ದಿಶೆಯಲ್ಲಿ ಕಾನೂನಾತ್ಮಕ ಕಾರ್ಯ ನಿರ್ವಹಿಸಲಾಗುವುದೆಂದು ಉಪ-ವಿಭಾಗ ಅಧಿಕಾರಿ ಆಕೃತಿ ಬನ್ಸಾಲ್ ಅವರು ಈ ಸಂದರ್ಭದಲ್ಲಿ ಹೆಳಿದರು.

Be the first to comment

Leave a Reply

Your email address will not be published.


*