ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ ಬಿಜೆಪಿ ಪಕ್ಷ, ಜನರೊಂದಿಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡು ಜನರ ಸೇವೆ ಮಾಡುವ ಭಾಗ್ಯ ನಮ್ಮ ಪಕ್ಷದಲ್ಲಿ ದೊರೆತಿರುವುದು ನಮ್ಮ ಹೆಮ್ಮೆ ಎಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್ ತಿಳಿಸಿದರು.ತಾಲೂಕಿನ ಬಿದಲೂರು ಗ್ರಾಮದಲ್ಲಿ ಆವತಿ ಶಕ್ತಿ ಕೇಂದ್ರದ ಬಿದಲೂರು ಗ್ರಾಮದಲ್ಲಿ ಬಿಜೆಪಿ ರಕ್ತದಾನ ಶಿಬಿರದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ರಕ್ತದಾನ ಮಾಡುವುದು ಎಲ್ಲರಿಗೂ ಸಿಗುವಂತಹದ್ದಲ್ಲ, ಪ್ರತಿಯೊಬ್ಬರು ರಕ್ತದಾನ ಮಾಡಿದರೆ, ಮತ್ತೊಂದು ಜೀವಕ್ಕೆ ಅನುಕೂಲವಾಗುತ್ತದೆ ಎಂದರು.ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ ಎಲ್.ಎನ್.ಅಂಬರೀಶ್ ಮಾತನಾಡಿ, ದೇವನಹಳ್ಳಿ ಮಂಡಲದ ಆವತಿ ಶಕ್ತಿ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಪಕ್ಷ ಇಡೀ ವಿಶ್ವದಲ್ಲಿಯೇ ಮತ್ತೊಂದು ಜೀವವೂ ಸಹ ಮುಖ್ಯ. ಕೋವಿಡ್ ಇರುವ ಸಂದರ್ಭದಲ್ಲಿ ರಕ್ತದ ಅತ್ಯವಶ್ಯಕತೆ ಇರುತ್ತದೆ. ಎಲ್ಲರಿಗೂ ರಕ್ತದ ಕೊರತೆಯಾಗದಂತೆ ಯಾರು ಸಾಯಬಾರದೆಂಬ ಉದ್ದೇಶವನ್ನು ಹೊಂದಿದೆ. ರಕ್ತವನ್ನು ಯಾರು ಸಹ ಸೃಷ್ಟಿಸಲು ಸಾಧ್ಯವಿದಲ್ಲ. ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ, ಪ್ರಾಣದ ಜತೆ ಹೋರಾಡುತ್ತಿರುವ ಹಲವಾರು ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆಗ ದಾನ ಮಾಡಿರುವ ರಕ್ತವನ್ನು ಉಪಯೋಗಿಸಿ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಸುಂದರೇಶ್ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿಯೂ ಸಹ ಪ್ರತಿ ೧೨ ದಿನ ರಕ್ತದಾನ ಶಿಬಿರವನ್ನು ಮಾಡಿಕೊಂಡು ಬರಲಾಗಿದೆ. ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಅತೀ ಹೆಚ್ಚು ಜನ ಸೇರಬಾರದೆಂದು ರಾಜ್ಯದ ಪಾರ್ಟಿಯ ಪ್ರತಿ ಶಕ್ತಿಕೇಂದ್ರಗಳಲ್ಲಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಮೊನ್ನೆ ವಿಜಯಪುರ ಮಹಾಶಕ್ತಿ ಕೇಂದ್ರದಲ್ಲಿ ೧೬೮ಯೂನಿಟ್ ರಕ್ತ ದಾನ, ದೇವನಹಳ್ಳಿ ನಗರದಲ್ಲಿ ೮೭ಯೂನಿಟ್, ಆವತಿ ಮಹಾಶಕ್ತಿ ಕೇಂದ್ರದಲ್ಲಿ ರಕ್ತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ರಕ್ತದಾನದಿಂದ ಒಬ್ಬರಿಂದ ನಾಲ್ಕು ಜನರ ಪ್ರಾಣ ಉಳಿಯುತ್ತದೆ. ದಾನ ಮಾಡಿದವರ ಆರೋಗ್ಯವೂ ಸಹ ಸಮತೋಲನವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ್ ಬಾಬು ಮಾತನಾಡಿ, ದೇವನಹಳ್ಳಿ ತಾಲೂಕು ಬಿಜೆಪಿ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಪಕ್ಷದಲ್ಲಿದ್ದುಕೊಂಡು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಕ್ಕೆ ಮುಂದಾಗುತ್ತಿದ್ದೇವೆ ಎಂದರು.ಈ ವೇಳೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಬೂದಿಗೆರೆ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರವಿಕುಮಾರ್, ಆವತಿ ಶಕ್ತಿಕೇಂದ್ರದ ಅಧ್ಯಕ್ಷ ಬಿದಲೂರು ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಮುನೀಂದ್ರ, ಜಿಲ್ಲಾ ಪ್ರಬುದ್ಧರ ಪ್ರಕೋಷ್ಠ ಅಧ್ಯಕ್ಷ ಸುರೇಶ್, ಮಹಿಳಾ ಪದಾಧಿಕಾರಿಗಳಾದ ನಯನ, ಆಶಾ, ವರಮಹಾಲಕ್ಷ್ಮಿ, ಆವತಿ ಶಕ್ತಿ ಕೇಂದ್ರದ ಬಿಜೆಪಿ ಮುಖಂಡರು ಇತರರು ಇದ್ದರು.
Be the first to comment