ಉಗ್ರ ಹೋರಾಟ ನಡೆಸುವುದಾಗಿ ಕರುನಾಡ ವಿಜಯ ಸೇನೆಯ ಎಚ್ಚರಿಕ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಪಟ್ಟಣದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಹೆದ್ದಾರಿಯನ್ನು 45 ಮೀಟರ್ ಅಗಲದ ರಸ್ತೆ ಮಾಡುವುದಾಗಿ ಹೇಳಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇದೀಗ 30 ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಜನರ ಓಡಾಟಕ್ಕೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು. ಈ ಹಿನ್ನೆಲೆಯಲ್ಲಿ ಕರುನಾಡ ವಿಜಯ ಸೇನೆಯು ಈ ಮೊದಲು ಹೇಳಿರುವಂತೆ 45 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಬೇಕು ಇಲ್ಲವಾದರೆ ಸಾರ್ವಜನಿಕರ ಪರವಾಗಿ ಎಲ್ಲಾ ಸಂಘಟನೆಗಳನ್ನು ಸೇರಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.

CHETAN KENDULI

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರುನಾಡ ವಿಜಯ ಸೇನೆಯ ಗೌರವಾಧ್ಯಕ್ಷ ವಿನೋದ ನಾಯ್ಕ ರಾಯಲಕೇರಿ ಹೊನ್ನಾವರ ತಾಲೂಕಿನ ಜನಸಂಖ್ಯೆ ಒಂದೂವರೆ ಲಕ್ಷಕ್ಕೂ ಅಧಿಕವಾಗಿದೆ. ಮುರ್ಡೇಶ್ವರ ಮತ್ತು ಮಂಕಿಯಲ್ಲಿ 45 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ. ಆದರೆ ಹೊನ್ನಾವರದಲ್ಲಿ ಮಾತ್ರ 30 ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಯಾರ ಒತ್ತಡಕ್ಕೆ ಹೀಗೆ ಮಾಡುತ್ತಿದ್ದಾರೆ ಈ ವಿಷಯದಲ್ಲಿ ಅಸಡ್ಡೆ ತೋರಿಸಿದರೆ ನಮ್ಮ ಕರುನಾಡ ವಿಜಯ ಸೇನೆಯು ಹೊನ್ನಾವರ ಜನತೆಯ ಪರವಾಗಿ ನಿಂತು ಎಲ್ಲಾ ಸಂಘಟನೆಗಳನ್ನು ಸೇರಿಸಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ 30 ಮೀಟರ್ ರಸ್ತೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಯಾರ ಒತ್ತಡವಿದೆ. ಸ್ಥಳೀಯ ಎರಡು ಶಾಸಕರು ಇದರ ಬಗ್ಗೆ ಗಮನ ಕೊಡಬೇಕಾಗಿದೆ. ಹೊನ್ನಾವರಕ್ಕೆ ಯಾಕೆ ಮಲತಾಯಿ ಧೋರಣೆ ಮಾಡುತ್ತಿದ್ದೀರಿ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಯಾಕೆ..? ಈ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.ಕರುನಾಡ ವಿಜಯ ಸೇನೆಯ ಜಿಲ್ಲಾ ಸಂಚಾಲಕ ಶ್ರೀರಾಮ್ ಹೊನ್ನಾವರ ಮಾತನಾಡಿ ಹೊನ್ನಾವರಕ್ಕೆ ಎರಡು ಶಾಸಕರಿದ್ದಾರೆ ಅವರಿಗೆ ಯಾಕೆ ಈ ಸಮಸ್ಯೆ ತಿಳಿಯುತ್ತಿಲ್ಲ. ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ರಾಜಕಾರಣಿಗಳ ಒತ್ತಡವಿದೆ ಎಂದು ಹೇಳುತ್ತಾರೆ. ಯಾವ ರಾಜಕಾರಣಿಗಳು ಒತ್ತಡ ತಂದವರು..? ಹೊನ್ನಾವರ ತಾಲೂಕಿನ ಸಮಸ್ತ ಸಂಘಟನೆಗಳನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಹೊನ್ನಾವರ ಕರುನಾಡ ವಿಜಯ ಸೇನೆಯು ಇದಕ್ಕೆ ಸಾರ್ವಜನಿಕರ ಬೆಂಬಲ, ಸಹಕಾರ ಮುಖ್ಯವಾಗಿರುತ್ತದೆ ಆದಷ್ಟು ಜನರು ಈ ಹೋರಾಟಕ್ಕೆ ಸಹಕಾರ ನೀಡಬೇಕು. ಇದು ಸಾರ್ವಜನಿಕರ ಪರವಾಗಿ ನಡೆಸುವ ಹೋರಾಟವಾಗಿದೆ ಎಂದರು.ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಯ್ಕ ಹಡಿಕಲ್, ಯುವ ಘಟಕದ ತಾಲೂಕಾಧ್ಯಕ್ಷ ರಾಘವೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಹುಲ್ ಮೇಸ್ತಾ, ಉಪಾಧ್ಯಕ್ಷ ನಿತಿನ್ ಆಚಾರಿ, ಸಂಚಾಲಕ ಅಲ್ತಾಪ್ ಶೇಖ್, ಮಹೇಶ್ ಮೇಸ್ತ ಹಾಗೂ ಕರುನಾಡ ವಿಜಯ ಸೇನೆಯ ಪದಾಧಿಕಾರಿಗಳು ಉಪಸ್ತಿತರಿದ್ದರು..

Be the first to comment

Leave a Reply

Your email address will not be published.


*