ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಕಾರಹಳ್ಳಿ ಸರಕಾರಿ ಪ್ರೌಢ ಶಾಲೆ ತಾಲೂಕಿನ 30 ಶಾಲೆಗಳ ಆಯ್ಕೆಯಲ್ಲಿ ಒಂದಾಗಿರುವುದು ಶಾಲೆಗೆ ಮತ್ತಷ್ಟು ಕೀರ್ತಿ ಹೆಚ್ಚಾಗಿದೆ ಎಂದು ಕಾರಹಳ್ಳಿ ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕಿ ವೇದಾವತಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಶಾಲಾಡಳಿತ ಮಂಡಳಿ ಮತ್ತು ಕಾರಹಳ್ಳಿ ಗ್ರಾಪಂ ವತಿಯಂದ ೭೫ನೇ ಸ್ವಾತಂತ್ರ್ಯ ದಿನಾಚರಣೆ ವಜ್ರಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಯ ಅಭಿವೃದ್ಧಿಗೆ ಗ್ರಾಪಂ ಸಹಕಾರ ಹೆಚ್ಚು ಇದೆ. ಮುಂದೆಯೂ ಸಹ ಇದೇ ರೀತಿಯ ಸಹಕಾರ ನೀಡುವಂತಾಗಬೇಕು. ಶಾಲೆಯ ಸುತ್ತಲು ತಡೆಗೋಡೆ, ಅರಣ್ಯೀಕರಣ ಮತ್ತು ಶಾಲೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ಗ್ರಾಪಂ ಮತ್ತು ಎಸ್‌ಡಿಎಂಸಿ ಹೆಚ್ಚು ಸಹಕಾರ ನೀಡುತ್ತ ಬಂದಿದೆ. ಈ ಸುಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷೆ ಚಂದ್ರಿಕಾ.ಎನ್.ರವಿ ಮಾತನಾಡಿ, ಮಕ್ಕಳು ಶಾಲೆಯ ಆಸ್ತಿಯಾಗಿದ್ದಾರೆ. ನಾವೆಲ್ಲರೂ ದೇಶದ ಆಸ್ತಿಯಾಗಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ಎಂಬಂತೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗಬೇಕು. ನಮಗೆ ಸ್ವಾತಂತ್ರ್ಯ ತಂದುಕೊಟ್ಟಂತಹ ಹಲವಾರು ಮಹಾಮಣಿಗಳ ಜೀವನ ಚರಿತ್ರೆಯನ್ನು ಮಕ್ಕಳು ಹೆಚ್ಚು ಹೆಚ್ಚು ಓದುವಂತಾಗಬೇಕು ಎಂದು ಸಲಹೆ ಮಾಡಿದರು.
ಈ ವೇಳೆಯಲ್ಲಿ ಬೆಂಗಳೂರು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಲಕ್ಷ್ಮೇಗೌಡ, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮಮುನಿಕೃಷ್ಣಪ್ಪ, ಸದಸ್ಯರಾದ ಆರ್.ಜಯರಾಮ್, ಕೆಂಪಣ್ಣ, ಪದ್ಮಮ್ಮಚಿನ್ನಪ್ಪ, ಸರಳ ಶಶಿಕುಮಾರ್, ಪಿಡಿಒ ಎಸ್.ಕವಿತಾ, ಮುಖಂಡರಾದ ತಾಜ್‌ಪೀರ್, ಚಿಕ್ಕಣ್ಣ, ಜೋಸೇಫ್, ಅಶೋಕ್‌ಕುಮಾರ್, ಎಂಪಿಸಿಎಸ್ ನಿರ್ದೇಶಕ ಮುನೇಗೌಡ, ಎಸ್‌ಡಿಎಂಸಿ ಸದಸ್ಯ ಮಂಜುನಾಥ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಿದ್ದರಾಮ್ ಬೋಸ್ಲೇ, ಸಹ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಇದ್ದರು.
Be the first to comment