ರಾಜ್ಯ ಸುದ್ದಿ:
ಮುದ್ದೇಬಿಹಾಳ:
ಆಯುಷ್ಮಾನ ಭಾರತ ಕರ್ನಾಟಕ ಅರೋಗ್ಯ ಕಾರ್ಡ ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳೆಗೆ ಇದ್ದವರಿಗೆ ಮಾತ್ರವಲ್ಲದೆ ಮೇಲಿದ್ದವರೂ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಹಸಿಲ್ದಾರ ವಿನಯಕುಮಾರ ಪಾಟೀಲ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಇಂದಿರಾ ನಗರದ ಟಿ.ಎಸ್.ಎಸ್. ಶಾಲೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕದ ಪಾಕ್ಷಿಕ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
60ಕೋಟಿ ಜನರಿಗೆ ಈ ಯೋಜನೆಯ ಸೌಲಭ್ಯ ನೀಡಲು ರೂಪಿಸಲಾಗಿದೆ. ಭಾರತ ಆರ್ಥಿಕ ಉತ್ಪನ್ನದಲ್ಲಿ 100ರೂಪಾಯಿಯಲ್ಲಿ 1.40ಪೈಸೆ ಮಾತ್ರ ನಾವು ನಮ್ಮ ಆರೋಗ್ಯಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಆದ್ದರಿಂದ ಆರೋಗ್ಯ ವಿಭಾಗದಲ್ಲಿ ಜಿಡಿಪಿ ಹೆಚ್ಚೆಗೆ ಮಾಡಲು ಈ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗಿದೆ. ಆದರೆ ಆಯುಷ್ಮಾನ ಭಾರತ ತಾಲೂಕಿನ ಯಾವಬ್ಬರಿಗೂ ಲಾಗೂ ಆಗದರೀತಿಯಲ್ಲಿ ತಾಲೂಕಿನ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಮಾತನಾಡಿ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಮುಖ್ಯವಾಗಿ ಶಸ್ತ್ರಚಿಕಿತ್ಸೆ ಗೆ ಅನುಕೂಲವಾಗಲಿದೆ. ವರ್ಷಕ್ಕೆ 5ಲಕ್ಷದ ವರೆಗೆ ಸರಕಾರ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ ನೀಡುತ್ತದೆ. ಅಲ್ಲದೇ ಇ ಯೋಜನೆಯು ಎಪಿಎಲ್ ಕಾರ್ಡ ಹೊಂದಿದವರಿಗೂ ಲಾಗೂ ಆಗುತ್ತಿದ್ದು ಇಂತಹ ಕುಟುಂಬಕ್ಕೆ ಶೇ.30ರಷ್ಟು ಶಸ್ತ್ರಚಿಕಿತ್ಸೆಯ ಹಣ ನೀಡಲಾಗುತ್ತದೆ ಇನ್ನೂ ಸರಕಾರಿ ನೌಕರಿಯಸ್ಥರಿಗೂ ಈ ಯೋಜನೆಯ ಅರ್ಧ ಸೌಲಭ್ಯ ಲಾಗು ಆಗುತ್ತದೆ. ಕಾರ್ಡ ಪಡೆಯಲು ಸ್ಥಳೀಯ ಆರೋಗ್ಯ ಕೇಂದ್ರ ಬೇಟಿ ನೀಡಬಹುದು ಎಂದು ಹೇಳಿದರು.
ಇದೇ ವೇಳೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾದ ಜಿ.ಎಸ್.ಹಿರೇಮಠ, ಜೆ.ಎಸ್.ಬಿರಾದಾರ, ಆರೋಗ್ಯ ಮಿತ್ರ ಬಸವರಾಜ ತಂಗಡಗಿ, ಎಸ್.ಆರ್.ಸಜ್ಜನ ಹಾಗೂ ಆರ್.ಕೆ.ಎಸ್.ಕೆ. ಸಿಬ್ಬಂದಿ. ಎ.ಆರ್.ಪಿ. ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
Be the first to comment