ಜಿಲ್ಲಾ ಸುದ್ದಿಗಳು
ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು 21 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಗಲಕೋಟೆ:ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಸಿದ್ದಪ್ಪ ಕುಶೆಪ್ಪ ದಡ್ಡೇನ್ನವರ ಎಂಬುವನಿಗೆ ಸೇರಿದ ತೋಟದಲ್ಲಿ ಬೆಳೆಯಲಾಗಿದ್ದ ಅಕ್ರಮ ಗಾಂಜಾ ಗಿಡಗಳನ್ನು ರಮೇಶಕುಮಾರ ಉಪ ಆಯುಕ್ತರು ಬಾಗಲಕೋಟ ರವರ ಮಾರ್ಗದರ್ಶನ ದಲ್ಲಿ ಶ್ರೀಶೈಲ ಹಿರೇಮಠ ಅಬಕಾರಿ ಉಪ ಅಧೀಕ್ಷಕರು, ಬಾಗಲಕೋಟ ಉಪ ವಿಭಾಗ ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು ಮುಧೋಳ ವಲಯ ಹಾಗೂ ಸಿಬ್ಬಂಧಿಯೊಂದಿಗೆ ಸ್ಥಳೀಯ ಪಂಚಾಯತಿಯ ನೌಕರರೊಂದಿಗೆ ಖಚಿತ ಬಾತ್ಮೀಯ ಮೇರೆಗೆ ಅಬಕಾರಿ ದಾಳಿಮಾಡಿ ಅಕ್ರಮವಾಗಿ ಬೆಳೆಯಲಾಗಿದ್ದ 21 ಹಸಿ ಗಾಂಜಾಗಿಡಗಳನ್ನು (20 ಕಿಲೋಗ್ರಾಂ) ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ದಸ್ತಗಿರಿಮಾಡಿ ಎಲ್ಲ ಮುದ್ದೇಮಾಲನ್ನು ಪಂಚನಾಮೆ ಕ್ರಮಜರುಗಿಸಿ ಜಪ್ತು ಪಡಿಸಿಕೊಂಡು ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
Be the first to comment