ಜಿಲ್ಲಾ ಸುದ್ದಿಗಳು
SHARANAPPA HELAWAR
ಬಾಗಲಕೋಟೆ:
ಇಳಕಲ್ಲ ತಾಲೂಕಿನ ಗುಡೂರ ಗ್ರಾಮದ ಪಂಚಾಯತಿವತಿಯಿಂದ 14ನೇ ಹಣಕಾಸು ಯೋಜನೆಯ ಅಡಿಯಲ್ಲಿ 30ಜನ ವಿಕಲಚೇತನರಿಗೆ 75ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸವಿನೆನಪಿಗಾಗಿ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಕ್ರಿಯಾಶೀಲ ಉತ್ಸಾಹಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ಅಪೇಕ್ಷೆಯಂತೆ ವಿಕಲ ಚೇತನರು ಸ್ವಾವಲಂಬಿಗಳಾಗಿ, ಆರ್ಥಿಕವಾಗಿ ಸಬಲರಾಗಿ, ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು ಎಂದು ವಿಕಲಚೇತನರಿಗೆ ಹೊಲಿಗೆಯಂತ್ರ ವಿತರಿಸಿದೆ ಎಂದು ಕ್ರಿಯಾಶೀಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ರೇವಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷಣಿ ಶ್ರೀಮತಿ ಚಾಂದಬಿ ಶಫಿಕ್ ಇಟಗಿ, ಉಪಾಧ್ಯಕ್ಷ ಹಣಮಂತ ತೋಟಲಪ್ಪನವರ,ಸದಸ್ಯರಾದ ಅಬ್ದುಲ್ ಸರಕಾಜಿ, ರಮೇಶ ಇಲಾಳ, ತುಕಾರಾಮ ದಾನಿ, ಫಕೀರಪ್ಪ ತೋಟಲಪ್ಪನವರ, ರಫೀಕ್ ಇಟಗಿ, ಮಹಾಂತೇಶ ಲೆಕ್ಕದ ಹಾಗೂ ಇತರರು ಉಪಸ್ಥಿತರಿದ್ದರು.
Be the first to comment