ಗ್ರಾಹಕರ ಡಿಜಿಟಲ್ ಅನುಭವಕ್ಕೆ ಭಾರತ್‌ಗ್ಯಾಸ್ ಏಜೆನ್ಸಿ ಸಜ್ಜು
ದೇವನಹಳ್ಳಿ: ವರ್ಚುವಲ್ ಅಸಿಸ್ಟೆಂಟ್ ಮೂಲಕ ಎಲ್‌ಪಿಜಿ ಮತ್ತು ಇಂಧನ ಸೇವೆ ಪಡೆದುಕೊಂಡಿರುವ ಗ್ರಾಹಕರಿಗೆ ಡಿಜಿಟಲ್ ಅನುಭವಕ್ಕೆ ಭಾರತ್ ಗ್ಯಾಸ್ ಏಜೆನ್ಸಿಗಳು ಸಜ್ಜಾಗಿದೆ ಎಂದು ಭಾರತ್ ಗ್ಯಾಸ್ ದೇವನಹಳ್ಳಿ ಏಜೆನ್ಸಿ ವ್ಯವಸ್ಥಾಪಕ ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಪ್ರಶಾಂತ ನಗರದಲ್ಲಿರುವ ಎಸ್.ಎಲ್.ಎನ್.ಎಸ್ ಭಾರತ್‌ಗ್ಯಾಸ್ ಏಜೆನ್ಸಿಯಲ್ಲಿ ವಾಟ್ಸ್‌ಆಪ್ ಮೂಲಕ ಸಿಲೆಂಡರ್ ಬುಕಿಂಗ್ ಹಾಗೂ ಸಿಲೆಂಡರ್ ಸೋರಿಕೆ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಆಪ್ ಸಹಕಾರಿಯಾಗಲಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಭಾರತ್ ಗ್ಯಾಸ್ ಕಂಪನಿಯು ವೆಬ್‌ಸೈಟ್ ಮತ್ತು ವಾಟ್ಸ್‌ಪ್ ಸಂಖ್ಯೆಯೊಂದಿಗೆ ಸಂಯೋಜಿಸಿರುವ ಆಪ್ ಅನ್ನು ಬಿಡುಗಡೆಗೊಳಿಸಲಾಗಿದೆ. ಎಲ್‌ಪಿಜಿ ಸೇವೆಗಳಾದ ಸಿಲೆಂಡರ್‌ಗಳ ಬುಕಿಂಗ್, ಸೆಲೆಂಡರ್‌ಗಳ ಬೆಲೆ, ಪಾವತಿಯನ್ನು ತಿಳಿದುಕೊಳ್ಳುವುದು. ಬುಕ್ ಮಾಡಿದ ಸಿಲೆಂಡರ್ ವಿತರಣಾ ಸ್ಥಿತಿಗತಿ ಮತ್ತು ಮರುಪೂರ್ಣ ಇತಿಹಾಸ, ವಿತರಕರನ್ನು ಬದಲಾಯಿಸುವುದು. ಮೊಬೈಲ್ ಸೇವೆಯನ್ನು ಅಪ್‌ಡೆಟ್ ಮಾಡುವುದು. ಮೆಕ್ಯಾನಿಕ್ ಸೇವೆಗಳಂತಹ ಭಾರತ್ ಗ್ಯಾಸ್ ವಿತರಕರಿಂದ ಸೇವೆಗಳಿಗೆ ವಿನಂತಿಸಿಕೊಳ್ಳುವುದು. ಡಬಲ್ ಬಾಟಲ್ ಸಂಪರ್ಕವನ್ನು ವಿನಂತಿಸುವುದು (ಸಿಂಗಲ್ ಬಾಟಲ್ ಸಂಪರ್ಕ ಗ್ರಾಹಕರಿಗೆ) ತುರ್ತು ಮತ್ತು ದೂರುಗಳು ಸ್ವೀಕರಿಸುವುದು. ಇಂಧನ ಸೇವೆಗಳಾದ ಹತ್ತಿರದ ಇಂಧನ ಕೇಂದ್ರ ಅಥವಾ ಪಂಪ್ ಪತ್ತೆ ಮಾಡುವುದು ಮತ್ತು ಪಂಪ್‌ಗೆ ದಾರಿ ನಿರ್ದೇಶಿಸುವುದು. ಪೆಟ್ರೋಲ್/ಡಿಸೆಲ್ ಬೆಲೆ ಪಡೆಯುವುದು. ವಿವಿಧ ಸೇವೆಗಳಿಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ. ಬಿಪಿಸಿಎಲ್‌ನ ಎಲ್ಲಾ ವ್ಯವಹಾರಗಳು ಮತ್ತು ಸೇವೆಗಳ ಬಗೆಗಿನ ಎಫ್‌ಎಕ್ಯೂಗಳು ನಿಮ್ಮ ಆಯ್ಕೆಯೊಂದಿಗೆ ವಾಟ್ಸ್‌ಆಪ್ ಸಂಖ್ಯೆ ೧೮೦೦ ೨೨ ೪೩೪೪ಯಲ್ಲಿ ಹೆಲೋ ಎಂದು ಟೈಪ್ ಮಾಡಬೇಕಾಗುತ್ತದೆ. ವೆಬ್‌ಸೈಟ್ ಸಂಖ್ಯೆ: ಗೆ ಚಾಟ್ ಮಾಡಬಹುದು ಎಂದು ಮಾಹಿತಿ ನೀಡಿದರು.
ತಂತ್ರಜ್ಞಾನ ಮುಂದುವರೆದಿದ್ದು, ಗ್ರಾಹಕರಿಗೆ ಅನುಕೂಲವಾಗಲು ಮತ್ತು ಸಮಯ ಉಳಿಸುವ ಸಲುವಾಗಿ ಇಂತಹ ಆಪ್‌ನ್ನು ಬಿಡುಗಡೆಗೊಳಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಗ್ರಾಹಕರಲ್ಲಿ ಮನವಿ ಮಾಡಲಾಗಿದೆ ಎಂದರು.
ಈ ವೇಳೆಯಲ್ಲಿ ಭಾರತ್ ಗ್ಯಾಸ್ ಏಜೆನ್ಸಿಯ ಉಪ ವ್ಯವಸ್ಥಾಪಕ ಮೇಘರಾಜ್, ಸಿಬ್ಬಂದಿಗಳಾದ ಮುನಿರಾಜು, ರತ್ನಮ್ಮ, ಕಿರಣ್, ನಾರಾಯಣಸ್ವಾಮಿ, ಸುಬ್ರಮಣಿ, ಮತ್ತಿತರರು ಇದ್ದರು.
ವರದಿ:ಹೈದರ್ ಸಾಬ್, ಕುಂದಾಣ
Be the first to comment