ಜಿಲ್ಲಾ ಸುದ್ದಿಗಳ
ಮಸ್ಕಿ
ಬಳಗಾನೂರ ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿ ಐದುವರ್ಷ ಯಶಸ್ವಿ ಪೂರೈಸಿದರು ಇನ್ನೂ ಯಾವುದೇ ರೀತಿಯ ಪಟ್ಟಣದ ಅಭಿವೃದ್ಧಿಯಾಗಿಲ್ಲ. ಸಾಗರದಿಂದ ಚಮಚನೀರು ಎತ್ತಿ ಕೊಂಡಂತಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದೇ ಇಕ್ಕಟ್ಟಾದ ರಸ್ತೆ ಹಾಗೂ ಅನೇಕ ವಾರ್ಡ್ ಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆನಿರು ಹಾಗೂ ಬಚ್ಚಲು ಮೋರಿನೀರು ತಗ್ಗು ದಿನ್ನೆಯಿಂದ ಕೂಡಿದ ರಸ್ತೆಯ ಮೇಲೆ ನಿಂತು ಸೊಳ್ಳೆಗಳ ತಾಣವಾಗಿದೆ. ಇನ್ನು ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣವಂತೂ ಹೇಳತೀರದು ಪುಂಡಪೋಕರ ಹಾಗೂ ಕುಡಕರತಾಣವಾಗಿ ಜೂಜಾಟ ಅಡ್ಡೆಯಾಗಿದೆ.
ಈ ಬಸ್ ನಿಲ್ದಾಣದಲ್ಲಿ ಬೇರೆ ಊರಿಂದ ಬಂದ ಪ್ರಯಾಣಿಕರಿಗೆ ಕೂಡಲು ಸರಿಯಾದ ಆಸನಗಳಿಲ್ಲ. ಅಲ್ಲದೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಇಲ್ಲ. ಈಗಾಗಲೇ ಪಟ್ಟಣದ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಬಿ. ಮೌನೇಶ ಬಳಗಾನೂರ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಜನಗಣತಿಯ ಪ್ರಕಾರ ಬಳಗಾನೂರ ಪಟ್ಟಣವು ಹದಿನಾರು ಸಾವಿರ ಜನಸಂಖ್ಯೆ ಹೊಂದಿರುವಂತ ಸಿಂಧನೂರು ಮತ್ತು ಈಗಿನ ಮಸ್ಕಿ ತಾಲೂಕಿಗೊಳಪಡುವ ಇದೊಂದು ದೊಡ್ಡಗ್ರಾಮವಾದರೂ ಸಹ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟಿ ಗಟ್ಟಲೆ ಅನುದಾನ ಬಂದರೂ ಸಹಿತ ಅಭಿವೃದ್ಧಿ ಮರೀಚಿಕೆ ಯಾಗಿದೆ.
ಸಂತೆ ಮಾರುಕಟ್ಟೆ ಅತೀಕ್ರಮಣ, ದಿನದಿಂದ ದಿನಕ್ಕೆ ಸಂತೆ ಮೈದಾನವು ಸಣ್ಣ ಪುಟ್ಟ ವ್ಯಾಪಾರದವರು ದಿನನಿತ್ಯ ಸಂತೆ ಮೈದಾನದಲ್ಲಿ ತಮ್ಮ ಮನಸೋ ಇಚ್ಚೆಯಂತೆ ಅಡ್ಡ ದಿಡ್ಡಿಯಾಗಿ ನಾಲ್ಕು ಚಕ್ರದ ತಳ್ಳುಬಂಡಿ ಹಾಗೂ ಇನ್ನಿತರ ವಾಹನಗಳನ್ನು ಅಡ್ಡದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್ ನಿಲ್ಲಲು ತೊಂದರೆಯಾಗಿದೆ ಈ ಕೂಡಲೆ ಸಂಭಂದಿಸಿದ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶಾಸಕರು ಇತ್ತಕಡೆ ಗಮನ ಹರಿಸಿ ಬಳಗಾನೂರ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಬಿ. ಮೌನೇಶ ಬಳಗಾನೂರ ಒತ್ತಾಯಿಸಿದ್ದಾರೆ. ಮತ್ತು ಪಟ್ಟಣದ ಮಸ್ಕಿ ರಸ್ತೆಗೆ ಮುಲ್ಲಾರ ಅಗಸಿಹತ್ತಿರ ಮಹಿಳೆಯರ ಶೌಚಾಲಯ ರಸ್ತೆಯ ಪಕ್ಕದಲ್ಲಿ ಇರುವುದರಿಂದ ಅದಕ್ಕೆ ಯಾವುದೇ ರಕ್ಷಣೆಗೋಡೆ ಇಲ್ಲದಿರುವುದರಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಮಹಿಳೆಯರು ರಸ್ತೆಯ ಮೇಲೆಯೆ ಬಹಿರ್ದೆಸೆ ಮಾಡುವಂತಾಗಿದೆ. ಮತ್ತು ಆ ಸ್ಥಳದಲ್ಲಿ ರಸ್ತೆಯ ಮೇಲೆ ತಿಪ್ಪ ಗುಂಡಿಗಳು ಇರುವುದರಿಂದ ಸಂಚರಿಸುವ ವಾಹನಗಳು ಸರ್ಕಸ್ ಮಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೆ ಇದನ್ನರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಹಾಗೂ ಮುಖ್ಯಾಧಿಕಾರಿಗಳಾದ ತಾವು ಬರುವ ಸಮಯ ಮಧ್ಯಾಹ್ನ 12:00 ಗಂಟೆ ಸಮಯ ನಿಗದಿಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ ಮುಖ್ಯಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕಛೇರಿ ಸಮಯಕ್ಕೆ ಸರಿಯಾಗಿ ಬೆಳಗ್ಗೆ 10:00 ಕ್ಕೆ ಹಾಜರಿರಬೇಕು. ಎಂದು ಬಿ. ಮೌನೇಶ ಬಳಗಾನೂರ ಇವರು ಒತ್ತಾಯಿಸಿದರು.
CHETAN KENDULI
Be the first to comment