ಮುಂದಿನ ಎಂ.ಎಲ್.ಎ ಚುನಾವಣೆಯಲ್ಲಿ ದೇಶಪಾಂಡೆ ಮೊದಲು ಗೆದ್ದು ತೋರಿಸಲಿ- ಬಿ.ಜೆ.ಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ್

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿ.ಜೆ.ಪಿ ಯವರು ಗೆಲ್ಲುವುದಿಲ್ಲ ಎಂಬ ದೇಶಪಾಂಡೆ ಹೇಳಿಕೆ ಅವರಿಗೆ ವಯಸ್ಸಾಗಿದೆ ಎನ್ನುವುದನ್ನು ತೋರಿಸುವ ಹೇಳಿಕೆಯಾಗಿದೆ. ದೇಶಪಾಂಡೆ ರವರು ಕಾಂಗ್ರೆಸ್ ಬದ್ಧತೆ ಬಗ್ಗೆ ಮಾತನಾಡುತ್ತಿದ್ದು, ಮಾರ್ಗರೇಟ್ ಆಳ್ವ ರವರನ್ನು ಸೋಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾದ ದೀಪಕ್ ಹೊನ್ನಾವರ ಇವರನ್ನು ಸ್ವತಃ ತಾವೇ ನಿಂತು ಸೋಲಿಸಿದ್ದು ಹಾಗೂ ಇನ್ನೂ ಅನೇಕ ಜನರನ್ನು ಸೋಲಿಸಲು ಪ್ರಯತ್ನಪಟ್ಟಿದ್ದು, ದೇಶಪಾಂಡೆರವರು ಇಷ್ಟು ವರ್ಷ ಜಿಲ್ಲೆಯಲ್ಲಿ ರಾಜಕಾರಣ ಮಾಡಲು ಕಾರಣ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.

CHETAN KENDULI

ಜಿಲ್ಲೆಯಲ್ಲಿ ಯಾರನ್ನೂ ಬೆಳೆಸದೇ ತಾನೊಬ್ಬನೇ ಬೆಳೆಯಬೇಕು ತನ್ನ ನಂತರ ತನ್ನ ಮಗ ಬೆಳೆಯಬೇಕು. ಇದೇ ದೇಶಪಾಂಡೆರವರ ರಾಜಕಾರಣದ ಮನಸ್ಥಿತಿ. ದೇಶಪಾಂಡೆರವರು ಮೂರು ದಶಕಗಳಿಂದ ಜಿಲ್ಲೆಯಲ್ಲಿ ರಾಜಕಾರಣ ರಾಜಕಾರಣವನ್ನು ಮಾಡಿ ಸಾಧಿಸಿದ್ದಾದರೂ ಏನು?. ಜಿಲ್ಲೆಯ ರಿಮೋಟ್ ಕಂಟ್ರೋಲ್‍ನಂತೆ ಮೂರು ದಶಕಗಳಿಂದ ನಡೆಸುತ್ತಿರುವ ದೇಶಪಾಂಡೆರವರಿಗೆ ಈಗ ಹತಾಶೆಯಾಗಿದೆ ಕಾರಣ ಘೋಟ್ನೇಕರ್’ಅವರು ಇವರಿಗೆ ಸವಾಲು, ಇದು ದೇಶಪಾಂಡೆರವರ ಹತಾಷ ಮನೋಭಾವನೆ ತೋರಿಸುತ್ತಿದೆ. ಅವರ ಕ್ಷೇತ್ರದಲ್ಲಿಯೇ ಎಂಎಲ್‍ಸಿ ರಾಜಕಾರಣ ಮಾಡುತ್ತಿರುವುದು,
ಈ ಕಾರಣಕ್ಕಾಗಿ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವ ಮೂಲಕ ತನ್ನ ಹಿರಿತನವನ್ನು ಯೋಚಿಸದೇ ಕಾಲಜ್ಞಾನಿಯಂತೆ ಹೇಳಿಕೆ ನೀಡುವುದು ದೇಶಪಾಂಡೆರವರಂತಹ ಹಿರಿಯ ರಾಜಕಾರಣಿಗೆ ಗೌರವ ತರುವುದಿಲ್ಲ. ಇನ್ನಾದರೂ ದೇಶಪಾಂಡೆರವರು ಸ್ಥಿತಪ್ರಜ್ಞ ರಾಜಕಾರಣಿಯಂತೆ ಕೆಲಸ ಮಾಡುವುದು ಒಳ್ಳೆಯದು.ಯಾರ ಸೋಲು ಮತ್ತು ಗೆಲುವು ದೇಶಪಾಂಡೆರವರ ಕೈಯಲ್ಲಿ ಇಲ್ಲ. ಜಿಲ್ಲೆಯ ಮತದಾರ ಪ್ರಭುಗಳು ಈ ಬಗ್ಗೆ ನಿರ್ಣಯಿಸುತ್ತಾರೆ. ನಾವೆಲ್ಲರೂ ಮತದಾರ ಪ್ರಭುಗಳ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಹೀಗಾಗಿ ಮೊದಲು ದೇಶಪಾಂಡೆರವರು ತಾವು ಗೆದ್ದು, ಆನಂತರ ಇನ್ನೊಬ್ಬರ ಸೋಲಿನ ಬಗ್ಗೆ ಚರ್ಚೆ ಮಾಡಲಿ ಎಂದು ಭಾಜಪಾ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.

Be the first to comment

Leave a Reply

Your email address will not be published.


*