ಕುಮಟಾ ಕಡಲತೀರದಲ್ಲಿ ಪ್ರವೇಶ ನಿಷೇಧ ಜಾರಿ….!!!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ:

CHETAN KENDULI

ಇತ್ತಿಚೆಗೆ ಕಡಲತೀರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಎಲ್ಲಾ ಎಚ್ಚರಿಕೆಯನ್ನು ಮೀರಿ ಕಡಲತೀರಕ್ಕೆ ಇಳಿದು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಜಿಲ್ಲಾಡಳಿತದ ನಿರ್ದೇಶನದಂತೆ ಕುಮಟಾ ತಹಶೀಲ್ದಾರ್‌ ವಿವೇಕ ಶೇಣ್ಣಿ ನಿಷೇದಾಜ್ಞೆ ಜಾರಿಗೊಳಿ, ಓಂಬೀಚ್, ಕುಡ್ಲೆ ಬೀಚ್ , ಹನಿಮೂನ್ ಬೀಚ್,ಹಾಫ್ ಮೂನ್ ಬೀಚ್ ಗೆ ಅಕ್ಟೋಬರ್ 9 ರವರೆಗೆ ತೆರಳುವುದು ನಿಷೇಧ ಮಾಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮುದ್ರ ನೀರಿನಲ್ಲಿ ಇಳಿಯುವುದನ್ನು ತಡೆಯಲು ಸಪ್ಟೆಂಬರ್ 10 ರಿಂದ ಅಕ್ಟೋಬರ್ 9 ರವರೆಗೆ ಒಂದು ತಿಂಗಳು 144 ಸೆಕ್ಷನ್ ನಿಷೇಧಜ್ಞೆ ಜಾರಿ ಮಾಡಿ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿ ಆದ ವಿವೇಕ್ ಶೇಣ್ವಿ ಆದೇಶಿಸಿದ್ದಾರೆ.

ಬಾಡ, ಗುಡೆಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ, ವಿವಿಧ ಕಡಲ ತೀರದಲ್ಲಿ ಪ್ರವಾಸಕ್ಕೆ ಬಂದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

Be the first to comment

Leave a Reply

Your email address will not be published.


*