ಜಿಲ್ಲಾ ಸುದ್ದಿಗಳು
ಬಾಗಲಕೋಟೆ: (ಕೆಲೂರ)ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳ ಬಾಲ್ಯ ವಿವಾಹ ತಡೆಗಟ್ಟಲು ಮುಂಜಾಗ್ರತಾ ಅರಿವಿಗಾಗಿ “ತೆರೆದ ಮನೆ” ಎಮಬ ಕಾರ್ಯಕ್ರಮವನ್ನು ಸಹಾಯವಾಣಿ-1098ರವರ ಮೂಲಕ ನಡೆಸಲಾಯಿತು.
ಕೆಲೂರ ಗ್ರಾಮದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಳವಾಗಿದ್ದು ಬರಳೆಣಿಕೆ ಪ್ರಕರಣಗಳು ಮಾತ್ರ ಮಕ್ಕಳ ಸಹಾಯವಾಣಿ-1098 ಕೇಂದ್ರಕ್ಕೆ ದಾಖಲಾಗಿವೆ.ಈ ಕುರಿತು ಅರಿವು ನೀಡುವುದು ತುಂಬಾ ಅವಶ್ಯಕವಾಗಿದೆ.ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಅವಶ್ಯಕವಿದೆ ಎಂದು ಬಸಲಿಂಗಪ್ಪ ನೀರಲಕೇರಿ ಸಂಯೋಜಕರು ಮಕ್ಕಳ ಸಹಾಯವಾಣಿ-1098 ಇವರು ಮಾತನಾಡಿ ಬಾಲ್ಯವಿವಾಹ ತಡೆಗಟ್ಟುವುದರಲ್ಲಿ ಪಾಲಕರ ಪಾತ್ರ ಮಹತ್ವವಾದದ್ದು,ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳನ್ನ ಸಾವಿನ ಕೂಪಕ್ಕೆ ತಳ್ಳಿದಂತಾಗುತ್ತದೆ.ಇದುವರೆಗೂ ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದು,ಯಾರು ಕೂಡಾ ಇದರ ಬಗ್ಗೆ ನಿಷ್ಕಾಳಜಿ ಮಾಡುವಂತಿಲ್ಲ ಎಂದರು.
ಮಕ್ಕಳು ಠಾಣೆಗೆ ಬಂದರೆ ಬಯ ಪಡದೆ ಸಂತೋಷದಿಂದ ನಗುನಗುತಾ ಇರುವಂತೆ ಕ್ರಮ ವಹಿಸಲಾಗಿದೆ. ಹಾಗೆ ಜನಸ್ನೇಹಿ ಪೋಲಿಸರು ಎಂಬ ಭಾವನೆಯಿಂದ ನಾವು ಇವತ್ತು ನಮ್ಮನ್ನ ಕಂಡರೆ ಯಾರಿಗೂ ಭಯ ಬರದಂತೆ ಪೋಲಿಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ.ಮಕ್ಕಳ ಜೊತೆಗೆ ಕಾಲ ಕಳೆಯುವಂತೆ ಪಾಲಕರು ಸಮಯಾವಕಾಶವನ್ನು ಮಾಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಏನಾದರು ತೊಂದರೆಗಳಾದರೆ 112 ಗೆ ಕರೆ ಮಾಡಲು ಅಮೀನಗಡ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ ತಿಳಿಸಿದರು.
ಸಂವಿಧಾನದಲ್ಲಿ ನಾಗರಿಕರಿಗೂ ಮೂಲಭೂತ ಹಕ್ಕುಗಳನ್ನು ಅನುಭವಿಸುವ ಅವಕಾಶ ಕೊಟ್ಟಂತೆ ಮಕ್ಕಳಿಗೂ ಕೂಡಾ ಮಕ್ಕಳ ಹಕ್ಕುಗಳನ್ನು ನೀಡಿದೆ.ಬಾಲ್ಯ ವಿವಾಹ ಇದೊಂದು ಅಪರಾಧವಾಗಿದ್ದು ಮಕ್ಕಳು ಶಾಲೆ ಕಲಿಯುವವರೆಗೂ ಕಲಿಸಬೇಕು ಅವರನ್ನ ಬಲವಂತವಾಗಿ ಮದುವೆ ಮಾಡಿಸುವ ಕಾರ್ಯದಲ್ಲಿ ಪಾಲಕರು ತೊಡಗಬಾರದು ಎಂದು ಜಿಲ್ಲಾ ಮಕ್ಕಳ ಸಮಿತಿ ಸದಸ್ಯರಾದ ಎಸ್.ಎಸ್.ಬೆಳಗಲಿ ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಪ್ರೌಢ ಶಾಲೆಯಲ್ಲಿ ಓದುತ್ತಿರುವ, ತಂದೆ ಅಥವಾ ತಾಯಿ ಇಲ್ಲದ ಒಟ್ಟು 16 ಮಕ್ಕಳಿಗೆ ನೊಟಪುಸ್ತಕ ಮತ್ತು ಪೆನ್ ವಿತರಿಸಿ ಮಾತನಾಡಿದ ಇವರು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಪೋಲಿಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಮಿತಿಯವರು ಹೇಳಿದಂತೆ ಮಕ್ಕಳ ಹಕ್ಕುಗಳನ್ನು ಗ್ರಾಮ ಪಂಚಾಯತಿ ಮೂಲಕ ಡಂಗುರ ಸಾರಿಸಲಾಗುವುದು ಹಾಗೂ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಯದಂತೆ ಕ್ರಮ ವಹಿಸಲಾಗುವುದು.ಇಂದಿನ ಮಕ್ಕಳೆ ನಾಳಿನ ನಾಗರಿಕರು ಅವರು ತಮ್ಮ ಹಸನಾದ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ದ ಅಧ್ಯಕ್ಷತೆಯನ್ನ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ದಾಸರ ವಹಿಸಿದ್ದರು, ಹುನಗುಂದ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮಾಧವಾನಂದ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಎಸ್.ಜಿ.ಹಿರೇಮಠ,ಶಿಕ್ಷಕರಾದ ಎಸ್.ಬಿ.ಹೆಳವರ,ವಾಯ್.ಎಸ್.ವಾಲಿಕಾರ,ಬಿ.ಎಸ್.ಕಮತರ,ಆಯ್.ಎಸ್.ಮಂಡಿ,ಗ್ರಾಮ ಪಂಚಾಯತಿ ಸಿಬ್ಬಂದಿ ರಂಗಪ್ಪ ತಳವಾರ, ಅಂಗನವಾಡಿ ಕಾರ್ಯಕರ್ತೆಯರು,ಕರಿಯಪ್ಪ ತೋಟಗೇರ,ಪಾಲಕರು,ಪ್ರೌಢ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕರಾದ ಸಿದ್ದರಾಜ ಕೆಂಧೂಳಿ ಸ್ವಾಗತಿಸಿ ನಿರೂಪಿಸಿದರು,ಬಿ.ಹೆಚ್.ನಾಲತವಾಡ ವಂದಿಸಿದರು.
Be the first to comment