ಜಿಲ್ಲಾ ಸುದ್ದಿ:
ಮುದ್ದೇಬಿಹಾಳ: ಮುದ್ದೇಬಿಹಾಳ ತಾಲೂಕಿನ ಸವಿತಾ ಸಮಾಜದ ಹಿರಿಯರಿಂದ ವಿಶ್ವ ಕ್ಷೌರಿಕ ದಿನಾಚರಣೆ ಅಂಗವಾಗಿ ಇಲ್ಲಿನ ತಾಲೂಕಾ ಆಸ್ಪತ್ರೆಯ ಬಡ ರೋಗಿಗಳಿಗೆ ಹಾಲು ಬಿಸ್ಕೆತ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಸವಿತಾ ಸಮಾಜದ ಅಧ್ಯಕ್ಷ ರವಿ ತೆಲಂಗಿ, ಕ್ಷೌರಿಕ ಕಾರ್ಯ ಎಂದರೆ ಇಂದಿನ ದಿನಗಳಲ್ಲಿ ಹೀನವಾಗಿ ನೋಡಲಾಗುತ್ತಿದೆ. ಆದರೆ ಇತಿಹಾಸದ ಪುಟ ತಿರುವಿ ಹರಪ್ಪ ಮತ್ತು ಇಜಿಪ್ಟಿನ್ ನಾಗರಿಕತೆಯ ಶಾಸನ ದಾಖಲೆಗಳನ್ನು ಅಧ್ಯಯನ ಮಾಡಿದರೆ ಕ್ಷೌರಿಕ ಜನಾಂಗದ ಬಗ್ಗೆ ತಿಳಿಯುತ್ತದೆ. ಇಂದಿನ ದಿನಗಳಲ್ಲಿ ಕ್ಷೌರಿಕ ಜನಾಂಗದವರನ್ನು ಹೀನ ಜನಾಂಗ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ದೇಶವನ್ನಾಳಿದ ಬಿಜ್ಜಳ ರಾಜ ಸೇರಿದಂತೆ ಇನ್ನೂ ಅನೇಕ ಮಹಾನರು ಕ್ಷೌರಿಕ ಜನಾಂಗದಲ್ಲಿ ಹುಟ್ಟಿ ಇತಿಹಾಸದ ಪುಟ ಸೇರಿದ್ದಾರೆ. ಆದರೆ ಬ್ರಿಟಿಷ್ ಮತ್ತು ಭಾರತದ ಕೆಲ ಪಂಡಿತರ ಕುಟೀಲತನಕ್ಕೆ ಕ್ಷೌರಿಕ ಜನಾಂಗವು ಅವನತಿಯತ್ತ ಸಾಗಿತು. ಆದರೆ ಸರಕಾರ ಇದರ ಬಗ್ಗೆ ಕೂಡಲೆ ಕ್ರಮ ತಗೆದುಕೊಂಡು ಕ್ಷೌರಿಕ ಜನಾಂಗಕ್ಕೆ ವಿಶೆಷ ಯೋಜನೆಯನ್ನು ರೂಪಿಸಿ ಮೀಸಲಾಯಿತಿ ನೀಡಿ ಜನಾಂಗದವರಿಗೆ ನ್ಯಾಯ ಒದಗಿಸುವಂತಾಗಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಾಲ್ಲೂಕಿನ ಆರೋಗ್ಯ ಅಧಿಕಾರಿ ಸತೀಶ ತಿವಾರಿ , ಆಡಳಿತ ವೈಧ್ಯಾಧಿಕಾರಿ ಡಾ ಅನಿಲ್ ಕುಮಾರ್ ಶೇಗುಣಸಿ , ಸಂಜಯ್ ಬೋಸ್ಲೇ, ರಾಜು ದೇವೂರ್, ಡೂಂಗ್ರಿಸಾಬ್ ಕುಡಚಿ ಹಾಗೂ ಸವಿತ ಸಮಾಜದ ಗೌರವಧ್ಯಕ್ಷರಾದ ಮಲ್ಲಣ್ಣ ತೇಲಂಗಿ ದೇವೇಂದ್ರ ಶಹಾಪೂರ , ಈರಣ್ಣ ಈಡ್ಲೂರ್ , ಮಹೇಶ ತೇಲಂಗಿ, ಭರತ ಹಡಪದ, ಮಹಾದೇವ ಹಡಪದ , ನಾಗರಾಜ ತೇಲಂಗಿ ಇದ್ದರು.
Be the first to comment