ಯೋಜನೆ ಅನುಷ್ಠಾನಕ್ಕೆ ಬ್ಯಾಂಕ್‍ಗಳ ಪಾತ್ರ ಮುಖ್ಯ : ಸಿಇಓ ಟಿ.ಭೂಬಾಲನ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಬ್ಯಾಂಕರ್ಸ್‍ಗಳ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ, ರಪ್ತು ಸಾಲ, ಶಿಕ್ಷಣ, ವಸತಿ, ಸಾಮಾಜಿಕ ಮೂಲಸೌಕರ್ಯ ಇತರೆ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ವಿತರಿಸುವ ಕಾರ್ಯವಾಗಬೇಕು. ಸಾಲ ವಿತರಣೆಗೆ ವಿವಿಧ ಕಾರ್ಯಕ್ರಮ, ಕ್ಯಾಂಪ್‍ಗಳನ್ನು ಆಯೋಜಿಸಿ ವಿತರಿಸಿದಾಗ ಮಾತ್ರ ಯೋಜನೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಎಸಿಪಿ ಅಡಿಯಲ್ಲಿ ಶೇ.15 ರಷ್ಟು ಮಾತ್ರ ಸಾಧನೆಯಾಗಿದ್ದು, ಡಿಸೆಂಬರ ಒಳಗಾಗಿ ಶೇ.100 ರಷ್ಟು ಸಾಧನೆಯಾಗಬೇಕು. ಹೆಚ್ಚಾಗಿ ಕೃಷಿ, ಶಿಕ್ಷಣ ಹಾಗೂ ಉದ್ಯಮಿಗಳಿಗೆ ಆದ್ಯತೆ ನೀಡಿ ಹೆಚ್ಚಿನ ಸಾಲ ವಿತರಣೆಗೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ನೇಕಾರರು ಸಂಕಷ್ಟದಲ್ಲಿದ್ದು, ಮುದ್ರಾ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ವಿತರಣೆಯಾಗಬೇಕು. 300 ಗುರಿಗೆ 339 ಅರ್ಜಿಗಳು ಬಂದಿದ್ದು, ಅದರಲ್ಲಿ 47 ಅರ್ಜಿಗಳಿಗೆ ಮಾತ್ರ ಮಂಜೂರಾತಿ ನೀಡಿದ್ದು, ಇನ್ನು 253 ಬಾಕಿ ಉಳಿದಿದ್ದು, ಬೇಗನೇ ಸಾಲ ಮಂಜೂರು ಮಾಡಲು ತಿಳಿಸಿದರು.

ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ಗೋಪಾಲರೆಡ್ಡಿ ವಿವಿಧ ಯೋಜನೆಗಳಿಗೆ ನೀಡಿದ ಸಾಲ ವಿತರಣೆಯ ಬಗ್ಗೆ ಮಾಹಿತಿ ನೀಡಿದರು. ಭೋವಿ ಅಭಿವೃದ್ದಿ ನಿಗಮದ ಯೋಜನೆಯ 5 ಫಲಾನುಭವಿಗಳ ಅರ್ಜಿಬಂದಿದ್ದು, ಸಾಲ ವಿತರಣೆಗೆ ಕ್ರಮವಹಿಸಲಾಗುತ್ತದೆ. ಕುರಿ ಮತ್ತು ಉಣ್ಣೆ ಅಭಿವೃಧ್ದಿ ನಿಗಮದಿಂದ 6 ಅರ್ಜಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೇಯಿಂದ ಉದ್ಯೋಗಿನಿ ಯೋಜನೆಯಡಿ 1070 ಅರ್ಜಿಗಳ ಪೈಕಿ 63 ಅರ್ಜಿಗಳು ಬಂದಿದ್ದು, 20 ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿದೆ. 26 ಬಾಕಿ ಉಳಿದಿರುತ್ತವೆ ಎಂದರು.

ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜುಲೈ ಅಂತ್ಯಕ್ಕೆ 927.86 ಕೋಟಿ ರೂ. ಮಂಜೂರು ಮಾಡಲಾಗಿದೆ. ಗೃಹ ಸಾಲವನ್ನು ಒಟ್ಟು 2741 ಫಲಾನುಭವಿಗಳಿಗೆ ನೀಡಿದ್ದು, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಒಟ್ಟು 93.24 ಕೋಟಿ ರೂ.ಗಳ ಸಬ್ಸಿಡಿ ಹಣ ನೀಡಲಾಗಿದೆ. ಮತ್ತು ಇತರೆ ಯೋಜನೆಗಳಿಗೆ ಸಾಲ ವಿತರಿಸಿದ ಬಗ್ಗೆ ಸಭೆಗೆ ವಿವರವಾಗಿ ತಿಳಿಸಿಕೊಟ್ಟರು.

ಸಭೆಯಲ್ಲಿ ನಬಾರ್ಡನ ಯಮುನಾ ಪೈ, ಭಾರತೀಯ ಸ್ಟೇಟ್ ಬ್ಯಾಂಕಿನ ರಿಜಿನಲ್ ಮ್ಯಾನೇಜರ ನರಸಿಂಹಮೂರ್ತಿ, ಕೆವಿಜಿ ಬ್ಯಾಂಕ್‍ನ ರಿಜಿನಲ್ ಮ್ಯಾನೇಜರ್ ಶ್ರೀಧರ, ಕೆನರಾ ಬ್ಯಾಂಕಿನ ಮುಖ್ಯ ವ್ಯಸ್ಥಾಪಕ ಶ್ರೀನಿವಾಸ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಬ್ಯಾಂಕ್‍ನ ಪ್ರತಿನಿಧಿಗಳು ಉಪಸ್ಥಿತರಿದ್ದರು.

10 ರೂ.ಗಳ ನಾಣ್ಯ ಚಲಾವಣೆಯಲ್ಲಿದೆ

10 ರೂ.ಗಳ ನಾಣ್ಯ ಚಲಾವಣೆಯಲ್ಲಿದ್ದು, ಜನರು ಆತಂಕ ಪಡದೆ ಚಲಾವಣೆ ಮಾಡಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿ ಚಲಾವಣೆ ಮಾಡಲಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಮಾತ್ರ ಚಲಾವಣೆಯಾಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೇ 10 ರೂ.ಗಳ ನಾಣ್ಯ ಬಳಕೆ ಮಾಡುವಂತೆ ಜಿಲ್ಲಾ ಅಗ್ರಣಿ ಬ್ಯಾಂಕ್‍ನ ವ್ಯವಸ್ಥಾಪಕ ಗೋಪಾಲರೆಡ್ಡಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*