ಜಿಲ್ಲಾ ಸುದ್ದಿಗಳು
ಹೊನ್ನಾವರ
ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ. ಅಂತಹ ಪ್ರತಿಭೆಗಳ ಸಾಧನೆಗೆ ತಾನು ಸದಾ ಸಹಕಾರ ನೀಡುವುದಾಗಿ ಮಾಜಿ ಶಾಸಕ ಮಂಕಾಳ ವೈದ್ಯರವರು ತಿಳಿಸಿದರು.
ಅವರು ಸೋಮವಾರ ಹೊನ್ನಾವರ ತಾಲ್ಲೂಕಿನ ನಗರ ಬಸ್ತಿಕೇರಿಯ ಗುತ್ತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ ರಾಜ್ಯದಕ್ಕೆ ಪ್ರಥಮ ರ‍್ಯಾಂಕ ಪಡೆದ ಹಾಗೂ ಇನ್ನೀತರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಲ್ಯಾಪಟಾಪ್ ನೀಡಿ ಅಭಿನಂದಿಸಿದರು.ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹಿಂಜರಿಯುವುದು ಬೇಡ. ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ತಾನು ಸಹಕಾರ ನೀಡಿದ ಅನೇಕ ವಿದ್ಯಾರ್ಥಿಗಳು ಹೊರದೇಶಗಳಲ್ಲು ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಅಭಿವೃದ್ದಿ ಹೊಂದುತ್ತಿರುವುದೆ ನನಗೆ ತುಂಬಾ ಸಂತೋಷದ ಸಂಗತಿ. ಸನ್ಮಾನಿಸಿದ ನಾಲ್ಕು ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚ ತಾನು ನೋಡಿಕೊಳ್ಳುವುದಾಗಿ ತಿಳಿಸಿದರು.
ತಾಲ್ಲೂಕು ನಾಮಧಾರಿ ಸಮಾಜದ ಅಧ್ಯಕ್ಷ ಮಂಜುನಾಥ ನಾಯ್ಕರವರು ಮಾತನಾಡಿ ಮಂಕಾಳ ವೈದ್ಯರವರು ಮಾಜಿ ಶಾಸಕರೆಂದು ಎನಿಸುವುದಿಲ್ಲ. ಅಧಿಕಾರ ಇಲ್ಲದಿದ್ದರು ಅಧಿಕಾರ ಇರುವುದುಕ್ಕಿಂತ ಹೆಚ್ಚಿನ ರೀತಿಯಲ್ಲಿ ಜನರಿಗೆ ಸ್ಪಂದಿಸುತ್ತಾರೆ. ಕ್ಷೇತ್ರದ ಜನತೆಗೆ ಶೈಕ್ಷಣಿಕವಾಗಿ ಅವರು ಸಹಕಾರ ನೀಡುವ ರೀತಿ ಅಭಿನಂದನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕರವರು ಮಾಜಿ ಶಾಸಕ ಮಂಕಾಳ ವೈದ್ಯರವರು ತಮ್ಮ ಕ್ಷೇತ್ರದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆದ ವಿಷಯ ತಿಳಿದು ದೆಹಲಿಯಲ್ಲಿದ್ದರು ಅಲ್ಲಿಂದಲೇ ಅಭಿನಂದಿಸಿದ್ದರು. ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದರು. ಆಪ್ರಕಾರವಾಗಿ ಇಂದು ಅವರೆಲ್ಲರನ್ನು ಅಭಿನಂದಿಸಿ ಲ್ಯಾಪಟಾಪ್ ಗಳನ್ನು ವಿತರಿಸಿದ್ದಾರೆ. ಹಾಗೂ ವಿದ್ಯಾರ್ಥಿಗಳಸಂಪೂರ್ಣವೆಚ್ಚನೋಡಿಕೊಳ್ಳುವುದಾಗಿ ತಿಳಿಸಿದ್ದು ಈ ಭಾಗದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯೆ ಶ್ರಿಮತಿ ಪುಷ್ಪಾ ನಾಯ್ಕ, ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷ ಉಲ್ಲಾಸ ನಾಯ್ಕ, ಮುಖಂಡರಾದ ಕ್ರಷ್ಣ ಗೌಡ, ರಾಜು ನಾಯ್ಕ, ಯೋಗೇಶ ರಾಯ್ಕರ್, ಅಣ್ಣಯ್ಯ ನಾಯ್ಕ, ಈಶ್ವರ ನಾಯ್ಕ, ರಾಘು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿಯಲ್ಲಿ ಈ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ ಪಡೆದ ಕುಮಾರಿ ಭೂಮಿಕಾ ನಾಯ್ಕ, ಕುಮಾರಿ ದೀಕ್ಷಿತಾ ನಾಯ್ಕ, ಶ್ರೀನಿಧಿ ನಾಯ್ಕ, ಹರ್ಷಿತಾ ನಾಯ್ಕ, ಹಾಗೂ ಚಾಕ್‌ಪೀಸ್ ಕಲಾವಿದ ಪ್ರದೀಪ ನಾಯ್ಕರವರನ್ನು ಸನ್ಮಾನಿಸಲಾಯಿತು. ಮಂಕಾಳ ವೈದ್ಯರವರು ಪ್ರದೀಪ ನಾಯ್ಕರವರಿಗೆ ಆರ್ಥಿಕ ಸಹಾಯ ಮಾಡಿದರು. ಹಾಗೂ ವಿಧ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಿದರು . ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳ ಪಾಲಕರು ಹಿತೈಷಿಗಳು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಗುತ್ತಿಕನ್ನಿಕಾ ದೇವಸ್ಥಾನದ ಪರವಾಗಿ ಮಂಕಾಳ ವೈದ್ಯರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
Be the first to comment