ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದ ಶಾಸಕ ದಿನಕರ ಶೆಟ್ಟಿ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕುಮಟಾ

ಕುಮಟಾ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ದಿನಕರ ಶೆಟ್ಟಿ ಯವರು 108 ಆಂಬ್ಯುಲೆನ್ಸ್ ನ್ನು ಇಂದು (ಶನಿವಾರ) ಲೋಕಾರ್ಪಣೆಗೊಳಿಸಿದರು.ಕುಮಟಾ ತಾಲೂಕಿಗೆ ನೂತನವಾಗಿ ಆಗಮಿಸಿರುವ ಹೈಟೆಕ್ 108 ಆಂಬ್ಯುಲೆನ್ಸ್ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಳಿಸಿ ನಂತರ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ಬಿಜೆಪಿ ಸರ್ಕಾರ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆಧ್ಯತೆ ನೀಡಿದ್ದು ರಾಜ್ಯದಲ್ಲಿ 110 ನೂತನ ಆಂಬ್ಯುಲೆನ್ಸ್ ಬಿಡುಗಡೆ ಮಾಡಿದೆ. ಅದರಂತೆ ಕುಮಟಾ ತಾಲೂಕಿಗೂ ಒಂದು ಹೊಸ ಆಂಬ್ಯುಲೆನ್ಸ್ ನೀಡಿದ್ದಾರೆ. ಈಗಿರುವ 108 ಆಂಬ್ಯುಲೆನ್ಸ್ ಹಳೆಯದಾಗಿದ್ದು ಹೊಸ ಆಂಬ್ಯುಲೆನ್ಸ್ ನೀಡುವಂತೆ ಆರೋಗ್ಯ ಸಚಿವ ಸುಧಾಕರ ಬಳಿ ವಿನಂತಿಸಲಾಗಿದ್ದು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ನೂತನ ಆಂಬ್ಯುಲೆನ್ಸ್ ನೀಡಿದ್ದಾರೆ. ಇದು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

CHETAN KENDULI

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಗಣೇಶ್ ನಾಯ್ಕ, ತಾಲೂಕಾ ಆರೋಗ್ಯ ಅಧಿಕಾರಿ ಆಜ್ಞಾ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತ್ ಕುಮಾರ್ ಗಾಂವಕರ್, ಪ್ರಮುಖರಾದ ಎಮ್ ಎನ್ ಹೆಗಡೆ, ಶೈಲಾ ಗೌಡ, ಪಲ್ಲವಿ ಮಡಿವಾಳ, ಆದಿತ್ಯಾ ನಾಯ್ಕ, ವಿನಾಯಕ ನಾಯ್ಕ, ಪ್ರಶಾಂತ್ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.

Be the first to comment

Leave a Reply

Your email address will not be published.


*