ಜಿಲ್ಲಾ ಸುದ್ದಿಗಳು
ಮಸ್ಕಿ
ಭಾರತ ವಿದ್ಯಾರ್ಥಿ ಒಕ್ಕೂಟ ಮಸ್ಕಿ ತಾಲೂಕ ಸಮಿತಿ ವತಿಯಿಂದ ಇಂದು ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ವಿಧ್ಯಾರ್ಥಿನಿಯರ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆ ವಿಧಿಸಿ ಹಾಗೂ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.
ಮಸ್ಕಿ ಪಟ್ಟಣದ ಅಶೋಕ ವೃತ್ತದಿಂದ ಪ್ರಮುಖ ನಗರಲ್ಲಿ ಮೆರವಣಿಗೆ ಮೂಲಕ ಡಾ ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಪ್ರತಿಭಟನೆ ಮಾಡುವುದರ ಮುಖಾಂತರ ಅತ್ಯಾಚಾರ ಹಾಗೂ ದೌರ್ಜನ್ಯ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಹಳೆ ಬಸ್ ನಿಲ್ದಾಣದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ತಹಸೀಲ್ದಾರರಾದ ಕವಿತಾ.ಆರ್ ಇವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ವೀರಭದ್ರ ಕೊಠಾರಿ ಮಸ್ಕಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೀಚ ಕೃತ್ಯಗಳು ಮೇಲಿಂದ ಮೇಲೆ ಮಹಿಳೆಯರನ್ನು ಗುರಿಯಾಗಿಟ್ಟು ಹೆಚ್ಚು ಅತ್ಯಾಚಾರ ಮಾಡುತ್ತಿರುವುದು ಖಂಡನೀಯ ಇಂತಹ ಕೃತ್ಯ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ವಿದ್ಯಾರ್ಥಿ ಒಕ್ಕೂಟ ದಿಂದ ಒತ್ತಾಯಿಸಲಾಯಿತು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದಂತಹ ವೀರಭದ್ರ ಕೊಠಾರಿ ಮಸ್ಕಿ, ಅರ್ಪಿತಾ, ರಂಗಮ್ಮ, ಆಲಂಬಾಷ, ಇಬ್ರಾಹಿಂ, ಸುಮನ್ ಪೂಜಾರಿ, ಹಾಗೂ ಎಲ್ಲಾ ಕಾಲೇಜುಗಳ ಉಪನ್ಯಾಸಕರು, ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಈ ಪ್ರತಿಭಟನೆಯಲ್ಲಿ ಶಾಸಕರ ಪುತ್ರರಾದ ಸತೀಶ್ ಗೌಡ ತುರುವಿಹಾಳ ಇತರರು ಭಾಗಿಯಾಗಿದ್ದರು.
Be the first to comment