ಮೇಕೆದಾಟು ಯೋಜನೆ ಅನುಷ್ಠಾನಗೊಲಿಸುವಂತೆ ಸೆ.23 ರಿಂದ ಸೆ.28ರವರೆ ಮೇಕದಾಟಿನಿಂದ ವಿಧಾನಸೌಧವರೆಗೆ ಪಾದಯಾತ್ರೆ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ ಮೇಕೆದಾಟು ಯೋಜನೆಯ ಅನುಷ್ಠಾನವನ್ನು ಬಯಲು ಸೀಮೆ ಪ್ರಾಂತದ ಜನರು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ ಸಮುದ್ರಕ್ಕೆ ಹರಿದು ವೃತಾ ಪೋಲಾಗುತ್ತಿರುವ ನೀರನ್ನು ಅಣೆಕಟ್ಟು ಕಟ್ಟಿ ಶೇಖರಿಸಿ ಅದನ್ನು ಕುಡಿಯುವ ಹಾಗು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವಂತೆ ಒತ್ತಾಯಿಸಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡು ಸರಕಾರದ ಗಮನ ಸೆಳೆಯಲಿದ್ದೇವೆ ಎಂದು ಪ್ರೊ.ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗು ಹಸಿರುಸೇನೆ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಬಯಲು ಸೀಮೆ ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಕೋಟ್ಯಾಂತರ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಬಹುದಾಗಿದೆ. ಈ ಯೋಜನೆಯಲ್ಲಿ ಉತ್ಪಾದನೆಯಾಗುವ 400 ಮೆಗಾವ್ಯಾಟ್ ವಿದ್ಯುತ್‌ನಿಂದ ರೈತರ ಹಾಗು ರಾಜ್ಯದ ಅಭಿವೃದ್ದಿಗೆ ಸಹಕಾರಿಯಾಗಲಿದೆ,
ಎತ್ತಿನ ಹೋಳೆ ನೀರಿಗೆ 24 ಸಾವಿರ ಕೋಟಿ ಹಣ ತೆಗೆದಿಟ್ಟಿದ್ದಾರೆ ಆದರೆ ಎತ್ತಿನ ಹೋಳೆ ನೀರು ಬರುವುದಿಲ್ಲ. ಆಗಾಗಿ ಎಚ್.ಎನ್‌ವ್ಯಾಲಿ ಹಾಗು ಕೆ.ಸಿ.ವ್ಯಾಲಿ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸುತ್ತಿದ್ದಾರೆ. ಆ ನೀರು ಕುಡಿಯಲು ಯೋಗ್ಯವಿಲ್ಲ. ಮೇಕೆದಾಟಿನಿಂದ 65 ಟಿ.ಎಂ.ಸಿ ನೀರು ಸಿಗಲಿದ್ದು ಸರಕಾರ ಹಾಗು ಜನಪ್ರತಿನಿಧಿಗಳಿಗೆ ಅರಿವಿಲ್ಲವೆ. ಹಾಗಾಗಿ ಸರಕಾರದ ಕಣ್ಣುತೆರೆಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯ ಆದಿಚುಂಚನಗಿರಿ ಮಠದ ನಿರ್ಮಾಲಾನಾಂದ ಸ್ವಾಮಿಜೀಯವರು ನೇತೃತ್ವದಲ್ಲಿ ಯಾತ್ರೆನಡೆಯಲಿದೆ. ಮುಖ್ಯಮಂತ್ರಿಗಳು ತಕ್ಷಣ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ತರಬೇಕು ಎಂದರು.ಕರ್ನಾಟಕ ರಕ್ಷಣಾವೇದಿಕೆ (ಕನ್ನಡಿಗರ ಸಾರಥ್ಯದಲ್ಲಿ) ರಾಜ್ಯಾಧ್ಯಕ್ಷ ಹಗಲಗುರ್ಕಿ ಛಲಪತಿ ಮಾತನಾಡಿ ಮೇಕೆದಾಟು ಯೋಜನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಯಲು ಸೀಮೆ ಜನ ನೀರಿಲ್ಲದೆ ತತ್ತರಿಸಿಹೋಗಿದ್ದಾರೆ. ಹಲವಾರು ಹೋರಾಟದ ಪ್ರತಿಫಲವಾಗಿ ಬಯಲು ಸೀಮೆಗೆ ಕೊಳಚೆ ನೀರು ನೀಡುತ್ತಿದ್ದಾರೆ. ಈ ಬಯಲು ಸೀಮೆ ಪ್ರದೇಶಗಳಿಂದಲೇ ಅತಿಹೆಚು ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿವೆ. ಇಂತಹ ಭಾಗಕ್ಕೆ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲದ ಸರಕಾರ ಹಾಗು ರಾಜಕಾರಣಿಗಳು ಕಣ್ಣುತೆರೆಯಬೇಕು. ತಕ್ಷಣ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಇಲ್ಲವಾದರೆ 6 ಜಿಲ್ಲೆಗಳ ಬಂದ್ ಮಾಡಿ ಉಗ್ರಹೋರಾಟ ಮಾಡಲು ತೀರ್ಮಾನಿಸಿದ್ದೇವೆ.

CHETAN KENDULI

ಪ್ರೊ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ ರಾಜ್ಯ ಹಾಗು ಕೇಂದ್ರ ಸರಕಾರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದು ಆದಷ್ಟು ಶೀಘ್ರವಾಗಿ ಶಿಲಾನ್ಯಾಸವನ್ನು ಮಾಡುವ ಮೂಲಕ ಅಣೆಕಟ್ಟು ನಿರ್ಮಾಣ ಕಾರ್ಯ ಮೇಕೆದಾಟಿನಲ್ಲಿ ಪ್ರಾರಂಭಿಸಬೆಕೆಂದು ಒತ್ತಾಯ ಮಾಡುವ ನಿಟ್ಟಿನಲ್ಲಿ ಸೆ.23 ರಿಂದ ಸೆ.28 ಐದು ದಿನಗಳ ಕಾಲ ಮೇಕೆದಾಟಿನಿಂದ ವಿಧಾನಸೌಧಕ್ಕೆ ಪಾದಯಾತ್ರೆಯನ್ನು ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ಹಮ್ಮಿಕೊಂಡಿದ್ದು ಯಾತ್ರೆಯಲ್ಲಿ ಕನ್ನಡಪರ, ದಲಿತಪರ, ಕಾರ್ಮಿಕ ಸಂಘಟನೆ, ಮಹಿಳಾ, ವಕೀಲರು, ವಿದ್ಯಾರ್ಥಿಗಳು ಸಹಕಾರಿ ಸಂಘ, ಸ್ಥಳಿಯ ಸಂಸ್ಥೆ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.ಇದೆ ವೇಳೆ ಬೆಂ.ಗ್ರಾ. ಜಿಲ್ಲಾ ಅಧ್ಯಕ್ಷ ನಾಗೇಶ್, ಸಂಚಾಲಕಿ ಶಿಲ್ಪ, ಮಹಿಳಾಯುವಘಟಕ, ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗು ಹಸಿರುಸೇನೆ, ಚಿಕ್ಕಬಳ್ಳಾಪುರ ಜಿಲ್ಲೆ ಸಂಚಾಲಕಿ ಪಾರಿಜಾತ, ಜಿಲ್ಲಾ ಕಾರ್ಯದರ್ಶಿ ಮುನಿರಾಜು. ಬೆಂಗಳೂರು ನಗರ ಘಟಕ ಜಿಲ್ಲಾಧ್ಯಕ್ಷ ರಾಮಣ್ಣ, ಕೃಷ್ಣಾರೆಡ್ಡಿ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*