ಮುದ್ದೇಬಿಹಾಳಕ್ಕೆ ನಗರ ಸಾರಿಗೆ ವ್ಯವಸ್ಥೆ ಮಾಡಿ: ಪ್ರಗತಿಪರ ಹೋರಾಟಗಾರರ ಮನವಿ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಈಗಾಗಲೇ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದಂತಹ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ಇದರೊಂದಿಗೆ ಬೃಹತ್ ಜನಸಂಖ್ಯೆಯೊಂದಿಗೆ ಬೆಳೆಯುತ್ತುರುವ ಪಟ್ಟಣದಲ್ಲಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಾರಿಗೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನಂದಿಕೇಶ್ವರಮಠ ಮನವಿ ಸಲ್ಲಿಸಿದ್ದಾರೆ.



ಪಟ್ಟಣಕ್ಕೆ ದಿನನಿತ್ಯವೂ ಸಾರ್ವಜನನಿಕರು ಸರಕಾರಿ ಸೇರಿದಂತೆ ತಮ್ಮ ವ್ಯಯಕ್ತಿ ಕಾರ್ಯಗಳಿಗಾಗಿ ಅಳೆದಾಡುತ್ತಾರೆ. ಆದರೆ ಮುದ್ದೇಬಿಹಾಳ ಪಟ್ಟಣವು ಬೃಹತ ಪ್ರಮಾಣದಲ್ಲಿ ಬೆಳೆದುನಿಂತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ನಿತ್ಯದ ಅಲೇದಾಟ ಅಂದಾಜು ನಾಲ್ಕು ಕಿ.ಮೀ.ನಷ್ಟು ಆಗುತ್ತಿದೆ. ಇನ್ನೂ ಗ್ರಾಮೀಣ ಭಾಗದಿಂದ ದಿನನಿತ್ಯವೂ ತಮ್ಮ ಸರಕಾರಿ ಕೆಲಸಗಳಿಗಾಗಿ ಗ್ರಾಮಸ್ಥರು ಪಟ್ಟಣಕ್ಕೆ ಆಗಮಿಸುತ್ತಾರೆ. ಬಸ್ ನಿಲ್ದಾಣದಿಂದ ಯಾವುದೇ ಸರಕಾರಿ ಕಛೇರಿಗೆ ತೆರಲಲು ಕನಿಷ್ಠ 1.5ಕಿ.ಮೀ. ನಡೆಯಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಣವಿದ್ದವರು ಬಸ್ ನಿಲ್ದಾಣದ ಮೂಲಕ ಆಟೋ ಹಿಡಿದುಕೊಂಡು ಹೋಗುತ್ತಾರೆ. ಅದರೆ ಹಣವಿಲ್ಲದವರ ಪಾಡು ಹೇಳತೀರದು. ಆದ್ದರಿಂದ ಕೂಡಲೇ ಮುದ್ದೇಬಿಹಾಳ ಪಟ್ಟಣದಲ್ಲಿ ನಗರ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಗೇಟ್, ವ್ಹಿ.ಬಿ.ಸಿ ಶಾಲೆ, ಅಂಬೇಡ್ಕರ್ ವೃತ್ತ, ಎಪಿಎಂಸಿ, ದನದ ಬಜಾರ, ಮಾರುತಿ ನಗರ, ಆರ್.ಎಂ.ಎಸ್.ಎ ಶಾಲೆ, ಎಂ.ಜಿ.ವ್ಹಿ.ಸಿ. ಕಾಲೇಜು, ಸಿ.ಬಿ.ಎಸ್.ಸಿ. ಶಾಲೆ, ಪೋಲಿಸ ಠಾಣೆ, ಹೇಮರಡ್ಡಿ ಮಲ್ಲಮ್ಮನ ಗುಡಿ, ಬಿದರಕುಂದಿ ಕ್ರಾಸ್, ಗೋನಾಳ, ಮಾದಿನಾಳ, ಗೆದ್ದಲಮರಿ, ಪಿಲೇಕಮ್ಮ ದೇವಸ್ಥಾನ, ಸರಕಾರಿ ಆಸ್ಪತ್ರೆ, ಹಡಲಗೇರಿ, ಬಿಡಿಸಿಸಿ ಬ್ಯಾಂಕ್, ಮುದ್ನಾಳ, ಕೋಳೂರ ತಾಂಡಾ, ಬನಶಂಕರಿ ಕ್ರಾಸ್, ಆಶ್ರಯ ಕಾಲೋನಿ, ಕುಂಟೋಜಿ, ದ್ಯಾಮವನಕಟ್ಟೆ, ಇಂದಿರಾ ವೃತ್ತ, ಮಹಿಬೂಬ ನಗರ, ಶಿರೋಳ ರಸ್ತೆಗಳಿಗೆ ಪಟ್ಟಣದ ಮದ್ಯಭಾಗದಿಂದ ಅಂದಾಜು 2 ರಿಂದ 7 ಕಿ.ಮೀ. ದೂರವಾಗುತ್ತಿದ್ದು ಇನ್ನೂ ಅನೇಕ ಮಾರ್ಗಗಳಲ್ಲಿ ನಗರ ಸಾರಿಗೆ ಬಸ್ ಒದಗಿಸುವ ಅನುಕೂಲವಿದೆ. ಇದರಿಂದ ನಿತ್ಯವೂ ಸಾರಿಗೆ ಸಂಸ್ಥೆಗೂ ಲಾಭ ವಾಗುತ್ತದೆ. ಅಲ್ಲದೇ ವಿಜಯಪುರ ನಗರ ಹೊರತುಪಡಿಸಿ ನಗರ ಸಾರಿಗೆ ವ್ಯವಸ್ಥೆ ಮಾಡಿದ ಮೊದಲ ನಗರ ನಮ್ಮದಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂತೋಷ ಬಾದರಬಂಡಿ, ಹಣಮಂತ ನಲವಡೆ, ಸಿದ್ದನಗೌಡ ಪಾಟೀಲ, ಸದ್ದಾಂ ಕುಂಟೋಜಿ, ರಾಜು ಬಳ್ಳೊಳ್ಳಿ, ಮಾಂತಗೌಡ ಕಾಶಿನಕುಂಟಿ, ಪುನೀತ ಹಿಪ್ಪರಗಿ, ವಿರೇಶ ಢವಳಗಿ, ಸಾಬೀರ ಬಾಗವಾನ, ಮಹಾಂತೇಶ ಬೂದಿಹಾಳಮಠ, ಶೇಖರ ಢವಳಗಿ ಸೇರಿದಂತೆ ವಿವಿಧ ಪ್ರಗತಿಪರ ಹೋರಾಟ ವೇಧಿಕೆಯ ಸದಸ್ಯರಿದ್ದರು.

 

Be the first to comment

Leave a Reply

Your email address will not be published.


*