ರಾಜ್ಯದಲ್ಲಿಯೇ ಮೊದಲ ಬಾರಿಗೆ 6 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ; ಮೀನುಗಾರಿಕಾ ತೇಲುವ ಜಟ್ಟಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಮಂಗಳೂರು

ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರದ ಹೊಯಿಗೆ ಬಜಾರ್‌ ಸಮೀಪ ತೇಲುವ ಜಟ್ಟಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೀನುಗಾರಿಕಾ ಕ್ಷೇತ್ರದಲ್ಲಿ ನೂತನ ಪ್ರಯೋಗಗಳನ್ನು ನಡೆಸಲಾಗುತ್ತಿದೆ.ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಉಪಯೋಗವಾಗಲಿದೆ. ಈಗ ಇರುವ ಜಟ್ಟಿಯಲ್ಲಿ ನೀರಿನ ಮಟ್ಟದಲ್ಲಿ ಏರಿಳಿತವಾಗುವಂತೆ ಬೋಟ್​ಗಳಲ್ಲಿ ಅನ್‌ಲೋಡಿಂಗ್ ಸಮಸ್ಯೆಯಾಗುತ್ತದೆ.

(ಕೆಎಫ್​ಡಿಸಿ) ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಾಣವಾಗುವ ಈ ತೇಲುವ ಜಟ್ಟಿಗೆ 6 ಕೋಟಿ ರೂ. ಬಿಡುಗಡೆಯಾಗಿದ್ದು ಟೆಂಡರ್​ ಆಹ್ವಾನ ಮಾಡಲಾಗಿದೆ. ಸೆ.27ಕ್ಕೆ ಈ ಪ್ರಕ್ರಿಯೆ ಕೊನೆಗೊಳ್ಳಲಿದೆ. ಪೈಲಟ್ ಯೋಜನೆಯಾಗಿ ತೆಗೆದುಕೊಂಡ ಹಿನ್ನೆಲೆ ಮುಂದೆ ಉಡುಪಿಯ ಮಲ್ಪೆಯಲ್ಲೂ ತೇಲುವ ಜಟ್ಟಿ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದಕ್ಕಾಗಿ ಹಣ ಬಿಡುಗಡೆಯ ನಿರೀಕ್ಷೆ ಇದೆ.

CHETAN KENDULI

ಈ ಜಟ್ಟಿ 60 ಮೀ. ಉದ್ದವಿದ್ದು, 6 ಮೀ. ಅಗಲವಿರಲಿದೆ. 1ಮೀಟರ್‌ನಷ್ಟು ದಪ್ಪವಿದ್ದು, 180 ಟನ್ ತೂಕವಿರಲಿದೆ. 360 ಟನ್ ಧಾರಣ ಸಾಮರ್ಥ್ಯ ಹೊಂದಿದೆ. ಸದ್ಯದ ಮಟ್ಟಿಗೆ 200 ನಾಡದೋಣಿಗಳು ಹಾಗೂ ಇನ್ನಿತರ ಮರದ ಬೋಟ್​ಗಳಿಗೆ ಇಲ್ಲಿ ನಿಲುಗಡೆ ಮತ್ತು ಮೀನುಗಳ ಅನ್ಲೋಡ್ ಮಾಡಲು ಈ ತೇಲುವ ಜಟ್ಟಿ ಸಹಕಾರಿಯಾಗಲಿದೆ. ತೇಲುವ ಜಟ್ಟಿಯಲ್ಲಿ ನಾಡದೋಣಿ, ಸಾಂಪ್ರಾದಾಯಿಕ ದೋಣಿಗಳಿಗೆ ಆದ್ಯತೆ ನೀಡಲಾಗುತ್ತದೆ.ಈ ತೇಲುವ ಜಟ್ಟಿಯು ನೀರಿನ ತಳಭಾಗದಲ್ಲಿ ನೂತನ ತಂತ್ರಜ್ಞಾನದ ಮೂಲಕ ರಬ್ಬರ್ ಅಳವಡಿಕೆ ಮಾಡಿ ಮೇಲ್ಮೈಗೆ ಕಾಂಕ್ರೀಟ್ ತುಂಬುವ ಮೂಲಕ ಜಟ್ಟಿ ನಿರ್ಮಾಣವಾಗಲಿದೆ.ಈ ತೇಲುವ ಜಟ್ಟಿಯು ನೂತನ ಪರಿಕಲ್ಪನೆಯಲ್ಲಿ ನಿರ್ಮಾಣವಾಗುತ್ತಿದೆ. ದೋಣಿಗಳಲ್ಲಿ ತಂದಿರುವ ಮೀನುಗಳನ್ನು ತೇಲುವ ಜಟ್ಟಿಗಳಲ್ಲಿ ಅನ್​ಲೋಡ್​ ಮಾಡಿ ವಾಹನಗಳ ಮೂಲಕ ದಡಕ್ಕೆ ತರಬಹುದು ಇದರ ಮೂಲಕ‌ ಜಟ್ಟಿಗೆ ಸಣ್ಣ ಪ್ರಮಾಣದ ವಾಹನಗಳ ಸಂಚಾರ ಮಾಡಬಹುದು.

ಉಪಯೋಗವೇನು?:ತೇಲುವ ಜಟ್ಟಿಯಲ್ಲಿ ಈ ಸಮಸ್ಯೆಯಿಲ್ಲ. ನೀರಿನ ಏರಿಳಿತಕ್ಕೆ ತಕ್ಕಂತೆ ಜಟ್ಟಿಯೂ ಮೇಲೆ ಕೆಳಗೆ ಹೋಗುತ್ತದೆ. ಅಲ್ಲದೆ ಅನ್​ಲೋಡ್​ಗೆ ಬರುವ ಸಣ್ಣ ಬೋಟ್​ಗಳಲ್ಲಿ ಮಂಜುಗಡ್ಡೆ ಇರುವುದಿಲ್ಲ. ಅಂತಹ ದೋಣಿಗಳಿಗೆ ಜಟ್ಟಿ ಸಹಾಯವಾಗಲಿದೆ. ಅಲ್ಲದೆ, ಈ ತೇಲುವ ಜಟ್ಟಿಯನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸಲು ಸಾಧ್ಯವಿದೆ. ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಉಪಯೋಗವಾಗಲಿದೆ. ಈಗ ಇರುವ ಜಟ್ಟಿಯಲ್ಲಿ ನೀರಿನ ಮಟ್ಟದಲ್ಲಿ ಏರಿಳಿತವಾಗುವಂತೆ ಬೋಟ್​ಗಳಲ್ಲಿ ಅನ್‌ಲೋಡಿಂಗ್ ಸಮಸ್ಯೆಯಾಗುತ್ತದೆ. ಆದರೆ, ತೇಲುವ ಜಟ್ಟಿಯಲ್ಲಿ ಈ ಸಮಸ್ಯೆ ಇರುವುದಿಲ್ಲ. ಕೆಎಫ್​ಡಿಸಿ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿದ್ದಾರೆ.

Be the first to comment

Leave a Reply

Your email address will not be published.


*