ಜಿಪಂ ಸಾಮಾಜಿಕ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು…! ಸಾಮಾಜಿಕ ಉಪ ಅರಣ್ಯ ಇಲಾಖೆಯ ಆವರಣದಲ್ಲಿ 75ನೇ ಸ್ವಾತಂತ್ರೋತ್ಸವ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು

CHETAN KENDULI

ದೇವನಹಳ್ಳಿ:

ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯೀಕರಣಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್.ಬಿ ತಿಳಿಸಿದರು.

ತಾಲೂಕಿನ ಬೊಮ್ಮವಾರ ಗ್ರಾಮದ ಬಳಿಯ ನೂತನ ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಾವು ಮಾಡುವ ಕರ್ತವ್ಯಗಳಲ್ಲಿ ಮೊದಲನೇಯದಾಗಿ ಮಾಡುವುದು ಅದು ದೇಶಕ್ಕೆ ಗೌರವ ಸಮರ್ಪಣೆ, ಇಂದು ಇಡೀ ರಾಷ್ಟ್ರದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ನಮ್ಮ ತ್ರಿವರ್ಣ ರಾಷ್ಟ್ರಧ್ವಜಕ್ಕೆ ಧ್ವಜವಂದನೆ ಸಲ್ಲಿಸಿ, ಮಹಾತ್ಮರಿಗೆ ಗೌರವ ಸಮರ್ಪಿಸುವ ಸುದಿನವಾಗಿದೆ ಎಂದು ಹೇಳಿದರು.

ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು ಕಡೆಗಳಲ್ಲಿ ರೈಂಜ್ ಇದ್ದು, ಹೋಸಕೋಟೆ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕಿನಲ್ಲಿ ರೇಂಜ್ ಇದೆ. ದೇವನಹಳ್ಳಿ ತಾಲೂಕಿಗೆ ರೇಂಜ್ ಇಲ್ಲ. ಸಾಮಾಜಿಕ ಅರಣ್ಯೀಕರಣಗೊಳಿಸಲು ರೈತರಿಗೆ ಮೂರು ಯೋಜನೆಗಳಲ್ಲಿ ಗಿಡಗಳನ್ನು ನೀಡಲು ಬರುತ್ತದೆ. ರಿಯಾಯಿತಿ ದರ, ನರೇಗಾ, ಕೃಷಿ ಅರಣ್ಯ ಉಪಯೋಜನೆಯಲ್ಲಿ ಆಸಕ್ತ ರೈತರಿಗೆ 1 ಎಕರೆಗೆ 100 ಗಿಡಗಳನ್ನು (ಮಹಾಗನಿ, ಹೆಬ್ಬೇವು, ಮಾವು, ಹಲಸು, ಶ್ರೀಗಂಧ, ಇತರೆ ಹಲವು) ಸಸಿಗಳನ್ನು ವಿತರಿಸಲಾಗುತ್ತದೆ. ಹೊರಗಡೆ ಜಾಗಗಳಲ್ಲಿ ಹಸಿರೀಕರಣಗೊಳಿಸಲು ಯೋಜನೆ ರೂಪಿಸಲಾಗಿದ್ದು, ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ರಕ್ಷಣೆ ಮತ್ತು ಅರಣ್ಯೀಕರಣಕ್ಕೆ ಸಾಕಾಗುವಷ್ಟು ಬೀಜದುಂಡೆ, ಸಸಿ ನೆಡುವುದು ಮಾಡಲಾಗುತ್ತದೆ. ಮುಖ್ಯವಾಗಿ ಸಾಮಾಜಿಕ ಅರಣ್ಯೀಕರಣಗೊಳಿಸಲು ಜಿಪಂ ಸಹಯೋಗದಲ್ಲಿ ರಸ್ತೆ ಬದಿ, ಸರಕಾರಿ ಶಾಲಾವರಣ, ಗುಡ್ಡಗಾಡು ಪ್ರದೇಶ, ಇತರೆ ಜಾಗವಿರುವ ಕಡೆಗಳಲ್ಲಿ ಹೆಚ್ಚು ಗಿಡಮರಗಳನ್ನು ಹಾಕುವ ಕಾರ್ಯ ಮಾಡುವಂತಹದ್ದು, ಮುಂದಿನ ದಿನಗಳಲ್ಲಿ ಏನು ೫ ಎಕರೆ ಪ್ರದೇಶ ಸಾಮಾಜಿಕ ಉಪ ಅರಣ್ಯಕ್ಕೆ ನೀಡಿದ್ದಾರೆ. ಅದರಲ್ಲಿ ಸಿಬ್ಬಂದಿಗಳಿಗೆ ವಸತಿ ಗೃಹ, ಹೈಟೇಕ್ ಮಾದರಿಯ ನರ್ಸರಿ ಮಾಡುವ ಉದ್ದೇಶ ಹೊಂದಲಾಗಿದೆ. ಇಲ್ಲಿ ನೀರಿನ ಸಮಸ್ಯೆ ಇದೆ. ಬೋರ್‌ವೆಲ್ ಕೊರೆಸಿ ನೀರು ಸಿಕ್ಕಿದ್ದೇ ಆದಲ್ಲಿ ನರ್ಸರಿ ಮಾಡಲು ಮುಂದಾಗುತ್ತೇವೆ ಎಂದು ಹೇಳಿದರು.

ಈ ವೇಳೆಯಲ್ಲಿ ಸಹಾಯಕ ವಲಯ ಅರಣ್ಯಾಧಿಕಾರಿ ಸರಿತಾ, ಜಿಲ್ಲಾ ವಲಯ ಅರಣ್ಯಾಧಿಕಾರಿ ಚಿದಾನಂದ್, ಕಚೇರಿ ಸಿಬ್ಬಂದಿ ಇದ್ದರು.

Be the first to comment

Leave a Reply

Your email address will not be published.


*